ಮೈಸೂರಲ್ಲಿ ರಾಷ್ಟ್ರೀಯ ಮಟ್ಟದ ಲಾನ್ ಟೆನಿಸ್ ಪಂದ್ಯಾವಳಿಗೆ ಚಾಲನೆ
ಮೈಸೂರು

ಮೈಸೂರಲ್ಲಿ ರಾಷ್ಟ್ರೀಯ ಮಟ್ಟದ ಲಾನ್ ಟೆನಿಸ್ ಪಂದ್ಯಾವಳಿಗೆ ಚಾಲನೆ

February 12, 2019

ಮೈಸೂರು: ಮೈಸೂ ರಿನ ಚಾಮರಾಜಪುರಂ ರೈಲ್ವೆ ನಿಲ್ದಾಣದ ಬಳಿಯಿರುವ ಮೈಸೂರು ಟೆನಿಸ್ ಕ್ಲಬ್‍ನ ಟೆನಿಸ್ ಮೈದಾನದಲ್ಲಿ ಐದು ದಿನಗಳ ಅಖಿಲ ಭಾರತ ಮಟ್ಟದ ಟೆನ್ನಿಸ್ ಚಾಂಪಿಯನ್ ಶಿಪ್ ಪಂದ್ಯಾವಳಿಗೆ ಸೋಮವಾರ ಚಾಲನೆ ದೊರೆಯಿತು. ವೃತ್ತಿಪರ ಟೆನಿಸ್ ಆಟಗಾರ ಹಾಗೂ ಹಿರಿಯ ತರಬೇತುದಾರ ಆರ್. ನಾಗರಾಜ್ ಚಾಲನೆ ನೀಡಿದರು.

ದೇಶದ ನಾನಾ ರಾಜ್ಯಗಳಿಂದ ಅಗ್ರ ಶ್ರೇಯಾಂಕದ ಲಾನ್ ಟೆನಿಸ್ ಆಟ ಗಾರರು ಭಾಗವಹಿಸುವ ಈ ಪಂದ್ಯಾವಳಿ ಯನ್ನು ಆಲ್ ಇಂಡಿಯಾ ಟೆನಿಸ್ ಅಸೋಸಿ ಯೇಷನ್ (ಎಐಟಿಎ) ಮತ್ತು ಕರ್ನಾಟಕ ರಾಜ್ಯ ಲಾನ್ ಟೆನಿಸ್ ಅಸೋಸಿಯೇಷನ್ (ಕೆಎಸ್‍ಎಲ್‍ಟಿಎ) ಜತೆಗೂಡಿ ಮೈಸೂರು ಟೆನಿಸ್ ಕ್ಲಬ್ ಮತ್ತು ಆರೆಂಜ್ ಸ್ಪೋಟ್ರ್ಸ್ ಆಯೋಜಿಸಿದೆ. ಅಗ್ರ ಶ್ರೇಯಾಂಕದ ಆಟ ಗಾರರಾದ ಕರ್ನಾಟಕದ ಪ್ರಜ್ವಲ್ ದೇವ್, ನಿಕಿತ್ ರೆಡ್ಡಿ, ಬಿ.ಆರ್.ನಿಕ್ಷೇಪ್, ದೆಹಲಿಯ ಜತಿನ್ ದಾಯಿಯಾ, ಮಧ್ಯಪ್ರದೇಶದ ಯಶ್ ಯಾದವ್ ಇನ್ನಿತರರು ಭಾಗ ವಹಿಸಿ ತಮ್ಮ ಅತ್ಯುತ್ತಮ ಆಟ ಪ್ರದರ್ಶಿ ಸಲಿದ್ದಾರೆ. ವಿಜೇತರಿಗೆ ಒಂದು ಲಕ್ಷ ರೂ. ನಗದು ಬಹುಮಾನವಿದೆ. ಫೆ.15ರಂದು ಪಂದ್ಯಾವಳಿ ಸಮಾರೋಪಗೊಳ್ಳಲಿದ್ದು, ಅಂದು ಅಂತಿಮ ಪಂದ್ಯದ ಬಳಿಕ ನಡೆಯ ಲಿರುವ ಬಹುಮಾನ ವಿತರಣಾ ಕಾರ್ಯ ಕ್ರಮದಲ್ಲಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಇಂದಿನ ಪಂದ್ಯಾವಳಿ ಉದ್ಘಾಟನೆ ವೇಳೆ ಮೈಸೂರು ಟೆನಿಸ್ ಕ್ಲಬ್ ಅಧ್ಯಕ್ಷ ಅಳಗಪ್ಪನ್, ಆರೆಂಜ್ ಸ್ಪೋಟ್ರ್ಸ್ ಸಂಸ್ಥಾಪಕ ರವಿಶಂಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Translate »