ಚಾಮುಂಡೇಶ್ವರಿ ಮೊರೆ ಹೋಗಿದ್ದ ನಿಖಿಲ್, ಸುಮಲತಾ
ಮೈಸೂರು

ಚಾಮುಂಡೇಶ್ವರಿ ಮೊರೆ ಹೋಗಿದ್ದ ನಿಖಿಲ್, ಸುಮಲತಾ

May 24, 2019

ಮೈಸೂರು: ದೇಶದ ಗಮನ ಸೆಳೆದಿದ್ದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪರಸ್ಪರ ಮುಖಾಮುಖಿಯಾಗಿದ್ದ ಪಕ್ಷೇತರ ಅಭ್ಯರ್ಥಿ ಸುಮ ಲತಾ ಅಂಬರೀಶ್ ಹಾಗೂ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮತ ಎಣಿಕೆ ಆರಂಭವಾಗುತ್ತಿದ್ದಂತೆ ಮೈಸೂರಿಗೆ ಆಗಮಿಸಿ, ಚಾಮುಂಡಿಬೆಟ್ಟಕ್ಕೆ ತೆರಳಿ ನಾಡ ದೇವಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ ಗೆಲುವಿಗಾಗಿ ಪ್ರಾರ್ಥಿಸಿದರು. ನಿಖಿಲ್ ಕುಮಾರಸ್ವಾಮಿ, ಸಚಿವ ಜಿ.ಟಿ.ದೇವೇಗೌಡ, ಶಾಸಕ ಸುರೇಶ್‍ಗೌಡ ಅವರೊಂದಿಗೆ ಚಾಮುಂಡಿಬೆಟ್ಟಕ್ಕೆ ತೆರಳಿ ದೇವಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು.

ಬಳಿಕ ಪತ್ರಕರ್ತರೊಂದಿಗೆ ಮಾತನಾಡಿ, ಮಂಡ್ಯದ ಜನತೆ ನನ್ನ ಪರವಾಗಿದ್ದಾರೆ. ಫಲಿತಾಂಶ ಏನೇ ಬಂದರೂ ಅದನ್ನು ನಾನು ಸಮಾನ ಮನಸ್ಥಿತಿಯಿಂದ ಸ್ವೀಕರಿಸು ತ್ತೇನೆ. ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದಿದ್ದರು.

ಸುಮಲತಾ ಭೇಟಿ: ನಿಖಿಲ್ ಚಾಮುಂಡಿಬೆಟ್ಟದಿಂದ ನಿರ್ಗಮಿಸುತ್ತಿದ್ದಂತೆಯೇ ಮೈಸೂರಿನಲ್ಲಿಯೇ ಇದ್ದ ಸುಮ ಲತಾ ಅಂಬರೀಶ್, ಚಿತ್ರನಟ ದೊಡ್ಡಣ್ಣ ಹಾಗೂ ಇನ್ನಿ ತರರೊಂದಿಗೆ ಚಾಮುಂಡಿಬೆಟ್ಟಕ್ಕೆ ಆಗಮಿಸಿ, ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಗೆಲುವಿಗಾಗಿ ಪ್ರಾರ್ಥಿಸಿದರು.

ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮಂಡ್ಯದ ಜನತೆ ನನ್ನ ಕೈ ಬಿಡುವುದಿಲ್ಲ ಎಂಬ ನಂಬಿಕೆ ನನ್ನಲ್ಲಿದೆ. ಮಂಡ್ಯ ಕ್ಷೇತ್ರದಲ್ಲಿ ಅಧಿಕಾರ ಹಾಗೂ ಸ್ವಾಭಿ ಮಾನದ ನಡುವೆ ಚುನಾವಣೆ ನಡೆಯಿತು. ಶತಾ ಯಗತಾಯ ನನ್ನನ್ನು ಸೋಲಿಸಲೇಬೇಕೆಂದು ಏನೆಲ್ಲಾ ಮಾಡಿದರು ಎಂದು ಕ್ಷೇತ್ರದ ಜನತೆಗೆ ತಿಳಿದಿದೆ. ಜನರನ್ನು ದಿಕ್ಕುತಪ್ಪಿಸಲು ನನ್ನದೇ ಹೆಸರಿನ ಮೂವರು ಮಹಿಳೆ ಯರನ್ನು ಕಣಕ್ಕಿಳಿಸಿದ್ದರು. ಕೆಟ್ಟ ಭಾಷೆ ಬಳಸಿ ಟೀಕೆ ಮಾಡಿದರು. ನನ್ನ ಪರವಾಗಿ ಪ್ರಚಾರ ಮಾಡಲು ಬಂದವ ರಿಗೆ ಹೆದರಿಸುವುದಕ್ಕೆ ಏನೆಲ್ಲಾ ಮಾಡಬಹುದೋ, ಅದೆಲ್ಲ ವನ್ನೂ ಮಾಡಿದರು. ಆದರೂ ಕ್ಷೇತ್ರದ ಮತದಾರರು ನನ್ನ ಬೆಂಬಲಿಸಿದ್ದಾರೆ ಎಂಬ ನಂಬಿಕೆಯಿದೆ ಎಂದರು.

ಗೆಲುವು ಖಚಿತವಾದ ಬಳಿಕ ಮಂಡ್ಯಕ್ಕೆ: ಸುಮಲತಾ ಅಂಬರೀಶ್ ದೇವಿಯ ದರ್ಶನ ಪಡೆದ ಬಳಿಕ ಕೃಷ್ಣಮೂರ್ತಿ ಪುರಂ ಬಜ್ಜಣ್ಣಲೇನ್‍ನಲ್ಲಿರುವ ಸಂಬಂಧಿ ಪಿಟೀಲು ಚೌಡಯ್ಯ ಅವರ ಮನೆಗೆ ತೆರಳಿ ಕೆಲಕಾಲ ವಿಶ್ರಾಂತಿ ಪಡೆದರು. ನಂತರ ಮುನ್ನಡೆಯ ಅಂತರ ಹೆಚ್ಚಾಗಿ ಗೆಲುವು ನಿಶ್ಚಿತವಾಗುತ್ತಿದ್ದಂತೆ ಮಂಡ್ಯದತ್ತ ಪ್ರಯಾಣ ಬೆಳೆಸಿದರು.

Translate »