ಪ್ರಧಾನಿ ಮೋದಿ ಹೆಸರಲ್ಲಿ ಚಾಮುಂಡೇಶ್ವರಿಗೆ ಪೂಜೆ
ಮೈಸೂರು

ಪ್ರಧಾನಿ ಮೋದಿ ಹೆಸರಲ್ಲಿ ಚಾಮುಂಡೇಶ್ವರಿಗೆ ಪೂಜೆ

May 24, 2019

ಮೈಸೂರು: ನರೇಂದ್ರ ಮೋದಿ ಅಭಿಮಾನಿ ಬಳಗ ಹಾಗೂ ಡಿಟಿಎಸ್ ಫೌಂಡೇಷನ್ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿ ತಾಯಿ ಚಾಮುಂಡೇ ಶ್ವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ನಂತರ ನರೇಂದ್ರ ಮೋದಿ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿ ಸಾರ್ವ ಜನಿಕರಿಗೆ ಸಿಹಿ ಹಂಚಲಾಯಿತು.ಈ ವೇಳೆ ಮತನಾಡಿದ ಡಿಟಿಎಸ್ ಫೌಂಡೇಷನ್ ಡಿ.ಟಿ.ಪ್ರಕಾಶ್ ಪ್ರಪಂಚದ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಅತ್ಯಧಿಕ ಸೀಟುಗಳನ್ನು ಪಡೆದು ಅತ್ಯದ್ಭುತ ಗೆಲುವು ಸಾಧಿಸಿದ ನರೇಂದ್ರ ಮೋದಿಯವರಿಗೆ ಅಭಿನಂದನೆಗಳು. ಇತಿ ಹಾಸದಲ್ಲೇ ಇಂತಹ ಗೆಲುವನ್ನು ನಿರೀಕ್ಷಿ ಸಿರಲಿಲ್ಲ. ಇದಕ್ಕೆ ಕಾರಣ ನರೇಂದ್ರ ಮೋದಿ ಯವರ ಅಭಿವೃದ್ಧಿಪರ ಚಿಂತನೆ ಮತ್ತು ಭ್ರಷ್ಟಾಚಾರ ರಹಿತ ಆಡಳಿತವನ್ನು ನೋಡಿ ಮತದಾರ ದಾಖಲೆಯ ಮತ ನೀಡಿ ಗೆಲ್ಲಿಸಿದ್ದಾರೆ ಎಂದರು. ಹಾಗೇ ಮೈಸೂರಿ ನಲ್ಲಿ ಅತ್ಯಧಿಕ ಮತಗಳಿಂದ ಜಯ ಗಳಿ ಸಿದ ಸಂಸದ ಪ್ರತಾಪಸಿಂಹ ಅವರಿಗೂ ಅಭಿನಂದನೆಗಳನ್ನು ತಿಳಿಸಿದರು.

ಬಿಜೆಪಿ ಮುಖಂಡರಾದ ಹೆಚ್.ಜಿ. ಗಿರಿಧರ್, ವಿಕ್ರಮ್ ಅಯ್ಯಂಗಾರ್, ಜಯಸಿಂಹ ಶ್ರೀಧರ್, ಕಡಕೊಳ ಜಗ ದೀಶ್, ರಂಗನಾಥ, ಸುಚೀಂದ್ರ, ಅಪೂರ್ವ ಸುರೇಶ್, ಸಂದೇಶ್, ಚಂದ್ರು ಮುಂತಾದವರು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಫಲಿತಾಂಶದ ಕುತೂಹಲ.. ಟಿವಿ, ಮೊಬೈಲ್‍ಗಳ ಮೊರೆ ಹೋದ ಜನತೆ…
ಮೈಸೂರು: ಲೋಕಸಭಾ ಚುನಾ ವಣೆಯ ಮತ ಎಣಿಕೆ ಆರಂಭವಾಗುತ್ತಿದ್ದಂತೆ ಜನರು ತಮ್ಮ ಮನೆ, ಕಚೇರಿಗಳಲ್ಲಿ ಟಿವಿಗೆ ಮೊರೆ ಹೋದರೆ, ಬಹುತೇಕ ಜನರು ಹೊರಗೆ ಮೊಬೈಲ್‍ಗಳಲ್ಲಿ ಟಿವಿ ಸುದ್ದಿಗಳನ್ನು ನೋಡಿ ಕುತೂಹಲದಿಂದ ಫಲಿತಾಂಶ ಎದುರು ನೋಡುತ್ತಿದ್ದರು.

ಮೈಸೂರಿನ ಅಗ್ರಹಾರ, ನಜರ್‍ಬಾದ್, ಉದಯಗಿರಿ, ಹೆಬ್ಬಾಳ, ಇಲವಾಲ, ಶಾರದಾದೇವಿನಗರ, ಕುವೆಂಪುನಗರ, ಅಶೋಕಪುರಂ, ಕೆ.ಜಿ.ಕೊಪ್ಪಲು, ಒಂಟಿಕೊಪ್ಪಲು, ಕುಂಬಾರ ಕೊಪ್ಪಲು ಇನ್ನಿತರ ಕಡೆಗಳಲ್ಲಿ ಜನರು ಇದ್ದಲ್ಲಿಯೇ ಮೊಬೈಲ್ ಗಳ ಮೂಲಕ ಫಲಿತಾಂಶ ನೋಡುತ್ತಿದ್ದರು. ಕೇಂದ್ರ ಗ್ರಾಮಾಂ ತರ ಬಸ್ ನಿಲ್ದಾಣ, ನಗರ ಬಸ್ ನಿಲ್ದಾಣ, ರೈಲು ನಿಲ್ದಾಣ ದಲ್ಲಿಯೂ ಪ್ರಯಾಣಿಕರು ತಮ್ಮ ಮೊಬೈಲ್‍ಗಳ ಮೂಲಕ ಕುತೂಹಲದಿಂದ ಫಲಿತಾಂಶ ನೋಡುತ್ತಿದ್ದದ್ದು ಕಂಡು ಬಂತು. ಆಟೋ ನಿಲ್ದಾಣಗಳಲ್ಲಿ ಆಟೋ ಚಾಲಕರು ಸಹ ಕುತೂಹಲದಿಂದ ಫಲಿತಾಂಶಕ್ಕಾಗಿ ಮೊಬೈಲ್‍ಗಳ ಮೊರೆ ಹೋಗಿದ್ದರು. ಪ್ರತಿ ಹಂತ ದಲ್ಲೂ ಮತ ಎಣಿಕೆಯಲ್ಲಿ ತಮ್ಮ ಪಕ್ಷದ ಅಥವಾ ಅಭ್ಯರ್ಥಿಯ ಮತ ಗಳಿಕೆಯಲ್ಲಿನ ಏರಿಳಿತ ಕಂಡು ಬಂದಾಗ ಕೊಂಚ ಬೇಸರ, ಬಳಿಕ ಹರ್ಷ ವ್ಯಕ್ತಪಡಿಸುತ್ತಿದ್ದದ್ದು ಕಂಡು ಬಂತು.

Translate »