ಬಿಗಿ ಬಂದೋಬಸ್ತ್, ಸಿಸಿ ಕ್ಯಾಮರಾ ಕಣ್ಗಾವಲಿನಡಿ ಮತ ಎಣಿಕೆ
ಮೈಸೂರು

ಬಿಗಿ ಬಂದೋಬಸ್ತ್, ಸಿಸಿ ಕ್ಯಾಮರಾ ಕಣ್ಗಾವಲಿನಡಿ ಮತ ಎಣಿಕೆ

May 24, 2019

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಕೇಂದ್ರವಾದ ಪಡುವಾರಹಳ್ಳಿಯ ಮಹಾ ರಾಣಿ ಕಾಲೇಜು ಕಟ್ಟಡದ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಮಾಡುವ ಮೂಲಕ ಅಭ್ಯರ್ಥಿ, ಏಜೆಂಟರು, ಮಾಧ್ಯಮ ದವರನ್ನು ಹೊರತುಪಡಿಸಿ ಯಾರನ್ನೂ ಅಲ್ಲಿ ಸುಳಿಯದಂತೆ ಪೊಲೀಸರು ಬಿಗಿ ಕ್ರಮವನ್ನು ಕೈಗೊಂಡಿದ್ದರು.

ಮತ ಎಣಿಕೆ ಕೇಂದ್ರದೊಳಗೆ ಹೋಗುವ ಏಜೆಂಟರು, ಪತ್ರಕರ್ತರು ಸೇರಿದಂತೆ ಪ್ರತಿ ಯೊಬ್ಬರನ್ನು ಎರಡು- ಮೂರು ಕಡೆಗಳಲ್ಲಿ ಮೆಟಲ್ ಡಿಟೆಕ್ಟರ್ ಸ್ಕ್ಯಾನ್ ಮೂಲಕ ತಪಾ ಸಣೆಗೊಳಪಡಿಸಿ ಒಳ ಬಿಡಲಾಯಿತು.

ಮೊಬೈಲ್ ಕಮ್ಯಾಂಡ್ ಸೆಂಟರ್: ಹೆಚ್ಚು ಸಾಮಥ್ರ್ಯದ ಸಿಸಿ ಕ್ಯಾಮರಾ ಅಳ ವಡಿಸಿರುವ ಮೊಬೈಲ್ ಕಮ್ಯಾಂಡ್ ಸೆಂಟರ್ ವಾಹನವನ್ನು ಮತ ಎಣಿಕೆ ಕೇಂದ್ರದ ಎದುರು ವಾಲ್ಮೀಕಿ ರಸ್ತೆಯಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಸುಮಾರು 700 ಮೀಟರ್‍ವರೆಗಿನ ಯಾವುದೇ ಚಲನ ವಲನಗಳನ್ನು ಗುರ್ತಿಸುವ ಈ ವಾಹನ, ರಸ್ತೆ ನೇರವಾಗಿದ್ದರೆ ಸುಮಾರು 2 ಕಿ.ಮೀ. ವರೆಗಿನ ಚಲನ ವಲನಗಳನ್ನು ಪತ್ತೆ ಹಚ್ಚುವ ಸಾಧನವನ್ನು ಇದು ಒಳಗೊಂಡಿದೆ.

ಪಾರದರ್ಶಕ ಮತ ಎಣಿಕೆ ಹಿನ್ನೆಲೆ ಯಲ್ಲಿ ಮತ ಎಣಿಕೆ ಕೇಂದ್ರದ ಒಳಗೆ 60ಕ್ಕೂ ಹೆಚ್ಚು ಸಿಸಿ ಕ್ಯಾಮರಾ ಅಳವಡಿಸಲಾಗಿ ದ್ದರಿಂದ ಅದರ ಕಣ್ಗಾವಲಿನಲ್ಲಿ ಸಿಸಿ ಕ್ಯಾಮರಾ ಸಿಬ್ಬಂದಿ ನೇರ ಪ್ರಸಾರದಲ್ಲಿ ಮತ ಎಣಿಕೆ ಕೊಠಡಿ, ಕಾರಿಡಾರ್, ಮತ ಎಣಿಕೆ ಕೇಂದ್ರದ ಹೊರಗಿನ ಎಲ್ಲವನ್ನು ವಿಶೇಷವಾಗಿ ಗಮನಿಸುತ್ತಿದ್ದರು.

ಗುರುತಿನ ಚೀಟಿ ಮರೆತು ಬಂದವರು…
ಮೈಸೂರು: ಬಿಗಿಭದ್ರತೆ ಯಲ್ಲಿ ಮತ ಎಣಿಕಾ ಕಾರ್ಯ ನಡೆದ ಹಿನ್ನೆಲೆಯಲ್ಲಿ ಹಲವು ಏಜೆಂಟರು ಗುರುತಿನ ಚೀಟಿ ಮರೆತು ಬಂದು ಎಣಿಕಾ ಕೇಂದ್ರ ಪ್ರವೇಶಿಸುವ ಅವಕಾಶ ದಿಂದ ವಂಚಿತರಾದರು. ಮೈಸೂರು-ಕೊಡಗು ಜಿಲ್ಲೆಯ ವಿವಿಧ ತಾಲೂಕು ಕೇಂದ್ರಗಳಿಂದ ಅಭ್ಯರ್ಥಿಗಳ ಏಜೆಂಟರು ಎಣಿಕಾ ಕೇಂದ್ರದತ್ತ ಲವಲವಿಕೆಯಿಂದ ಆಗಮಿಸಿದ್ದರು. ಆದರೆ ಹಲವು ಏಜೆಂಟರು ಚುನಾವಣಾ ಆಯೋಗ ನೀಡಿದ್ದ ಗುರುತಿನ ಚೀಟಿ ಮರೆತು ಬಂದಿದ್ದರು. ಕಟ್ಟುನಿಟ್ಟಿನ ಕ್ರಮ ಅನುಸರಿಸುತ್ತಿದ್ದ ಭದ್ರತಾ ಸಿಬ್ಬಂದಿ ಗುರುತಿನ ಚೀಟಿ ಇಲ್ಲದವರನ್ನು ಪ್ರವೇಶ ದ್ವಾರದಲ್ಲಿಯೇ ತಡೆದರು. ಹಲವು ಮಂದಿ ತಾವು ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ಎಂದು ಹೇಳಿ ಪರಿ ಚಯಿಸಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಿದ್ದರೂ ಭದ್ರತಾ ಸಿಬ್ಬಂದಿ ಸೊಪ್ಪು ಹಾಕದೆ ಹೊರಗೆ ಕಳುಹಿಸಿದರು.

Translate »