ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿ ಅಲೆಮಾರಿಗಳ ಅನಿರ್ದಿಷ್ಟಾವಧಿ ಧರಣಿ
ಮೈಸೂರು

ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿ ಅಲೆಮಾರಿಗಳ ಅನಿರ್ದಿಷ್ಟಾವಧಿ ಧರಣಿ

September 24, 2019

ಮೈಸೂರು,ಸೆ.23(ಆರ್‍ಕೆ)- ನೆಲಮನೆ ನಿರ್ಮಿಸಿಕೊಡಬೇಕೆಂದು ಆಗ್ರಹಿಸಿ ಮೈಸೂ ರಿನ ಜಿಲ್ಲಾಧಿಕಾರಿ ಕಚೇರಿ ಬಳಿ ಏಕಲವ್ಯ ನಗರದ ಅಲೆಮಾರಿ ಜನರು ಇಂದಿನಿಂದ ಅನಿರ್ದಿಷ್ಟಾವಧಿ ಪ್ರತಿಭಟನಾ ಧರಣಿ ಆರಂಭಿಸಿದ್ದಾರೆ. ದಲಿತ ಸಂಘರ್ಷ ಸಮಿತಿ ವತಿಯಿಂದ ನಡೆಯುತ್ತಿರುವ ಧರಣಿಯಲ್ಲಿ ನರ್ಮ್ ಯೋಜನೆಯಡಿ ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿ ವತಿ ಯಿಂದ ಮೈಸೂರಿನ ಹಲವೆಡೆ ನಿರ್ಮಿಸಿ ರುವ ಗುಂಪು ಮನೆಗಳ ಕಾಮಗಾರಿ ಕಳಪೆ ಯಿಂದ ಕೂಡಿರುವುದರಿಂದ ಮಳೆ ನೀರು ಸೋರುತ್ತಿದ್ದು, ಆವರಣದಲ್ಲಿ ಮಳೆ ನೀರು ನಿಂತು ಕೆರೆಯಂತಾಗಿ ಸೊಳ್ಳೆಗಳ ತಾಣ ವಾಗಿದೆ ಎಂದು ಪ್ರತಿಭಟನಾಕಾರರು ಆರೋ ಪಿಸುತ್ತಿದ್ದಾರೆ. ಏಕಲವ್ಯನಗರದಲ್ಲಿ ಗುಡಿ ಸಲಿನಲ್ಲಿ ವಾಸಿಸುತ್ತಿರುವ ನಮಗೆ ಶ್ಯಾದನ ಹಳ್ಳಿಯ ಸರ್ಕಾರಿ ಗೋಮಾಳದಲ್ಲಿ ಮನೆ ಗಳನ್ನು (ನೆಲ ಮಹಡಿ) ನಿರ್ಮಿಸಿ ಕೊಟ್ಟು ನೀರು, ವಿದ್ಯುತ್, ಒಳ ಚರಂಡಿ ಸೌಲಭ್ಯ ಒದಗಿಸಬೇಕೆಂದು ಧರಣಿ ನಿರತರು ಆಗ್ರ ಹಿಸುತ್ತಿದ್ದಾರೆ. ಪ್ರತಿಷ್ಠಿತರು, ಪ್ರಭಾವಿಗಳು ಸರ್ಕಾರಿ ಜಾಗವನ್ನು ಒತ್ತುವರಿ ಮಾಡು ತ್ತಿರುವವರಿಂದ ರಕ್ಷಿಸಿ, ಕಾಡು ಕುರುಬರು, ಹಕ್ಕಿಪಿಕ್ಕಿ ಜನಾಂಗ ಹಾಗೂ ಅಲೆಮಾರಿ ಜನರಿಗೆ ಆ ಜಾಗದಲ್ಲಿ ಮನೆ ನಿರ್ಮಿಸಿ ಕೊಡಬೇಕೆಂದು ಅವರು ಒತ್ತಾಯಿಸಿದರು.

ಮಕ್ಕಳು, ಸರಕು-ಸರಂಜಾಮಿನೊಂ ದಿಗೆ ಜಮಾಯಿಸಿ ಧರಣಿಯಲ್ಲಿ ನಿರತರಾಗಿ ರುವ ಅಲೆಮಾರಿ ಜನರು, ಸ್ಥಳದಲ್ಲೇ ಅಡುಗೆ ಮಾಡಿಕೊಂಡು ಪ್ರತಿಭಟನೆ ನಡೆಸುತ್ತಿದ್ದು, ಜಿಲ್ಲಾಡಳಿತ ತಮ್ಮ ಬೇಡಿಕೆ ಈಡೇರಿಸುವವ ರೆಗೂ ತಾವು ಸ್ಥಳದಿಂದ ಕದಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಸ್ಥಳದಲ್ಲಿ ಕುಡಿ ಯುವ ನೀರಿನ ವ್ಯವಸ್ಥೆ ಮಾಡಲಾ ಗಿದ್ದು, ಲಕ್ಷ್ಮೀಪುರಂ ಠಾಣೆ ಪೊಲೀಸರೂ ಸೇರಿ ದಂತೆ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದಾರೆ

Translate »