ಕೆಲಸ ಮಾಡದ ಅಧಿಕಾರಿಗಳ ತಲೆದಂಡ
ಹಾಸನ

ಕೆಲಸ ಮಾಡದ ಅಧಿಕಾರಿಗಳ ತಲೆದಂಡ

June 2, 2018

ಹೊಳೆನರಸೀಪುರ: ಜನಪ್ರತಿ ನಿಧಿಗಳು ಹಾಗೂ ನಾಗರಿಕರು ಸಮಾಜ ದಲ್ಲಿ ತಲೆತಗ್ಗಿಸುವಂತಹ ಕೆಲಸ ಮಾಡಿದ ಅಧಿಕಾರಿಗಳ ತಲೆದಂಡ ಮಾಡಬೇಕಾ ಗುತ್ತದೆ ಎಂದು ಅರಕಲಗೂಡು ಕ್ಷೇತ್ರದ ಶಾಸಕ ಎ.ಟಿ.ರಾಮಸ್ವಾಮಿ ಎಚ್ಚರಿಸಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ಅರಕಲಗೂಡು ವಿಧಾನಸಭಾ ಕ್ಷೇತ್ರದ ಹಳ್ಳಿ ಮೈಸೂರು ಹೋಬಳಿ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತ ನಾಡಿದರು. ಕಳೆದ 5 ವರ್ಷಗಳಿಂದ ಜೆಡ್ಡು ಗಟ್ಟಿದ ಆಡಳಿತ ವ್ಯವಸ್ಥೆಗೆ ಕಾಯಕಲ್ಪ ನೀಡುವ ದೃಷ್ಟಿಯಿಂದ ಈ ಸಭೆಯನ್ನು ಕರೆದಿದ್ದೇನೆ ಎಂದ ಅವರು, ಹಿಡುವಳಿದಾರರು ಮತ್ತು ಭೂ ಮಾಲೀಕರಾಗದಿದ್ದರೂ ಸಹ ಅಂತ ಹವರಿಗೆ ಅಕ್ರಮ ಸಕ್ರಮ ಹೆಸರಿನಲ್ಲಿ ಭೂ ಮಂಜೂರಾತಿ ಮಾಡಬೇಡಿ. ಒಳ್ಳೆಯ ಕೆಲಸ ಮಾಡುವಂತಹ ಅಧಿಕಾರಿಗಳಿಗೆ ಶಾಸಕನಾಗಿ ನಾನು ಬೆನ್ನು ತಟ್ಟಿ ಪ್ರೋತ್ಸಾ ಹಿಸುತ್ತೇನೆ ಎಂದರು.

ಪಿಡಿಓಗಳು ತಮ್ಮ ಕಾಲ ಮಿತಿಯೊಳಗೆ ಮನೆಗಳನ್ನು ಮಂಜೂರಾತಿ ಮಾಡುವ ಸಂದರ್ಭದಲ್ಲಿ ತಾರತಮ್ಯ ಮಾಡುತ್ತಿದ್ದ ದ್ದಾರೆ ಎಂಬ ದೂರು ಗಮನಕ್ಕೆ ಬಂದಿದೆ ಎಂದು ಪಿಡಿಓಗಳನ್ನು ತರಾಟೆ ತೆಗೆದುಕೊಂಡ ರಲ್ಲದೆ, ನೀರಾವರಿ ಇಲಾಖೆಯಲ್ಲಿ ಶೇ.25 ಭಾಗ ಕಾಮಗಾರಿ ಅನುಷ್ಠಾನಗೊಳ್ಳದ ಕಾಮ ಗಾರಿಗೆ ಅನುಮೋದನೆ ನೀಡಿ ಬಿಲ್ ಪಾಸ್ ಮಾಡಿದ್ದಾರೆಂದು ಇಲಾಖೆಯ ಅಧಿಕಾರಿಗಳ ಮೇಲೆ ಹರಿಹಾಯ್ದರು. ಕೂಡಲೇ ಎಚ್ಚೆತ್ತು ಕೊಂಡು ಸರ್ಕಾರದ ಅನುದಾನವನ್ನು ಸಮರ್ಪಕವಾಗಿ ವಿತರಿಸಬೇಕು ಎಂದು ನಿರ್ದೇಶಿಸಿದರು.

ಎಲ್ಲಾ ಇಲಾಖೆಯ ಅಧಿಕಾರಿಗಳು ಮತ್ತು ವಿಕಲಚೇತನರ ಅಭಿವೃದ್ಧಿ ನಿಗಮ, ಸಮಾಜ ಕಲ್ಯಾಣ ಇಲಾಖೆ ದೇವರಾಜು ಅರಸು ಮತ್ತು ಅಂಬೇಡ್ಕರ್ ಅಭಿವೃದ್ಧಿ ನಿಗಮಗಳಿಂದ ಕಡು ಬಡವರಿಗೆ ಸಾಲ ಸೌಲಭ್ಯಗಳು ದೊರೆಯುತ್ತಿದ್ದು, ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸಲು ನೀವು ಶ್ರಮ ವಹಿಸಬೇಕು. ಅಂಗವಿಕಲರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು. ಅವರಿಗೆ ಸಿಗಬೇಕಾದ ಸವಲತ್ತುಗಳನ್ನು ಕೂಡಲೇ ತಲುಪಿಸಲು ಕಾರ್ಯಪ್ರವೃತ್ತರಾಗಿ ಎಂದು ಸಮಾಜ ಕಲ್ಯಾಣ ಅಧಿಕಾರಿಗಳಿಗೆ ಸೂಚನೆ ನೀಡಿದರಲ್ಲದೆ, ಎಲ್ಲಾ ಇಲಾಖಾ ಕಚೇರಿಗಳಲ್ಲಿ ಸೂಚನಾ ಫಲಕದಲ್ಲಿ ರೈತರು ಹಾಗೂ ಸಾರ್ವಜನಿಕರಿಗೆ ಸರ್ಕಾರ ದಿಂದ ನೀಡುವ ಸವಲತ್ತು ಗಳನ್ನು ಸೂಚನಾ ಫಲಕದಲ್ಲಿ ಕೂಡಲೇ ಹಾಕಬೇಕು ಎಂದು ಎಲ್ಲಾ ಅಧಿಕಾರಿ ಗಳಿಗೆ ತಾಕೀತು ಮಾಡಿದರು.

ಪೊಲೀಸ್ ಇಲಾಖೆ ಸಂವಿಧಾನದ ಮುಖ್ಯ ಅಂಗ. ಠಾಣೆಗೆ ಬರುವಂತಹ ಸಾರ್ವಜನಿಕರನ್ನು ಮೊದಲು ಗೌರವ ಯುತವಾಗಿ ನಡೆಸಿಕೊಳ್ಳಿ. ಕಾನೂನಾತ್ಮಕ ವಾಗಿ ಕ್ರಮಕೈಗೊಂಡು ಹೊಸತರಹದ ಬದಲಾವಣೆ ತರಬೇಕೆಂದು ಇಲಾಖೆ ಅಧಿಕಾರಿಗಳಿಗೆ ಸಲಹೆ ನೀಡಿದ ಶಾಸಕರು, ಜೋಡಿಗುಬ್ಬಿಯಿಂದ ಅರಕಲಗೂಡು ಕಡೆಗೆ ಬರುವ ರಸ್ತೆ ಕಾಮಗಾರಿ ಕಳಪೆ ಗುಣ ಮಟ್ಟದಿಂದ ಕೂಡಿದ್ದು, ರಸ್ತೆ ಹಾಳಾಗಲು ಯಾರು ಕಾರಣ ಎಂದು ಪಿಡಬ್ಲ್ಯೂಡಿ ಅಧಿಕಾರಿಗಳಿಗೆ ತರಟೆ ತೆಗೆದುಕೊಂಡರು.
ಹಳ್ಳಿಮೈಸೂರು ಹೋಬಳಿ ಕೇಂದ್ರವಾ ಗಿದ್ದು, ಗ್ರಾಮದಲ್ಲಿನ ಕಸವನ್ನು ಕೆರೆಗೆ ಹಾಕ ಲಾಗುತ್ತಿದೆ ಎಂದು ಗ್ರಾಮಸ್ಥರು ನನ್ನ ಬಳಿ ದೂರಿದ್ದಾರೆ. ಪಿಡಿಓಗಳು ಗ್ರಾಮದ ಸರ್ಕಾರಿ ಜಾಗವನ್ನು ಗುರುತಿಸಿ ಕಸವಿಲೇವಾರಿ ಮಾಡಬೇಕು, ಹೋಬಳಿಯು ಬರಗಾಲ ಪಿಡಿತ ಗ್ರಾಮವಾಗಿದ್ದು, ನೀರಿಗೆ ಹಾಹಾಕಾರ ಉಂಟಾಗಿದೆ. ಸಣ್ಣ ನೀರಾವರಿ ಇಲಾಖೆ ಯಲ್ಲಿ ಬಾರಿ ಅವ್ಯವಹಾರ ನಡೆದಿದ್ದು, ಇದು ಗಮನಕ್ಕೆ ಬಂದಿದೆ. ಮುಂದಾದರೂ ಎಚ್ಚೆತ್ತು ಕೊಂಡು ಕೆಟ್ಟಿರುವ ಬೋರ್‍ವೆಲ್‍ಗಳನ್ನು ಕೂಡಲೇ ದುರಸ್ತಿ ಮಾಡಿಸಿ ಕುಡಿಯುವ ನೀರಿಗೆ ಆದ್ಯತೆ ನೀಡಬೇಕು ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

ಸರ್ಕಾರಿ ಶಾಲೆಗಳನ್ನು ಗಟ್ಟಿಗೊಳಿಸಿ ಅಗತ್ಯ ಸೌಕರ್ಯ, ಉನ್ನತ ಮಟ್ಟದ ಶಿಕ್ಷಣ ನೀಡಬೇಕು. ಗ್ರಾಮಾಂತರ ಪ್ರದೇಶದ ಮಕ್ಕಳು ಖಾಸಗಿ ಶಾಲೆಗಳತ್ತ ಮುಖ ಮಾಡದಂತೆ ಪೋಷಕರ ಸಭೆ ಕರೆದು ತಿಳವಳಿಕೆ ನೀಡಿ ಎಂದ ಶಾಸಕರು, ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ಪುಸ್ತಕ, ಬಟ್ಟೆ, ಶೂ ವಿತರಣೆ ಯಲ್ಲಿ ತಾರತಮ್ಯ ಎಸಗದೆ ಕೆಲಸ ನಿರ್ವಹಿಸಿ ಎಂದು ಶಿಕ್ಷಣ ಇಲಾಖೆಯ ಸಿಆರ್‍ಪಿ, ಬಿಆರ್‍ಸಿಗಳಿಗೆ ಸೂಚಿಸಿದರು.

ಈ ದೇಶದ ಬೆನ್ನೆಲುಬಾದ ರೈತರಿಗೆ ಮುಂಗಾರು ಹಂಗಾಮಿನಲ್ಲಿ ಕೃಷಿ ಇಲಾಖೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರೈತರಿಗೆ ಜಾಗೃತಿ ಮೂಡಿಸಿ. ಬಿತ್ತನೆ ಬೀಜ ರಸಗೊಬ್ಬರ ದಾಸ್ತಾನು ಮಾಡಿ ರೈತರಿಗೆ ಲೋಪವಾಗ ದಂತೆ ವಿತರಿಸಲು ಎಚ್ಚರವಹಿಸಿ ಎಂದು ಕೃಷಿ ಇಲಾಖೆ ಮತ್ತು ಸರ್ಕಾರಿ ಸಂಘಗಳ ಅಧಿಕಾರಿಗಳಿಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ತಾಪಂ ಇಓ ಪ್ರಭು, ಜಿಪಂ ಚಂದ್ರಶೇಖರ್, ಪೋಲಿಸ್ ಇಲಾಖೆ ಅಧಿಕಾರಿಗಳಾದ ರಾಮಲಿಂಗೇಗೌಡ, ವಸಂತ, ಮತ್ತಿತರರು ವೇದಿಕೆಯದ್ದಲ್ಲಿರು. ತಾಲೂಕಿನ ಎಲ್ಲಾ ಇಲಾಖಾಧಿಕಾರಿಗಳು ತಾಪಂ ಸದಸ್ಯರು ಹಾಜರಿದ್ದರು.

Translate »