ನನ್ನಷ್ಟು ಕಷ್ಟ ಅನುಭವಿಸಿದ ಮುಖ್ಯಮಂತ್ರಿ ಯಾರಿಲ್ಲ: ಎಸ್.ಎಂ.ಕೃಷ್ಣ
ಮೈಸೂರು

ನನ್ನಷ್ಟು ಕಷ್ಟ ಅನುಭವಿಸಿದ ಮುಖ್ಯಮಂತ್ರಿ ಯಾರಿಲ್ಲ: ಎಸ್.ಎಂ.ಕೃಷ್ಣ

April 11, 2019

ಮೈಸೂರು: ನನ್ನಷ್ಟು ಕಷ್ಟವನ್ನು ಯಾವೊಬ್ಬ ಮುಖ್ಯ ಮಂತ್ರಿಯೂ ಅನುಭವಿಸಿಲ್ಲ. ಆದರೂ ದೇವರು ನನ್ನನ್ನು ಪರೀಕ್ಷಿಸಲೆಂದೇ ಕಷ್ಟ-ಕಾರ್ಪಣ್ಯ ಕೊಟ್ಟಿದ್ದಾನೆಂದು ಭಾವಿಸಿ, ಎಲ್ಲವನ್ನು ಸ್ವೀಕರಿಸಿದ್ದೆ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ತಮ್ಮ ಆಡಳಿತಾವಧಿ ಯಲ್ಲಿನ ಕಹಿ ನೆನಪನ್ನು ಮೆಲುಕು ಹಾಕಿದರು.

ಮೈಸೂರು ನಜರ್‍ಬಾದ್‍ನ ಗೋಪಾಲ ಗೌಡ ಶಾಂತವೇರಿ ಸ್ಮಾರಕ ಆಸ್ಪತ್ರೆಯಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ `ನ್ಯೂರೋ eóÉೂೀನ್’ ಘಟಕದ ಉದ್ಘಾ ಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಈ ಹಿಂದೆ ರಾಜ್ಯದ ಮುಖ್ಯ ಮಂತ್ರಿಯಾಗಿದ್ದ ಅವಧಿಯಲ್ಲಿ ಹಲವು ಸಂಕಷ್ಟಕ್ಕೆ ಗುರಿಯಾಗಿದ್ದೆ. ಬರಗಾಲ, ಕಾವೇರಿ ವಿವಾದ, ಡಾ.ರಾಜ್‍ಕುಮಾರ್ ಅವರನ್ನು ವೀರಪ್ಪನ್ ಅಪಹರಣ ಮಾಡಿದ್ದ ಪ್ರಕರಣ, ಕಾವೇರಿ ವಿಷಯದಲ್ಲಿ ಸುಪ್ರಿಂ ಕೋರ್ಟ್‍ನಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ಸೇರಿದಂತೆ ಹಲವು ಸಂಕಷ್ಟಗಳು ಎದುರಾದವು. ಎಲ್ಲಾ ಸಂಕಷ್ಟದ ಸಂದರ್ಭ ದಲ್ಲಿಯೂ ಸುತ್ತೂರು ಕ್ಷೇತ್ರದ ಶ್ರೀಗಳನ್ನು ಸಂಪರ್ಕಿಸಿ ನೆರವು ಪಡೆದಿದ್ದೇನೆ. ಯಾವ ಮುಖ್ಯಮಂತ್ರಿಗಳು ನನ್ನಷ್ಟು ಕಷ್ಟ ಅನುಭ ವಿಸಿಲ್ಲ. ಇದನ್ನು ನೆನೆಸಿಕೊಂಡರೆ ಒಮ್ಮೊಮ್ಮೆ ತೀವ್ರ ಬೇಸರವಾಗುತ್ತದೆ. ಭಗವಂತ ನನಗೇ ಏಕೆ ಅಷ್ಟು ಕಷ್ಟಕೊಟ್ಟ ಎನಿಸುತ್ತದೆ. ನನ್ನನ್ನು ಪರೀಕ್ಷಿಸಲೆಂದು ಕಷ್ಟ-ಕಾರ್ಪಣ್ಯ ಕೊಟ್ಟಿರ ಬೇಕೆಂದು ತಿಳಿದು ಎಲ್ಲವನ್ನು ಸ್ವೀಕರಿಸಿದೆ ಎಂದು ವಿಷಾದದಿಂದ ವಿವರಿಸಿದರು.

ಮಠದ ಶಿಷ್ಯವೃಂದ: ಸುತ್ತೂರು ಮಠಕ್ಕೂ ನಮ್ಮ ಕುಟುಂಬಕ್ಕೂ ಅವಿನಾಭಾವ ಸಂಬಂಧವಿದೆ. ನನ್ನ ತಂದೆಯವರು ಸುತ್ತೂರು ಮಠದ ಭಕ್ತರಾಗಿದ್ದರು. ಆ ಪರಂಪರೆಯನ್ನು ನಾನು ಮುಂದು ವರೆಸಿಕೊಂಡು ಬಂದಿದ್ದೇನೆ. ನಾನು ಮುಖ್ಯಮಂತ್ರಿಯಾಗಿದ್ದಾಗ ತೀವ್ರ ಸ್ವರೂಪದ ಸಮಸ್ಯೆ ಎದುರಾದಾಗ ಅವುಗಳನ್ನು ಸಮರ್ಥವಾಗಿ ಎದುರಿಸುವುದನ್ನು ಸುತ್ತೂರು ಕ್ಷೇತ್ರದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರನ್ನು ಸಂಪರ್ಕಿಸಿ ಆಶೀರ್ವಾದ ಪಡೆದು, ಆತ್ಮವಿಶ್ವಾಸ ಹೆಚ್ಚಿಸಿಕೊಂಡೆ ಎಂದರು.

ತವರಿನ ಪ್ರೀತಿ ಇರಬೇಕು: ಉನ್ನತ ವ್ಯಾಸಂಗ, ಸಂಶೋಧನೆಗಾಗಿ ವಿದೇಶಕ್ಕೆ ತೆರಳುವ ವಿದ್ಯಾರ್ಥಿಗಳಲ್ಲಿ ಹಲವರು ವಿದ್ಯಾಭ್ಯಾಸ ಮುಗಿದ ನಂತರವೂ ಸ್ವದೇ ಶಕ್ಕೆ ಹಿಂದಿರುಗದೇ ವಿದೇಶ ಸಂಸ್ಕøತಿಗೆ ಮಾರು ಹೋಗಿ ಅಲ್ಲಿಯೇ ನೆಲೆಸುವುದಕ್ಕೆ ಇಚ್ಛಿಸುತ್ತಿದ್ದಾರೆ. ಆದರೆ ತವರು ದೇಶದ ಮೇಲೆ ಪ್ರೀತಿ ಎಲ್ಲರಿಗೂ ಇರಬೇಕು. ಡಾ.ಶುಶ್ರೂತ್ ಅವರು ಉನ್ನತ ಶಿಕ್ಷಣ ವನ್ನು ಅಮೇರಿಕದಲ್ಲಿ ಪಡೆದರೂ, ಅಲ್ಲಿನ ಸಂಸ್ಕøತಿಗೆ ಮಾರು ಹೋಗದೆ ಸ್ವದೇಶಕ್ಕೆ ಹಿಂದಿರುಗಿ ಮೈಸೂರಿನಲ್ಲಿ ಗೋಪಾಲ ಗೌಡ ಶಾಂತವೇರಿ ಆಸ್ಪತ್ರೆಯಲ್ಲಿ `ನ್ಯೂರೊ ಜೋನ್’ ಹೊಸ ಘಟಕವನ್ನು ಆರಂಭಿಸಿ ದ್ದಾರೆ. ಅಸಾಧಾರಣ ಬುದ್ಧಿಶಕ್ತಿ, ಅಗಾಧ ಶ್ರಮ ಆರಂಭಿಸಲಾಗಿರುವ ನ್ಯೂರೋ ಜೋನ್ ಮೈಸೂರು, ಚಾಮರಾಜನಗರ, ಮಂಡ್ಯ ಜಿಲ್ಲೆಗಳ ಜನರಿಗೆ ನೆರವಾಗಲಿದೆ ಎಂದು ಅಭಿಪ್ರಾಯಪಟ್ಟರು.

3 ವರ್ಷ ಅಮೇರಿಕಾದಲ್ಲಿದ್ದೇ: ನಾನು ಬಹಳ ಹಿಂದೆ 3 ವರ್ಷ ಅಮೇರಿಕಾದಲ್ಲಿ ನೆಲೆಸಿದ್ದೆ. ಆ ದೇಶದ ಅಧ್ಯಕ್ಷರ ಚುನಾವಣೆಯಲ್ಲಿ ಪಾಲ್ಗೊಳ್ಳಬೇಕೆಂಬ ಬಯಕೆ ಹಾಗೂ ಮಹದಾಸೆ ನನ್ನಲ್ಲಿತ್ತು. ಇದಕ್ಕಾಗಿ ಅಮೇರಿಕಾದಲ್ಲಿ ನೆಲೆಸಿದ್ದೆ. 1960ರಲ್ಲಿ ನಡೆದ ಅಮೇರಿಕಾ ಅಧ್ಯಕ್ಷ ಚುನಾವಣೆ ಯಲ್ಲಿ ಜಾನ್ ಎಫ್. ಕೆನಡಿ ಆಯ್ಕೆ ಯಾದ ಪ್ರಕ್ರಿಯೆಯಲ್ಲಿ ಸಕ್ರಿಯನಾಗಿ ಪಾಲ್ಗೊಂಡಿದ್ದ ಸಂಭ್ರಮ ನನ್ನಲ್ಲಿದೆ. ಅದು ಅವಿಸ್ಮರಣೀಯವೂ ಆಗಿದೆ. ಬೇರ್ಯಾವುದೇ ಆಸೆ ನನ್ನಲ್ಲಿಲ್ಲದ ಕಾರಣ ಭಾರತಕ್ಕೆ ವಾಪ ಸ್ಸಾಗಿ ರಾಜಕೀಯ ಕ್ಷೇತ್ರದಲ್ಲಿ ಅತ್ಯುನ್ನತ ಹುದ್ದೆ ಯನ್ನು ನಿಭಾಯಿಸಿದೆ ಎಂದು ತಿಳಿಸಿದರು.

ಬಹುಪರಾಕ್ ಸ್ನೇಹಿತರೇ ಹೆಚ್ಚು: ಗೋಪಾಲಗೌಡ ಶಾಂತವೇರಿ ಸ್ಮಾರಕ ಆಸ್ಪತ್ರೆಯನ್ನು ಸ್ಥಾಪಿಸಿದ ಡಾ.ಹೆಚ್.ಸಿ. ವಿಷ್ಣುಮೂರ್ತಿ ಅವರು ನನ್ನ ಸಂಬಂಧಿಯೂ, ಹಿತೈಷಿಯೂ, ಉತ್ತಮ ಸ್ನೇಹಿತರೂ ಆಗಿದ್ದರು. ನಾನು ಮಾಡಿದ ಒಳ್ಳೆ ಕೆಲಸವನ್ನು ಶ್ಲಾಘಿಸುತ್ತಿದ್ದರು. ಏನಾದರೂ ಕೆಲಸದಲ್ಲಿ ಎಡವಿದರೆ ಎಚ್ಚರಿಸುತ್ತಿದ್ದರು. ಇದ್ದದ್ದನ್ನು ಇದ್ದಂಗೆ ಹೇಳುತ್ತಿದ್ದ ಒಳ್ಳೆ ಸ್ನೇಹಿತರಾಗಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಅಂತಹ ಸ್ನೇಹಿತರು ಸಿಕ್ಕಿಲ್ಲ. ನನ್ನ ಸುತ್ತಲಿರುವ ಸ್ನೇಹಿತರು `ಬಹುಪರಾಕ್’ ಸ್ನೇಹಿತರೇ ಆಗಿದ್ದಾರೆ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಸುತ್ತೂರು ಶ್ರೀ ಕ್ಷೇತ್ರದ ಶ್ರೀ ಶಿವರಾತ್ರೀ ದೇಶಿ ಕೇಂದ್ರ ಸ್ವಾಮೀಜಿ ಅವರು `ನ್ಯೂರೋ eóÉೂೀನ್’ ಘಟಕವನ್ನು ಉದ್ಘಾಟಿಸಿ ಆಶೀರ್ವ ಚನ ನೀಡಿ, ವಿದ್ಯಾಭ್ಯಾಸಕ್ಕೆಂದು ವಿದೇಶಕ್ಕೆ ಹೋಗುವ ಅನೇಕರಲ್ಲಿ ಬಹುತೇಕರು ಹಿಂದಿ ರುಗುವುದಿಲ್ಲ. ಏನಾದರೂ ಕಾರಣ ಹೇಳಿ ನುಣುಚಿಕೊಳ್ಳು ತ್ತಾರೆ. ಅದು ಸರಿಯಿಲ್ಲ, ಇದು ಸರಿಯಿಲ್ಲ ಎಂಬ ಸಬೂಬನ್ನು ಹೇಳುತ್ತಾರೆ.

ತಾಯ್ನಾಡಿನ ಮೇಲೆ ವಾತ್ಸಲ್ಯ ಎಲ್ಲರ ಲ್ಲಿಯೂ ಇರಬೇಕು. ಮಗು ಮಾತೃ ವಾತ್ಸಲ್ಯವನ್ನು ಅನುಭವಿಸುವುದ ಕ್ಕಾಗಿ ತಾಯಿ ಮಡಿಲಿಗೆ ಹೋಗುವ ಮಹತ್ವ ವನ್ನು ಅರಿತುಕೊಳ್ಳಬೇಕು. ಈ ಹಿನ್ನೆಲೆ ಯಲ್ಲಿ ಡಾ.ಶುಶ್ರೂತ್ ಅಮೇರಿಕಾ ದಲ್ಲಿ ತನ್ನ ಅಧ್ಯಯನ ಮುಗಿಯುತ್ತಿದ್ದಂತೆ ಮೈಸೂ ರಿಗೆ ವಾಪಸ್ಸಾಗಿ ನ್ಯೂರೋ eóÉೂೀನ್ ಆರಂಭಿಸಿರುವುದು ಶ್ಲಾಘನೀಯ ಎಂದರು.

ಮಾನಸಿಕ ಖಾಯಿಲೆ ಇಂತವರಿಗಷ್ಟೇ ಬರುತ್ತದೆ ಎಂಬ ನಿಯಮವಿಲ್ಲ. ಯಾರಲ್ಲಿ ಮನೋ ದೌರ್ಬಲ್ಯ ಇರುತ್ತದೋ ಅವರು ಮಾನಸಿಕ ರೋಗಿಗಳಾಗುತ್ತಾರೆ. ಇತ್ತೀಚಿನ ದಿನಗಳಲ್ಲಿ ಮಾನಸಿಕ ರೋಗಿಗಳು, ಖಿನ್ನತೆಗೊಳಗಾದವರ ಸಂಖ್ಯೆ ಹೆಚ್ಚಾಗು ತ್ತಿದೆ ಎಂದು ವಿಷಾದಿಸಿದರಲ್ಲದೆ, ಸುತ್ತ ಮುತ್ತಲಿನ ಜಿಲ್ಲೆಗಳ ಜನರು ನ್ಯೂರೋ eóÉೂೀನ್‍ನ ಸದುಪಯೋಗ ಮಾಡಿಕೊಳ್ಳು ವಂತೆ ಸಲಹೆ ನೀಡಿದರು.

ಇದೇ ವೇಳೆ ಲೇಖಕ ಜಿ.ಆರ್.ಸತ್ಯ ಲಿಂಗರಾಜು ಬರೆದಿರುವ `ವ್ಯಕ್ತಿಯಲ್ಲ ಶಕ್ತಿ- ಡಾ.ಹೆಚ್.ಸಿ.ವಿಷ್ಣುಮೂರ್ತಿ’ ಪುಸ್ತಕ ವನ್ನು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಬಿಡುಗಡೆ ಮಾಡಿದರು. ಕಾರ್ಯ ಕ್ರಮದಲ್ಲಿ ನ್ಯೂರೋeóÉೂೀನ್ ವ್ಯವ ಸ್ಥಾಪಕ ನಿರ್ದೇಶಕ ಡಾ.ಶುಶ್ರೂತ, ಧನ್ಯ ಶುಶ್ರೂತ, ಡಾ.ಹೆಚ್.ವಿ.ಸಂತೃಪ್ತ್, ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Translate »