ಈಜಿಪ್ಟ್, ಟರ್ಕಿಯಿಂದ ಈರುಳ್ಳಿ ಬಂದರೂ ಬೆಲೆ ದುಬಾರಿ
ಮೈಸೂರು

ಈಜಿಪ್ಟ್, ಟರ್ಕಿಯಿಂದ ಈರುಳ್ಳಿ ಬಂದರೂ ಬೆಲೆ ದುಬಾರಿ

December 8, 2019

ಮೈಸೂರು,ಡಿ.7(ಎಂಟಿವೈ)- ಉತ್ತರ ಕರ್ನಾಟಕ ಸೇರಿದಂತೆ ವಿವಿಧೆಡೆ ನೆರೆ ಹಾವಳಿಯಿಂದ ಬೆಳೆ ನಾಶವಾದ ಹಿನ್ನೆಲೆ ಯಲ್ಲಿ ಗಗನಕ್ಕೇರಿರುವ ಈರುಳ್ಳಿ ಬೆಲೆ ಕಡಿಮೆಯಾಗುವ ಲಕ್ಷಣ ಗೋಚರಿಸುತ್ತಿಲ್ಲ. ಟರ್ಕಿಯಿಂದ ಮೈಸೂರಿಗೆ ಈರುಳ್ಳಿ ಬಂದಿದ್ದರೂ, ಗುಣಮಟ್ಟದ ಈರುಳ್ಳಿ ಧಾರಣೆ 150 ರೂ. ಗಡಿದಾಟಿದೆ.

ಮೈಸೂರು ನಗರದಲ್ಲಿ ಪ್ರತಿ ದಿನ 35 ಲೋಡ್ ಈರುಳ್ಳಿಗೆ ಬೇಡಿಕೆಯಿದೆ. ಆದರೆ ಕೇವಲ 10 ಲೋಡ್ ಈರುಳ್ಳಿ ಮಾತ್ರ ಬರುತ್ತಿರುವುದರಿಂದ ದರವೂ ಹೆಚ್ಚುತ್ತಲೇ ಇದೆ. ಎಪಿಎಂಸಿ ಈರುಳ್ಳಿ ಮಂಡಿಯಲ್ಲಿಯೇ ಉತ್ತಮ ಗುಣಮಟ್ಟದ ಈರುಳ್ಳಿಗೆ ಸಗಟು ಬೆಲೆಯೇ ಕೆ.ಜಿಗೆ 140ರಿಂದ 150 ರೂ. ದರವಿದೆ. ದೇವರಾಜ ಮಾರುಕಟ್ಟೆ ಸೇರಿದಂತೆ ವಿವಿಧ ಬಡಾ ವಣೆಗಳÀ ವ್ಯಾಪಾರಿಗಳು ಲಾಭಾಂಶ ಇಟ್ಟು ಕೊಂಡು ಮಾರಾಟ ಮಾಡುವುದರಿಂದ ಚಿಲ್ಲರೆ ಮಾರಾಟದ ಧಾರಣೆ ಇನ್ನೂ ಹೆಚ್ಚು ಇದೆ. ಉತ್ತಮ ಗುಣಮಟ್ಟದ ಈರುಳ್ಳಿ ಬೆಲೆ ಕೆಜಿಗೆ 130-150 ರೂ., ಟರ್ಕಿ, ಈಜಿಪ್ಟ್‍ನಿಂದ ತಂದಿರುವ ಈರುಳ್ಳಿಗೆ ಕೆಜಿಗೆ 140-150 ರೂ., ಉತ್ತರ ಕರ್ನಾಟಕ ಅಜ್ಜಂಪುರ ಕಡೂರು, ಬೀರೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಬಂದಿರುವ ಸಣ್ಣ ಗಾತ್ರ ಈರುಳ್ಳಿ ಕೆಜಿಗೆ 60-80 ರೂ., ಪೂನಾ ದಿಂದ ತಂದಿರುವ ಈರುಳ್ಳಿ ಕೆಜಿಗೆ 80-120 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಎಪಿಎಂಸಿಯಲ್ಲಿ ಒಂದು ಸಾವಿರ ರೂ.ಗೆ 60 ರೂ. ಕಮಿಷನ್, ಈರುಳ್ಳಿ ಸ್ವಚ್ಛಗೊಳಿ ಸುವ ವೆಚ್ಚ, ಸಾಗಾಣಿಕೆ ವೆಚ್ಚ ಹಾಗೂ ಲಾಭದ ಅಂಶ ಎಲ್ಲವನ್ನೂ ಸೇರಿಸಿ ವ್ಯಾಪಾರಿಗಳು ಮಾರಾಟ ಮಾಡುತ್ತಿರುವುದರಿಂದ ಸಾಮಾನ್ಯ ಗಾತ್ರದ ಈರುಳ್ಳಿ ಬೆಲೆಯೂ 100ರ ಗಡಿ ದಾಟಿದೆ. ಮದುವೆ ಹಾಗೂ ಇನ್ನಿತರ ಶುಭ ಸಮಾರಂಭಗಳಲ್ಲಿ ದೊಡ್ಡ ಗಾತ್ರದ ಈರುಳ್ಳಿ ಯನ್ನೇ ಬಳಸುವುದರಿಂದ ಉತ್ತಮ ಗುಣಮಟ್ಟದ ಈರುಳ್ಳಿ ಬೆಲೆ ಕೈ ಸುಟ್ಟು, ಕಣ್ಣೀರು ತರಿಸುವಂತಾಗಿದೆ.

ಇನ್ನೂ 15 ದಿನದವರೆಗೂ ಈರುಳ್ಳಿ ಬೆಲೆ ಕಡಿಮೆ ಆಗುವುದಿಲ್ಲ. ಹೊಸ ವರ್ಷದ ಮೊದಲ ವಾರದ ನಂತರ ದೆಹಲಿ, ಬಾಂಬೆ, ಪೂನಾ, ಚಿತ್ರದುರ್ಗ, ಹುಬ್ಬಳ್ಳಿಯಿಂದ ಈರುಳ್ಳಿ ಮೈಸೂರಿಗೆ ಸರಬರಾಜಾಗಲಿದೆ. ಆ ನಂತರವಷ್ಟೇ ಈರುಳ್ಳಿ ಬೆಲೆ 100 ಗಡಿಯಿಂದ ಕುಸಿಯಲಿದೆ ಎಂದು ಈರುಳ್ಳಿ ವ್ಯಾಪಾರಿಗಳು ಹೇಳಿದ್ದಾರೆ.

ದೇವರಾಜ ಮಾರುಕಟ್ಟೆಯಲ್ಲಿ: ಇಲ್ಲಿನ ಈರುಳ್ಳಿ ಮಳಿಗೆಗಳಲ್ಲಿ ಶನಿವಾರ ಕೆಜಿಗೆ 80, 100, 140, 150 ರೂ. ಧಾರಣೆಯಲ್ಲಿ ಮಾರಾಟವಾಗಿದೆ. ಈರುಳ್ಳಿ ವ್ಯಾಪಾರಿ ರಾಕೇಶ್ `ಮೈಸೂರು ಮಿತ್ರ’ನೊಂದಿಗೆ ಮಾತ ನಾಡಿ, 150 ರೂ. ಗಡಿ ತಲುಪಿದ್ದು, ಇದೇ ಮೊದಲು. ಈ ಹಿಂದೆ ಕೆಜಿಗೆ 80 ರೂ., 100 ರೂ.,ಗೆ ಮಾರಾಟವಾಗಿತ್ತು. ಈಜಿಪ್ಟ್ ಹಾಗೂ ಟರ್ಕಿಯಿಂದ ಬಂದಿರುವ ಈರುಳ್ಳಿ 140ರಿಂದ 150 ರೂ.ಗೆ ಮಾರಾಟ ಮಾಡಲಾಗಿದೆ ಎಂದರು.

ಕೇರಳಕ್ಕೂ ರವಾನೆ: ಮೈಸೂರಿನ ಎಪಿ ಎಂಸಿ ಯಾರ್ಡ್‍ನಲ್ಲಿ 52 ಈರುಳ್ಳಿ ಮಾರಾಟ ಮಳಿಗೆಗಳಿದ್ದು, ಇಲ್ಲಿ ಸಗಟು ವ್ಯಾಪಾರ ವಷ್ಟೇ ನಡೆಯುತ್ತದೆ. ಮೈಸೂರಿನಿಂದಲೇ ಕೇರಳಿಗರೂ ಈರುಳ್ಳಿ ಖರೀದಿಸುವುದ ರಿಂದ ಸಹಜವಾಗಿ ಮೈಸೂರಿನಲ್ಲಿ ಭಾರೀ ಬೇಡಿಕೆ ವ್ಯಕ್ತವಾಗುತ್ತಿದೆ.

Translate »