ವಿದ್ಯುತ್ ಕೇಬಲ್ ಕಳವು ಆರೋಪಿ ಸೆರೆ
ಮೈಸೂರು

ವಿದ್ಯುತ್ ಕೇಬಲ್ ಕಳವು ಆರೋಪಿ ಸೆರೆ

December 9, 2019

ಮೈಸೂರು, ಡಿ.8(ಎಂಕೆ)- ವಿದ್ಯುತ್ ಕೇಬಲ್ ಕಳವು ಮಾಡಿದ್ದ ಖದೀಮನನ್ನು ಬಂಧಿಸಿರುವ ಆಲನಹಳ್ಳಿ ಠಾಣೆ ಪೊಲೀಸರು, ಆರೋಪಿಯಿಂದ 60 ಸಾವಿರ ರೂ.ಮೌಲ್ಯದ 10 ಬಂಡಲ್ ವಿದ್ಯುತ್ ಕೇಬಲ್ ಮತ್ತು ಕೃತ್ಯಕ್ಕೆ ಬಳಸಿದ್ದ ಆಟೋರಿಕ್ಷಾ ವಶಕ್ಕೆ ಪಡೆದಿದ್ದಾರೆ.

ಮೈಸೂರಿನ ರಾಘವೇಂದ್ರ ಬಡಾವಣೆ ನಿವಾಸಿ ಸಾಗರ್(23) ಬಂಧಿತ ಆರೋಪಿ. ಈತ ಡಿ.5 ರಂದು ಯರಗನಹಳ್ಳಿಯಲ್ಲಿ ಹೊಸದಾಗಿ ಕಟ್ಟಲಾಗುತ್ತಿದ್ದ ಮನೆಗೆ ಅಳವಡಿ ಸಲು ಮನೆಯ ಮುಂದೆ ಇಟ್ಟಿದ್ದ ವಿದ್ಯುತ್ ಕೇಬಲ್‍ಗಳನ್ನು ಕಳವು ಮಾಡಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಆಲನಹಳ್ಳಿ ಪೊಲೀಸರು ಶಕ್ತಿನಗರದ ಜಂಕ್ಷನ್ ಬಳಿ ಆರೋಪಿಯನ್ನು ಭಾನುವಾರ ಬಂಧಿಸಿದ್ದಾರೆ.

Translate »