ಮೈಸೂರು: ಸಮಾ ಜದ ಅವ್ಯವಸ್ಥೆಯ ಸಂಕೇತ ಸುಳವಾಡಿ ಪ್ರಕರಣ. ಪರಿಸರ, ಮಣ್ಣು, ಆಹಾರ ಅಷ್ಟೇ ಅಲ್ಲ ಮಾನವನ ಹೊರಗೆ, ಒಳಗೆ ಎಲ್ಲೆಡೆ ವಿಷ ಪ್ರವಾಹವಾಗುತ್ತಿದೆ ಎಂದು ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಹೇಳಿದರು.
ಮಾನಸಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಹಾಗೂ ಸಾಮಾಜಿಕ ನ್ಯಾಯಪರ ವೇದಿಕೆ ಸಂಯುಕ್ತಾಶ್ರಯದಲ್ಲಿ ನಡೆದ ‘ಈ ಸಾವು ನ್ಯಾಯವೇ’ ಸುಳವಾಡಿ ವಿಷ ಪ್ರಸಾ ದಕ್ಕೆ ಬಲಿಯಾದ ಮುಗ್ಧ ಜೀವಗಳಿಗೆ ಶ್ರದ್ಧಾಂಜಲಿ ಕವಿ ಗೋಷ್ಠಿಯಲ್ಲಿ ಮಾತ ನಾಡಿದ ಅವರು, ಶತಶತಮಾನಗಳಿಂದ ಬೆಳೆದು ಬಂದ ಮಾನವೀಯತೆ, ನಾಗರಿಕತೆ, ಸಂಸ್ಕøತಿ ಮರೆಯಾಗಿದೆಯೇನೋ ಎಂಬ ಆತಂಕ ಎದುರಾಗಿದೆ ಎಂದು ತಿಳಿಸಿದರು.
ರಾಜ್ಯಸಭಾ ಸದಸ್ಯ ಡಾ.ಎಲ್.ಹನು ಮಂತಯ್ಯ ಮಾತನಾಡಿ, ಪ್ರಸ್ತುತ ಸಮಾಜ ದಲ್ಲಿ ಸುಳವಾಡಿಯಂತಹ ಅನೇಕ ಪ್ರಕ ರಣಗಳು ನಡೆಯುತ್ತಿದ್ದರೂ, ಮೂಕ ಪ್ರೇಕ್ಷಕರಾಗಿದ್ದೇವೆ. ಅಮಾಯಕರಿಗೆ ನುಡಿ ನಮನ ಸಲ್ಲಿಸಲು, ನೊಂದವರಿಗೆ ಧನಿ ಯಾಗಲು ಈ ಕವಿಗೋಷ್ಠಿ ಪೂರಕ. ಪ್ರಕರಣದ ಸಂದರ್ಭ ನೊಂದವರಿಗೆ ಸಹಾಯ ಮಾಡುವ ಉದ್ದೇಶದಿಂದ ಕೇಂದ್ರ ಸರಕಾರಕ್ಕೆ ಪತ್ರದ ಮೂಲಕ ಮನವಿ ಮಾಡಿದೆ. ಆದರೆ, ಯಾವುದೇ ಸಹಾಯ ದೊರೆತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.
ಸರಕಾರ ನೀಡುವ ಹಣದಿಂದ ಕಳೆದುಕೊಂಡ ವರನ್ನು ತಂದು ಕೊಡಲಾಗದಿದ್ದರೂ, ಅನಾಥರು ಸ್ವಂತ ಬದುಕು ಕಟ್ಟಿಕೊಳ್ಳಲು ಪೂರಕವಾಗಲಿದೆ. ರಾಜಕೀಯ ಸ್ಥಿತಿ ಬದಲಾಗಿದ್ದು, ಗೌಪ್ಯತೆಯೇ ಇಲ್ಲವಾಗಿದೆ. ಪ್ರಜಾಪ್ರಭುತ್ವದಲ್ಲಿ ಆಯ್ಕೆಯಾದವರು ಮಾರಾಟಕ್ಕೆ ನಿಂತಿದ್ದಾರೆ. ಜನರಿಗೆ ಮಾರ್ಗ ದರ್ಶನ ಮಾಡುವ ಧಾರ್ಮಿಕ ಕೇಂದ್ರಗಳು ಇಂದು ಮೌಲ್ಯಗಳನ್ನು ಕಳೆದುಕೊಳ್ಳುತ್ತಿವೆ. ಹೀಗಿದ್ದರೂ ಜನ ಮೌನವಹಿಸಿದ್ದಾರೆ ಎಂದು ವಿಷಾದಿಸಿದರು. ಜವಾಬ್ದಾರಿ ಮರೆತವರ ವಿರುದ್ಧ ದಿಕ್ಕಾರ ಕೂಗಬೇಕು. ಕವಿಗಳು, ವಿದ್ಯಾರ್ಥಿಗಳು ಸಮಾಜವನ್ನು ಎಚ್ಚರಿಸುವ ಕಾರ್ಯವನ್ನು ಮಾಡಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಹೊರೆಯಾಲ ದೊರೆಸ್ವಾಮಿ, ಪ್ರೊ.ಎಂ.ಎಸ್.ಶೇಖರ್, ಡಾ.ಎನ್.ಕೆ.ಲೋಲಾಕ್ಷಿ, ಗುಬ್ಬಿಗೂಡು ರಮೇಶ್ ಮತ್ತಿತರರು ಉಪಸ್ಥಿತರಿದ್ದರು.