ಮೈಸೂರು: ಮೈಸೂರಿನ ಕೃಷ್ಣಮೂರ್ತಿಪುರಂನ ನಿತ್ಯೋತ್ಸವ ಕನ್ವೆನ್ಷನ್ ಸೆಂಟರ್‍ನಲ್ಲಿ ಬಿಎನ್‍ಐ (ಬ್ಯುಸಿ ನೆಸ್ ನೆಟ್‍ವರ್ಕ್ ಇಂಟರ್‍ನ್ಯಾಷನಲ್) ಆಶ್ರಯದಲ್ಲಿ ಭಾನುವಾರ `ಮೈ ಬಿಜ್ ಬುಸಿನೆಸ್ ಎಕ್ಸ್‍ಪೋ-2019’ನಲ್ಲಿ ಮೈ ಬಿಜ್ ಸದಸ್ಯರ ನಾನಾ ಉತ್ಪನ್ನಗಳು ಮತ್ತು ಸೇವೆಗಳ ಪ್ರದರ್ಶನ ನಡೆಯಿತು.
ನೆಮ್ಮದಿ’ ಮನೆ ಪರಿಶೀಲನೆ, ಯೋಜ ನೆಯ ಪರಿಶೀಲನೆ ನಡೆಸಿ ಮನೆಯ ಗುಣ ಮಟ್ಟ ಕುರಿತ ವರದಿ ನೀಡುವುದು, ಸೋಲಾರ್ ಪವರ್ ಎನರ್ಜಿ, ಯುಪಿವಿಸಿ ಬಾಗಿಲು, ಕಿಟಕಿಗಳು,ಧಾತೃ’ ನೇಮ್ ಪ್ಲೇಟ್ಸ್, ವಾಲ್ ಪೇಪರ್, ವಾರ್ಡ್‍ರೋಬ್ ಪ್ರಿಂಟಿಂಗ್, ಗ್ಲಾಸ್ ಪ್ರಿಂಟಿಂಗ್, ಟೈಲ್ಸ್ ಪ್ರಿಂಟಿಂಗ್, ಫೌಂಡೇಷನ್’ ಲಕ್ಸುರಿ ಅಪಾರ್ಟ್ ಮೆಂಟ್‍ಗಳು,ಮೈಕ್ರೋಟೆಕ್ ಸಲ್ಯುಷನ್ಸ್’ ವಾಟರ್ ಹೀಟಿಂಗ್, ವಾಟರ್ ಬೂಸ್ಟಿಂಗ್, ವಾಟರ್ ಪಂಪಿಂಗ್, ವಾಟರ್ ಪ್ಯೂರಿಫಿ ಕೇಷನ್, ವೇಸ್ಟ್ ವಾಟರ್ ಟ್ರೀಟ್‍ಮೆಂಟ್, ಸೋಲಾರ್ ಎನರ್ಜಿ ಸಿಸ್ಟಂ, `ಓಯೋ’ ಬಯೋ ವಾಟರ್ ಟ್ರೀಟ್‍ಮೆಂಟ್ ಕಂಪನಿ ವೇಸ್ಟ್ ವಾಟರ್ ಟ್ರೀಟ್‍ಮೆಂಟ್, ಹೋಮ್ ಸಿನಿಮಾ ಥಿಯೇಟರ್‍ಗಳು, ಲೀಕಿಂಗ್ ರೂಫ್ಸ್‍ನ ವಾಟರ್ ಪ್ರೂಫಿಂಗ್ ಸಂಪು, ಬಾತ್‍ರೂಂ, ಟಾಯ್ಲೆಟ್, ವಾಟರ್ ಟ್ಯಾಂಕ್ ಇನ್ನಿತರೆ, ಟ್ರೆಂಡ್ ಹೌಸಿಂಗ್‍ನಲ್ಲಿ 2 ಮತ್ತು 3 ಬಿಹೆಚ್‍ಕೆ ಅಪಾರ್ಟ್‍ಮೆಂಟ್ ಗಳು, ವಿದ್ಯುತ್ ಉಳಿತಾಯದ ಸೋಲಾರ್, ಮರದ ಕೆತ್ತನೆಯ ಹಾಗೂ ಮರದ ಕರಕುಶಲ ವಸ್ತುಗಳು, ಪೂಜಾ ಮಂಟಪಗಳು, ಇನ್ನಿ ತರ ಆಕರ್ಷಕ ಚಿತ್ರಗಳು, ನಾನಾ ವಿಧದ ಗಿಪ್ಟ್ ವಸ್ತುಗಳು ಸೇರಿದಂತೆ 40ಕ್ಕೂ ಹೆಚ್ಚು ಮಳಿಗೆಗಳು ಆಕರ್ಷಿಸಿದವು.
ಇಡೀ ದಿನ ನಡೆಸ ಮೈ ಬಿeóï ಸಮ್ಮೇ ಳನದಲ್ಲಿ ರಾಜ್ಯ ಮತ್ತು ದೇಶದ ವಿವಿಧ ಕಡೆಗಳಿಂದ 400ಕ್ಕೂ ಹೆಚ್ಚು ಬಿಎನ್‍ಐ ನಿರ್ದೇಶಕರು ಭಾಗವಹಿಸಿದ್ದರು. ಮಧ್ಯಾಹ್ನದ ಬಳಿಕ ಉತ್ತಮ ಪ್ರದರ್ಶನ ನೀಡಿದ ಮೈ ಬಿಜ್ ಸದಸ್ಯ ಉದ್ಯಮಿಗಳಿಗೆ ಪ್ರಶಸ್ತಿ ವಿತರಿ ಸಲಾಯಿತು. ಇದಕ್ಕೂ ಮುನ್ನ ಎನ್.ಆರ್. ಸಮೂಹದ ಅಧ್ಯಕ್ಷ ಆರ್.ಗುರು ದೀಪ ಬೆಳಗಿಸಿ ಮೈ ಬಿಜ್ ಎಕ್ಸ್‍ಪೋ ಸಮ್ಮೇಳನಕ್ಕೆ ಚಾಲನೆ ನೀಡಿದರು. ಮೈಸೂರು ಉದ್ಯಮ ಬೆಳವ ಣಿಗೆಗೆ ಮೈ ಬಿಜ್ ಹೆಚ್ಚು ಉಪಯುಕ್ತವಾಗ ಲಿದೆ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿದ್ದ ಸ್ಟಾರ್ ಆಫ್ ಮೈಸೂರ್’ ಮತ್ತುಮೈಸೂರು ಮಿತ್ರ’ ವ್ಯವಸ್ಥಾಪಕ ಸಂಪಾದಕ ವಿಕ್ರಂ ಮುತ್ತಣ್ಣ ಮಾತನಾಡಿ, ಮಾಧ್ಯಮಗಳಲ್ಲಿ ಬರುವ ಜಾಹಿರಾತಿನಂತೆ ಬಿಎನ್‍ಐ ಸಹ ಉತ್ತಮ ವಿನಿಮಯಕ್ಕೆ ಅನುಕೂಲವಾಗಿದೆ ಎಂದರು.
ಮೈಸೂರಿನ ಭಾರತ್ ಇಂಟರ್‍ನ್ಯಾಷ ನಲ್ ಟ್ರಾವೆಲ್ಸ್ ನಿರ್ದೇಶಕ ಮಹೇಂದ್ರ ಸಾಲಿಯಾನ್, ಬಿಎನ್‍ಐ ಗ್ಲೋಬಲ್ ಮಾಸ್ಟರ್ ಟ್ರೈನರ್ ಮುರಳಿ ಶ್ರೀನಿವಾ ಸನ್, ಮೈಸೂರು ಪ್ರದೇಶದ ಕಾರ್ಯ ನಿರ್ವಾಹಕ ನಿರ್ದೇಶಕಿ ರೇಣು ಶ್ರೀನಿವಾ ಸನ್ ಇನ್ನಿತರರು ಉಪಸ್ಥಿತರಿದ್ದರು.