ನವದೆಹಲಿ: ನಾಳೆಯಿಂದ ಸಂಸತ್ ಬಜೆಟ್ ಅಧಿವೇಶನ ಆರಂಭವಾಗ ಲಿದ್ದು, ಕೇಂದ್ರ ಸರ್ಕಾರದ ಮಹತ್ವದ ಹಾಗೂ ಕೊನೆಯ ಮಧ್ಯಂತರ ಬಜೆಟ್ ಮಂಡನೆಯಾಗುತ್ತಿರುವ ಹಿನ್ನೆಲೆಯಲ್ಲಿ, ಸುಗಮ ಕಲಾಪಕ್ಕಾಗಿ ಸ್ಪೀಕರ್ ಸುಮಿತ್ರಾ ಮಹಾಜನ್ ಸರ್ವಪಕ್ಷ ಸಭೆ ಕರೆದಿದ್ದು, ಅದರಲ್ಲಿ ಎಲ್ಲಾ ಪಕ್ಷಗಳ ಮುಖಂಡರು ಭಾಗವಹಿಸಲಿದ್ದಾರೆ. ನಾಳೆಯಿಂದ ಆರಂಭವಾಗುವ ಬಜೆಟ್ ಅಧಿವೇಶನ ಕೇಂದ್ರ ಸರ್ಕಾರಕ್ಕೆ ಕೊನೆಯ ಹಾಗೂ ನಿರ್ಣಾಯಕವೂ ಆಗಿರುವುದರಿಂದ ಜನರನ್ನು ತನ್ನತ್ತ ಸೆಳೆಯಲು ಮಾಡಬಹುದಾದ ಎಲ್ಲಾ ಕಸರತ್ತುಗಳನ್ನು ಮಾಡುತ್ತಿದೆ. ಕೇಂದ್ರದ ಮಧ್ಯಂತರ ಬಜೆಟ್ ಜನರಿಗೆ ಹೇಗೆ ನೆರವಾಗಲಿದೆ ಎಂಬ ಚರ್ಚೆಗಳು ಎಲ್ಲೆಡೆ ನಡೆಯುತ್ತಿವೆ.
