ಕುಕ್ಕರಹಳ್ಳಿ ಕೆರೆಯಲ್ಲಿ ಅಸ್ವಸ್ಥಗೊಂಡಿದ್ದ ಪೆಲಿಕಾನ್ ಸಾವು: ಹಕ್ಕಿ ಜ್ವರ ಭೀತಿ
ಮೈಸೂರು

ಕುಕ್ಕರಹಳ್ಳಿ ಕೆರೆಯಲ್ಲಿ ಅಸ್ವಸ್ಥಗೊಂಡಿದ್ದ ಪೆಲಿಕಾನ್ ಸಾವು: ಹಕ್ಕಿ ಜ್ವರ ಭೀತಿ

October 27, 2019

ಮೈಸೂರು,ಅ.26(ಎಂಟಿವೈ)- ಮೈಸೂ ರಿನ ಕುಕ್ಕರಹಳ್ಳಿಕೆರೆಯಲ್ಲಿ ಶುಕ್ರವಾರ ಅಸ್ವಸ್ಥಗೊಂಡಿದ್ದ ಸ್ಪಾಟ್‍ಬಿಲ್ಡ್ ಪೆಲಿಕಾನ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಹಕ್ಕಿ ಜ್ವರದ ಭೀತಿ ಎದುರಾಗಿದೆ.

ಪಕ್ಷಿಗಳಲ್ಲಿ ಅದರಲ್ಲೂ ಪೆಲಿಕಾನ್‍ನಲ್ಲಿ ಕಾಣಿಸಿಕೊಳ್ಳುವ ಹಕ್ಕಿಜ್ವರ ಅತ್ಯಂತ ಮಾರಕ ವಾಗಿದ್ದು, ಭಯ ಹುಟ್ಟಿಸಿದೆ. ಪ್ರತಿ ವರ್ಷ ಪಕ್ಷಿಗಳು ವಲಸೆ ಬರುವ ಸಂದರ್ಭ ದಲ್ಲಿಯೇ ಹಕ್ಕಿಜ್ವರ ಕಾಣಿಸಿಕೊಳ್ಳುವುದು ಅರಣ್ಯ ಇಲಾಖೆಗೆ ದೊಡ್ಡ ಸವಾಲಾಗಿದೆ. ಶುಕ್ರವಾರ (ಅ.25) ಮೈಸೂರಿನ ಕುಕ್ಕರ ಹಳ್ಳಿ ಕೆರೆ ದಡದಲ್ಲಿ ಪೆಲಿಕಾನ್ ಅಸ್ವಸ್ಥವಾಗಿ ಬಿದ್ದಿದ್ದು, ವಾಯುವಿಹಾರಿಗಳ ಗಮನಕ್ಕೆ ಬಂದಿತ್ತು. ಹುಣಸೂರು ರಸ್ತೆಗೆ ಹೊಂದಿ ಕೊಂಡಂತಿರುವ ಮೀನುಗಾರಿಕೆ ಸ್ಥಳದ ಬಳಿ ನಿತ್ರಾಣಗೊಂಡು ಬಿದ್ದಿದ್ದ ಪೆಲಿಕಾನ್ ಅನ್ನು ಕೂಡಲೇ ಅರಣ್ಯ ಇಲಾಖೆ ಅನು ಮತಿ ಪಡೆದು ಪೀಪಲ್ ಫಾರ್ ಅನಿಮಲ್ಸ್ ಸಂಸ್ಥೆಗೆ ಕೊಂಡೊಯ್ದು ಚಿಕಿತ್ಸೆ ನೀಡಲಾಗು ತ್ತಿತ್ತು. ಆದರೆ ಇಂದು ಬೆಳಿಗ್ಗೆ ಅದು ಮೃತ ಪಟ್ಟಿದೆ. ಪೆಲಿಕಾನ್ ಮೃತಪಟ್ಟಿರುವ ಹಿನ್ನೆಲೆ ಯಲ್ಲಿ ಪಕ್ಷಿ ಪ್ರೇಮಿಗಳು, ಅರಣ್ಯ ಇಲಾಖೆ ಸಿಬ್ಬಂದಿಗಳಲ್ಲಿ ಆತಂಕ ಮನೆ ಮಾಡಿದೆ.

ಪಕ್ಷಿ ಸಾವಿಗೆ ನಿಖರ ಕಾರಣ ತಿಳಿದಿಲ್ಲ ವಾದರೂ ಹಕ್ಕಿಜ್ವರ ಇರಬಹುದೆಂಬ ಭಯ ಎಲ್ಲರನ್ನೂ ಕಾಡುತ್ತಿದೆ. ಅಲ್ಲದೆ ಕುಕ್ಕರ ಹಳ್ಳಿಕೆರೆ, ಕಾರಂಜಿಕೆರೆ, ಲಿಂಗಾಂಬುದಿಕೆರೆ, ರಂಗನತಿಟ್ಟು ಪಕ್ಷಿಧಾಮ, ಕೊಕ್ಕರೆಬೆಳ್ಳೂರು, ಮೈಸೂರು ಮೃಗಾಲಯದಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಪಕ್ಷಿಗಳ ವಲಸೆ ಈಗಷ್ಟೇ ಆರಂಭವಾಗಿರುವುದರಿಂದ ಪೆಲಿಕಾನ್ ಸಾವಿನ ಪ್ರಕರಣ ಅರಣ್ಯ ಇಲಾಖೆ ಸಿಬ್ಬಂದಿ ಗಳ ನಿದ್ದೆಗೆಡಿಸಿದೆ. ಅಲ್ಲದೆ ಕೆರೆ ಹಾಗೂ ಮೃಗಾಲಯದಲ್ಲಿ ಪಕ್ಷಿಗಳ ಚಲನವಲನ ಗಮನಿಸಲು ಹೆಚ್ಚುವರಿ ಗಸ್ತು ತಿರುಗುವ ವ್ಯವಸ್ಥೆ ಕಲ್ಪಿಸಲಾಗಿದೆ. ಪೆಲಿಕಾನ್‍ಗೆ ಚಿಕಿತ್ಸೆ ನೀಡಿದ ಸರ್ಕಾರಿ ಪಶುವೈದ್ಯ ಡಾ.ವಸೀಮ್ ಮಿರ್ಜಾ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಪೀಪಲ್ ಫಾರ್ ಅನಿಮಲ್ ಸಂಸ್ಥೆಯಿಂದ ಶುಕ್ರವಾರ ಸಂಜೆ ಕರೆ ಮಾಡಿ, ಅಸ್ವಸ್ಥಗೊಂಡಿರುವ ಪೆಲಿಕಾನ್ ಬಗ್ಗೆ ಮಾಹಿತಿ ನೀಡಿದರು. ಕೂಡಲೇ ಚಿಕಿತ್ಸೆ ನೀಡಲು ತೆರಳಿದೆ. ಅಷ್ಟರಲ್ಲಾಗಲೇ ಅದು ಗಂಭೀರ ಸ್ಥಿತಿ ತಲುಪಿತ್ತು. ಆದರೂ ಅದನ್ನು ಬದು ಕಿಸಲು ಅಗತ್ಯವಾದ ಚಿಕಿತ್ಸೆ ನೀಡಲಾ ಯಿತು. ಆದರೆ ಅದು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದೆ. ಮರಣೋತ್ತರ ಪರೀಕ್ಷೆ ನಡೆಸಿ, ಅಂಗಾಂಗಗಳನ್ನು ಪರೀಕ್ಷೆಗೆ ಪ್ರಯೋಗಾ ಲಯಕ್ಕೆ ಕಳುಹಿಸಲಾಗಿದೆ ಎಂದರು.

ಅಗತ್ಯ ಕ್ರಮ: ಪೆಲಿಕಾನ್ ಸಾವಿನ ಹಿನ್ನೆಲೆ ಯಲ್ಲಿ ಡಿಸಿಎಫ್ ಡಾ.ಕೆ.ಸಿ.ಪ್ರಶಾಂತ್‍ಕುಮಾರ್ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ವನ್ಯಜೀವಿ ವಿಭಾಗದ ಡಿಸಿಎಫ್ ಅಲೆಗ್ಸಾಂ ಡರ್ ಅವರು ಕಾರ್ಯ ಕ್ಷೇತ್ರಕ್ಕೆ ಭೇಟಿ ನೀಡಿ ದ್ದಾರೆ. ಆದರೂ ಅಸ್ವಸ್ಥಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಪೆಲಿಕಾನ್ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಅದರ ಸ್ಯಾಂಪಲ್ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸುವಂತೆ ಸೂಚಿಸಿ ದ್ದಾರೆ. ಅಲ್ಲದೆ, ಕುಕ್ಕರಹಳ್ಳಿ ಕೆರೆ, ಲಿಂಗಾಂ ಬುದಿಕೆರೆಯಲ್ಲಿ ಪಕ್ಷಿಗಳ ಪಿಕ್ಕೆಯನ್ನು ವನ್ಯ ಜೀವಿ ವಿಭಾಗದ ಸಿಬ್ಬಂದಿ ಸಂಗ್ರಹಿಸಿ ಪ್ರಯೋ ಗಾಲಯಕ್ಕೆ ರವಾನಿಸಿದ್ದಾರೆ. ಯಾವುದೇ ಸಮಸ್ಯೆ ಎದುರಾದರೂ, ಅದನ್ನು ಸಮರ್ಥ ವಾಗಿ ಎದುರಿಸಲು ಹಾಗೂ ಪಕ್ಷಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

Translate »