`ಪ್ಲಾಗಥಾನ್’ನಲ್ಲಿ ಓಡುತ್ತಲೇ ಪ್ಲಾಸ್ಟಿಕ್ ಕಸ ಸಂಗ್ರಹಿಸಿದರು!
ಮೈಸೂರು

`ಪ್ಲಾಗಥಾನ್’ನಲ್ಲಿ ಓಡುತ್ತಲೇ ಪ್ಲಾಸ್ಟಿಕ್ ಕಸ ಸಂಗ್ರಹಿಸಿದರು!

January 6, 2020

ಮೈಸೂರು,ಜ.5(ಆರ್‍ಕೆಬಿ)-ಮತ್ತೊಮ್ಮೆ ದೇಶದ ನಂಬರ್ ಒನ್ ಸ್ವಚ್ಛನಗರಿ ಪಟ್ಟ ಪಡೆ ಯಲು ಟೊಂಕ ಕಟ್ಟಿರುವ ಮೈಸೂರು ಮಹಾ ನಗರಪಾಲಿಕೆ ಸ್ವಚ್ಛತೆ ಕುರಿತು ಮೈಸೂರು ನಾಗರಿ ಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಭಾನು ವಾರ ಪ್ಲಾಗಥಾನ್ (ಪಿಕ್ ಅಂಡ್ ರನ್) ಕಾರ್ಯ ಕ್ರಮ ಆಯೋಜಿಸಿತ್ತು. 1 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದ ಪ್ಲಾಗಥಾನ್‍ನಲ್ಲಿ ಒಟ್ಟಾರೆ 400 ಕೆಜಿಯಷ್ಟು ಪ್ಲಾಸ್ಟಿಕ್ ಕಸ ಸಂಗ್ರಹಿಸಲಾಯಿತು.

ಮೈಸೂರಿನ ಕೋಟೆ ಆಂಜನೇಯಸ್ವಾಮಿ ದೇವ ಸ್ಥಾನದ ಬಳಿಯಿಂದ ಪ್ರಾರಂಭವಾದ ಪ್ಲಾಗಥಾನ್ ನಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಬಟ್ಟೆ ಬ್ಯಾಗ್ ಮತ್ತು ಕೈಚೀಲ ನೀಡಲಾಗಿತ್ತು. ಮೂರು ಗುಂಪುಗಳಲ್ಲಿ ಮೂರು ಮಾರ್ಗಗಳಲ್ಲಿ ನಡೆದ ಪಿಕ್ ಅಂಡ್ ರನ್ (ಆಯಿರಿ ಮತ್ತು ಓಡಿರಿ)ನಲ್ಲಿ ರಸ್ತೆ ಉದ್ದಕ್ಕೂ ಬಿಸಾ ಡಲಾಗಿದ್ದ ಒಮ್ಮೆ ಬಳಸಿ ಬಿಸಾಡಬಹುದಾದ ಪ್ಲಾಸ್ಟಿಕ್ ಕಸವನ್ನು ಸ್ಪರ್ಧಿಗಳು ಓಡುತ್ತಲೇ ಆಯ್ದು ಬ್ಯಾಗ್‍ಗೆ ತುಂಬಿಕೊಂಡರು. ಈ ಮೂಲಕ `ಪ್ಲಾಸ್ಟಿಕ್ ಬಳಕೆ ಬಿಡಿ’ ಎಂಬ ಸಂದೇಶ ಸಾರಿದರು.

ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರ ಜಾವಗಲ್ ಶ್ರೀನಾಥ್, ಪ್ರೊ.ಎಂ.ಕೃಷ್ಣೇಗೌಡ ಕೋಟೆ ಆಂಜ ನೇಯಸ್ವಾಮಿ ದೇವಸ್ಥಾನದ ಬಳಿ ಪ್ಲಾಗಥಾನ್‍ಗೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು. ಮೊದಲ ಗುಂಪು ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿಯಿಂದ ಚಾಮರಾಜ ಒಡೆಯರ್ ವೃತ್ತ (ಆರು ಗೇಟ್), ಗನ್‍ಹೌಸ್, ಬಸವೇಶ್ವರ ವೃತ್ತ, ಕೆ.ಆರ್. ವೃತ್ತದಿಂದ ಪುರಭವನ. 2ನೇ ಗುಂಪು ಕೋಟೆ ಆಂಜ ನೇಯ ಸ್ವಾಮಿ ದೇವಸ್ಥಾನ, ಕೆ.ಆರ್.ವೃತ್ತ, ದೇವರಾಜ ಅರಸು ರಸ್ತೆ, ಮೆಟ್ರೋಪೋಲ್ ವೃತ್ತ , ಶಿವರಾಂ ಪೇಟೆ, ಪುರಭವನ. 3ನೇ ತಂಡ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಬಳಿಯಿಂದ ದೊಡ್ಡ ಗಡಿಯಾರ, ಅಶೋಕ ರಸ್ತೆ, ಲಷ್ಕರ್ ಪೊಲೀಸ್ ಸ್ಟೇಷನ್, ಆಯು ರ್ವೇದ ವೃತ್ತ, ಧನ್ವಂತರಿ ರಸ್ತೆ, ಸಯ್ಯಾಜಿರಾವ್ ರಸ್ತೆ, ಗಾಂಧಿ ವೃತ್ತ, ಪುರಭವನ. 3 ಗುಂಪುಗಳು ಪುರಭವನದಲ್ಲಿ ಸಮಾವೇಶಗೊಂಡು ಓಡುತ್ತಲೇ ಆಯ್ದು ಸಂಗ್ರಹಿಸಿದ್ದ ಪ್ಲಾಸ್ಟಿಕ್ ಕಸವನ್ನು ಒಂದೆಡೆ ಒಟ್ಟುಗೂಡಿಸಿದರು. ಇದರಲ್ಲಿ ಹೆಚ್ಚಾಗಿ ಮಹಿಳೆ ಯರು, ಮಕ್ಕಳು ಭಾಗವಹಿಸಿದ್ದು ವಿಶೇಷವಾಗಿತ್ತು.

`ಆಯಿರಿ ಮತ್ತು ಓಡಿರಿ’ ಕಾರ್ಯಕ್ರಮದಲ್ಲಿ ಭಾಗ ವಹಿಸಿ ಅತೀ ಹೆಚ್ಚು ಪ್ಲಾಸ್ಟಿಕ್ ಕಸ ಸಂಗ್ರಹಿಸುವವರಿಗೆ 10,000 ರೂ. ಮೊದಲ ಬಹುಮಾನ ಮತ್ತು ನಂತ ರದ ಸ್ಥಾನದಲ್ಲಿ ಬರುವ 20 ಮಂದಿಗೆ ತಲಾ 500 ರೂ. ಸಮಾಧಾನಕರ ಬಹುಮಾನ ನೀಡುವ ಬಗ್ಗೆ ಮೊದಲೇ ಪ್ರಕಟಿಸಿದ್ದರಿಂದ ನೂರಾರು ಮಂದಿ ಇದರಲ್ಲಿ ಪಾಲ್ಗೊಂಡು ಮೈಸೂರನ್ನು ಪ್ಲಾಸ್ಟಿಕ್ ಮುಕ್ತಗೊಳಿ ಸುವ ಜೊತೆಗೆ ಮೈಸೂರನ್ನು ಸ್ವಚ್ಛವಾಗಿಟ್ಟುಕೊಂಡು ಈ ಬಾರಿ ಮತ್ತೆ ನಂಬರ್ ಒನ್ ಪಟ್ಟ ಗಿಟ್ಟಿಸಲು ಸಾರ್ವಜನಿಕರ ಸಹಕಾರದ ಬಗ್ಗೆ ಅರಿವು ಮೂಡಿಸಿದರು.

`ನಮ್ಮ ಸ್ವಚ್ಛ ಹಾಗೂ ಹಸಿರು ಮೈಸೂರಿಗಾಗಿ ನಮ್ಮಿಂದ ನಮಗಾಗಿ’ ಘೋಷಣೆಯಡಿ ನಡೆದ ಸ್ಪರ್ಧೆ ಯಲ್ಲಿ ಹೆಚ್ಚು ಹುರುಪಿನಿಂದ ಪಾಲ್ಗೊಂಡಿದ್ದವರ ಪೈಕಿ ಮೈಸೂರಿನ ಅಗ್ರಹಾರದ ಮಯೂರ್ ಎಂಬ ದ್ವಿತೀಯ ಪಿಯುಸಿ ವಿದ್ಯಾರ್ಥಿ 2.30 ಕೆಜಿಯಷ್ಟು ಪ್ಲಾಸ್ಟಿಕ್ ಕಸ ಸಂಗ್ರಹಿಸಿ 10,000 ರೂ.ಗಳ ಮೊದಲ ಬಹುಮಾನ ಪಡೆದರು. ನಂತರದ ಸ್ಥಾನಗಳಲ್ಲಿ ಹೆಚ್ಚು ಕಸ ಸಂಗ್ರಹಿಸಿ, ಬೇಗ ಪುರಭವನ ತಲುಪಿದ ಹರ್ಷಕುಮಾರ್, ಯಶಸ್, ಚಂದನ್, ಶಂಕರ್ ಚಂದನ್, ಮಹಮದ್ ಫಸಿ, ಹರ್ಷಿತ್, ಬಿ.ನಾಗೇಶ್, ವಿಜಯಾನಂದ್, ಆರ್.ರಮೇಶ್, ಕೌಶಿಕ್, ಎಸ್. ಮಹೇಶ್, ಎಂ.ಧನುಷ್, ರಕ್ಷಿತ್‍ಗೌಡ, ರವಿ, ಅಜಯ್, ಜೆ.ಸುನೀಲ್, ಆರ್. ಶ್ರೇಯಸ್, ವಾಸಿಂ ತಲಾ 500 ರೂ. ಸಮಾಧಾನಕರ ಬಹುಮಾನಗಳನ್ನು ಪಡೆ ದರು. ಮೇಯರ್ ಪುಷ್ಪಲತಾ ಜಗನ್ನಾಥ್, ಪಾಲಿಕೆಯ ಸ್ವಚ್ಛತಾ ರಾಯಭಾರಿಗಳಾದ ಖ್ಯಾತ ಕ್ರಿಕೆಟ್‍ಪಟು ಜಾವಗಲ್ ಶ್ರೀನಾಥ್, ಪ್ರೊ.ಎಂ.ಕೃಷ್ಣೇಗೌಡ ವಿಜೇತರಿಗೆ ಬಹುಮಾನ ವಿತರಿಸಿದರು.

Plog-A-Thon In Mysore

ಪ್ಲಾಸ್ಟಿಕ್ ಮುಕ್ತ ಮೈಸೂರು: ಪಾಲಿಕೆಯೊಂದಿಗೆ ಕೈಜೋಡಿಸಲು ಜಾವಗಲ್ ಶ್ರೀನಾಥ್ ಮನವಿ
ಪ್ಲಾಸ್ಟಿಕ್ ಬಕೆಟ್ ಬಳಕೆಯನ್ನು ಇಂದೇ ನಿಲ್ಲಿಸಿ, ಮೈಸೂರನ್ನು ಪ್ಲಾಸ್ಟಿಕ್ ಮುಕ್ತಗೊಳಿಸಲು ಮೈಸೂರಿನ ಎಲ್ಲಾ ನಾಗರಿಕರು ಕೈಜೋಡಿ ಸಬೇಕು. ನಾವು ಒಬ್ಬೊಬ್ಬರು ಕನಿಷ್ಠ 10 ಜನರಿಗಾದರೂ ಒಣ ಕಸ, ಹಸಿ ಕಸ ಮತ್ತು ಪ್ಲಾಸ್ಟಿಕ್ ಕಸದ ಬಗ್ಗೆ ಅರಿವು ಮೂಡಿಸಿದರೆ, ಅದರಿಂದ ನೂರಾರು ಮಂದಿಗೆ ಇದ ರಿಂದ ಅರಿವು ಮೂಡಿಸಿದಂತಾಗುತ್ತದೆ ಎಂದು ಮೈಸೂರು ಮಹಾನಗರ ಪಾಲಿಕೆಯ ಸ್ವಚ್ಛತಾ ರಾಯಭಾರಿಯೂ ಆದ ಅಂತಾ ರಾಷ್ಟ್ರೀಯ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ತಿಳಿಸಿದರು. ಮೈಸೂರು ಮಹಾನಗರ ಪಾಲಿಕೆ ಆಯೋಜಿಸಿದ್ದ ಪ್ಲಾಗಥಾನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ಲಾಸ್ಟಿಕ್ ಬಳಕೆ ಬಿಡಿ, ಮೈಸೂರನ್ನು ಪ್ಲಾಸ್ಟಿಕ್ ಮುಕ್ತಗೊಳಿಸಿ,
ಮೈಸೂರಿಗೆ ಸ್ವಚ್ಛ ನಗರಿಪಟ್ಟ ದೊರೆಯಲು ನಗರರ ನಾಗರಿಕರು 1969 ಸಂಖ್ಯೆಗೆ ಮಿಸ್ಡ್ ಕಾಲ್ ಕೊಡುವ ಮೂಲಕ ನೆರವಾಗುವಂತೆ ಮನವಿ ಮಾಡಿದರು.

ಮತ್ತೊಬ್ಬ ಸ್ವಚ್ಛತಾ ರಾಯಭಾರಿ ಪ್ರೊ.ಎಂ.ಕೃಷ್ಣೇಗೌಡ ಮಾತನಾಡಿ, ಸ್ವಚ್ಛತಾ ಆಪ್ ಡೌನ್‍ಲೋಡ್ ಮಾಡಿಕೊಂಡು, ಮಹಾನಗರಪಾಲಿಕೆಯ ಸ್ವಚ್ಛತಾ ಕಾರ್ಯದಲ್ಲಿ ಸಾರ್ವ ಜನಿಕರು ಕೈಜೋಡಿಸಬೇಕು. ನಾವು ಪ್ರತಿದಿನ ಕಸ ಎತ್ತುವ ಮೂಲಕ ನಮ್ಮ ಕಸ ಎತ್ತುವ ಪೌರಕಾರ್ಮಿಕರಿಗೆ ಗೌರವ ಸಲ್ಲಿಸಬೇಕು. ಪೌರ ಕಾರ್ಮಿಕರೇ ನಿಜವಾದ ಸ್ವಚ್ಛತಾ ರಾಯಭಾರಿಗಳು ಎಂದರು. ಶಾಸಕ ಎಲ್.ನಾಗೇಂದ್ರ, ಮೇಯರ್ ಪುಷ್ಪಲತಾ ಜಗನ್ನಾಥ್ ಮಾತನಾಡಿ, ಸ್ವಚ್ಛ ತೆಯ ಬಗ್ಗೆ ಜನಜಾಗೃತಿ ಉಂಟು ಮಾಡಿದರೆ ಮತ್ತೊಮ್ಮೆ ಸ್ವಚ್ಛ ಮೈಸೂರು ಕಿರೀಟ ಪಡೆಯಬಹುದು ಎಂದರು. ಇದಕ್ಕೂ ಮುನ್ನ ಸ್ವರೂಪ್ ನೇತೃತ್ವದ ಬೆಂಗಳೂರಿನ ಚುಕ್ಕಿ ಟಾಕೀಸ್ ಕಲಾ ತಂಡದ ಸದಸ್ಯರು `ಸ್ವಚ್ಛ ಮೈಸೂರು’ ಕುರಿತ ಬೀದಿ ನಾಟಕ ಪ್ರದರ್ಶಿಸಿ ಗಮನ ಸೆಳೆದರು. ಕಾರ್ಯಕ್ರಮದಲ್ಲಿ ನಗರಪಾಲಿಕೆ ಸದಸ್ಯರಾದ ಎಸ್‍ಬಿಎಂ ಮಂಜು, ಮಾ.ವಿ.ರಾಮ್‍ಪ್ರಸಾದ್, ರಮೇಶ್ ರಮಣಿ, ಶಾಂತ ಕುಮಾರಿ, ಶೋಭಾ ಸುನೀಲ್, ಸತೀಶ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಅಂತಾ ರಾಷ್ಟ್ರೀಯ ಯೋಗಪಟು ಖುಷಿ, ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ಆರೋಗ್ಯಾ ಧಿಕಾರಿಗಳಾದ ಡಾ.ಜಯಂತ್, ಡಾ.ನಾಗರಾಜು ಇನ್ನಿತರರು ಭಾಗವಹಿಸಿದ್ದರು.

Translate »