ಕವಿಯಾದವನಿಗೆ ನಾಡಿನ ಪರಂಪರೆಯ ಅರಿವಿರಲಿ
ಮಂಡ್ಯ

ಕವಿಯಾದವನಿಗೆ ನಾಡಿನ ಪರಂಪರೆಯ ಅರಿವಿರಲಿ

September 9, 2018

ಪಾಂಡವಪುರ:  ಕವಿಯಾದವನಿಗೆ ನಾಡಿನ ಪರಂಪರೆಯ ಅರಿವು ಇರಬೇಕು. ಆದರೆ ಇಂದಿನ ಕವಿಗಳ ಕಾವ್ಯಗಳನ್ನು ಗಮನಿಸಿದರೆ ಪರಂಪರೆ ಕೊರತೆ ಎದ್ದು ಕಾಣಿಸುತ್ತದೆ ಎಂದು ಮೈಸೂರು ಮಹಾ ಜನ ಪ್ರಥಮ ದರ್ಜೆ ಕಾಲೇಜು ಕನ್ನಡ ಪ್ರಾಧ್ಯಾಪಕ ಡಾ.ಎಚ್.ಆರ್.ತಿಮ್ಮೇಗೌಡ ವಿಷಾದ ವ್ಯಕ್ತಪಡಿಸಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕು ಕಸಾಪ ಆಯೋ ಜಿಸಿದ್ದ ಯುವ ಕವಿಗೋಷ್ಠಿ ಮತ್ತು ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪರಂಪರೆ ಕವಿಗಳ ಮೇಲೆ ಪ್ರತ್ಯಕ್ಷ, ಪರೋಕ್ಷವಾಗಿ ಪ್ರಭಾವ ಬೀರುತ್ತವೆ. ಆದರೆ ಪರಂಪರೆ ಗೊತ್ತಿಲ್ಲದವನು ಕವಿಯಾಗಲಾರ ಎಂದರು. ಯಾವುದೇ ಕವಿಗೆ ಸ್ವಂತಿಕೆ ಇರಬೇಕು. ಯಾರನ್ನೂ ಅನುಕರಣೆ ಮಾಡ ಬಾರದು. ಸಂಸ್ಕøತಿ, ಸದ್ಗುಣಗಳಿರಬೇಕು. ಜೊತೆಗೆ ಕವಿಯು ಸಮಾಜಮುಖಿಯಾಗಿರ ಬೇಕು. ಸಮಾಜದ ಹೊಣೆಗಾರಿಕೆಯೊಂದಿಗೆ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವನೆ ಇರಬೇಕು. ಕವಿಗೆ ಅಹಂ ಇರಬಾರದು ಎಂದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಸರಸ್ವತಿ ಮಾತನಾಡಿ, ಕವಿಯಾದವನು ಸಮಾಜ ಪರಿವರ್ತನೆ ಮಾಡುತ್ತಾನೆ. ಯಾವುದೇ ಕವಿಗೆ ತನ್ನ ಬಾಲ್ಯವೇ ಸಾಹಿತ್ಯವಾಗುತ್ತದೆ. ಇಂದಿನ ಜಾಗತೀಕರಣ ವ್ಯವಸ್ಥೆ ಬರ ವಣಿಗೆ ಹಾಗೂ ಓದುವುದನ್ನು ಮರೆ ಮಾಡುತ್ತಿದೆ.

ಹೀಗಾದರೆ ಸಾಹಿತ್ಯ ಕೂಡ ಪ್ರಾಣಿ ಸಂಗ್ರಹಾಲಯದಂತಾಗಲಿದೆ ಎಂದರು. ಈ ವೇಳೆ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಗ್ರಾಮೀಣ ಉಪಾಧ್ಯಕ್ಷ ಸಿ.ಆರ್.ರಮೇಶ್, ಗ್ರಾಮೀಣ ಕಾರ್ಯದರ್ಶಿ ಸಿ.ಎ.ಲೋಕೇಶ್, ಜಿಲ್ಲಾ ನಿರ್ದೇಶಕ ಎಸ್. ನಾಗಸುಂದರ್ ಹಾಗೂ ಸಮಗ್ರ ಶಿಕ್ಷಣ ಅಭಿಯಾನ ಸಹಾಯಕ ಯೋಜನಾ ಸಮನ್ವಯಾಧಿಕಾರಿ ಸಿ.ಎನ್. ಗೋಪಾಲೇಗೌಡ ಅವರನ್ನು ಆತ್ಮೀಯ ವಾಗಿ ಸನ್ಮಾನಿಸಲಾಯಿತು. ನಂತರ ನಡೆದ ಯುವಕವಿಗೋಷ್ಠಿಯಲ್ಲಿ 10ಕ್ಕೂ ಹೆಚ್ಚು ಯುವ ಕವಿಗಳು ಕವಿತೆ ವಾಚಿಸಿದರು. ಕಸಾಪ ಜಿಲ್ಲಾಧ್ಯಕ್ಷ ರವಿಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಪ್ರೊ.ಬಿ.ನಾರಾಯಣ ಗೌಡ, ನಿವೃತ್ತ ಶಿಕ್ಷಕರಾದ ಚಂದ್ರಶೇಖ ರಯ್ಯ, ಚಿಕ್ಕಸಿದ್ದೇಗೌಡ, ತಾಲೂಕು ಕಸಾಪ ಅಧ್ಯಕ್ಷ ಎಂ.ರಮೇಶ್, ಜಿಲ್ಲಾ ಉಪಾಧ್ಯಕ್ಷ ಮಂಜುನಾಥ್, ಕೋಶಾಧ್ಯಕ್ಷ ಎಸ್.ಮಲ್ಲಿ ಕಾರ್ಜುನೇಗೌಡ, ಕಾರ್ಯ ದರ್ಶಿಗಳಾದ ಪ.ಮ.ನಂಜುಂಡಸ್ವಾಮಿ, ಪ್ರಕಾಶ್, ಮಹಿಳಾ ಘಟಕದ ಅಧ್ಯಕ್ಷೆ ಭಾರತಿ, ವಿಜಯ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕಿ ಕು. ಉಷಾರಾಣಿ ಇತರರಿದ್ದರು.

Translate »