ಮೈಸೂರು ಸ್ವಚ್ಛತೆಗೆ ಕೈಜೋಡಿಸುತ್ತಿರುವ ಪೊಲೀಸರು, ಸಂಘ ಸಂಸ್ಥೆಗಳು
ಮೈಸೂರು

ಮೈಸೂರು ಸ್ವಚ್ಛತೆಗೆ ಕೈಜೋಡಿಸುತ್ತಿರುವ ಪೊಲೀಸರು, ಸಂಘ ಸಂಸ್ಥೆಗಳು

January 13, 2019

ಮೈಸೂರು: ಸ್ವಚ್ಛ ಭಾರತ ಅಭಿಯಾನದಡಿ ಮೈಸೂರು ಮಹಾನಗರಪಾಲಿಕೆ ಕೈಗೊಂಡಿರುವ ಸ್ವಚ್ಛ ಸರ್ವೇಕ್ಷಣಾ ಕಾರ್ಯದಲ್ಲಿ ಪೊಲೀಸರು, ನಾಗರಿಕರು ಹಾಗೂ ಸಂಘ ಸಂಸ್ಥೆಗಳು ಕೈಜೋಡಿಸಿವೆ.

ಮೈಸೂರಿನ ಲಕ್ಷ್ಮೀಪುರಂಠಾಣೆ ಇನ್ಸ್ ಪೆಕ್ಟರ್ ಜಿ.ಆರ್.ರಘು ನೇತೃತ್ವದಲ್ಲಿ ನಂಜು ಮಳಿಗೆ ಬಳಿ ಸ್ವಚ್ಛತಾ ಕಾರ್ಯ ನಡೆಸಿದರು. ಠಾಣಾ ಸಿಬ್ಬಂದಿ, ಸ್ಥಳೀಯ ಕಾರ್ಪೊರೇಟರ್ ಪ್ರಮೀಳಾಭರತ್ ಹಾಗೂ ನಾಗರಿಕರು ಬೀದಿ, ಪಾರ್ಕ್‍ಗಳನ್ನು ಇಂದು ಸ್ವಚ್ಛಗೊಳಿಸಿ ಪಾಲಿಕೆಯೊಂದಿಗೆ ಕೈ ಜೋಡಿಸಿದರು.

ರಾಜೀವ್‍ನಗರದಲ್ಲಿ ಮೇಯರ್ ಪುಷ್ಪಲತಾ ಜಗನ್ನಾಥ, ಶಾಸಕ ತನ್ವೀರ್ ಸೇಟ್ ನೇತೃತ್ವದಲ್ಲಿ ಇಂದು ಸ್ಥಳೀಯರು ಸ್ವಚ್ಛತೆ ಕಾರ್ಯ ನಡೆಸಿ 2019ರ ಸ್ವಚ್ಛ ಸರ್ವೇಕ್ಷಣಾ ಕಾರ್ಯಕ್ಕೆ ಕೈಜೋಡಿಸಿದರು.

ಚೆಲುವಾಂಬ ಪಾರ್ಕಿನಲ್ಲಿ ಪಾಟ್‍ಗಳ ಮೇಲೆ ಕಲಾವಿದರು ‘ನಮ್ಮ ಮೈಸೂರು ಹಸಿರು’ ಸಂದೇಶ ಬರೆದು ನಿಸರ್ಗ ಸಂರಕ್ಷಣೆಗೆ ಮುಂದಾಗಿದ್ದು, ಮೈಸೂರು ಮಹಾ ಜನತೆಯು ಸ್ವಚ್ಛತೆಯಲ್ಲಿ ಪಾಲ್ಗೊಂಡಿದ್ದಾರೆ.

Translate »