ಮೈಸೂರು: ಮೈಸೂ ರಿನ ಹಲವು ಸಂಘ-ಸಂಸ್ಥೆಗಳು ಇಂದು ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ಗೌರವ ಪೂರ್ವಕವಾಗಿ ಆಚರಿಸಿದರೆ, ನಗರದ ಎನ್‍ಟಿಎಂಎಸ್ ಶಾಲಾ ಆವ ರಣದಲ್ಲಿರುವ ವಿವೇಕಾನಂದರು ತಂಗಿದ್ದ ಸ್ಥಳದಲ್ಲಿ ಯಾವುದೇ ಕಾರ್ಯಕ್ರಮ ಇಲ್ಲ.
ದೇಶದಾದ್ಯಂತ ಸ್ವಾಮಿ ವಿವೇಕಾನಂದ ಜನ್ಮ ದಿನವನ್ನು ಇಂದು ಯುವ ಜನರ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಎಲ್ಲೆಡೆ ವಿವೇಕಾನಂದರಿಗೆ ಗೌರವ ಸಲ್ಲಿಸಲಾಗಿದೆ. ವಿವೇಕಾನಂದರು ಒಮ್ಮೆ ಮೈಸೂರಿಗೆ ಬಂದು ಎನ್‍ಟಿಎಂಎಸ್ ಶಾಲೆಗೆ ಹೊಂದಿ ಕೊಂಡಂತಿರುವ ನಿರಂಜನ ಮಠದಲ್ಲಿ ವಾಸ್ತವ್ಯ ಹೂಡಿದ್ದರು. ಈ ಹಿನ್ನೆಲೆಯಲ್ಲಿ ಇಲ್ಲಿ ವಿವೇಕ ಸ್ಮಾರಕ ನಿರ್ಮಿಸಲುದ್ದೇಶಿ ಸಲಾಗಿದೆ. ಆದರೆ ಇಲ್ಲಿ ಇಂದು ಯಾವುದೇ ಕಾರ್ಯಕ್ರಮ ಹಮ್ಮಿಕೊಳ್ಳದೇ ಇರುವುದು ವಿವೇಕಾನಂದರ ಅನುಯಾಯಿಗಳಿಗೆ ನೋವುಂಟು ಮಾಡಿದೆ.
ಇಂದು ಬೆಳಿಗ್ಗೆ ಕೆಎಂಪಿಕೆ ಚಾರಿಟ ಬಲ್ ಟ್ರಸ್ಟ್ ವತಿಯಿಂದ ಇಲ್ಲಿ ಅಳವಡಿಸ ಲಾಗಿರುವ ವಿವೇಕ ಸ್ಮಾರಕ ಫಲಕದ ಮುಂದೆ ವಿವೇಕಾನಂದರ ಭಾವಚಿತ್ರವ ನ್ನಿಟ್ಟು ಪುಷ್ಪ ನಮನ ಸಲ್ಲಿಸಿದರು. ಈ ವೇಳೆ ಪತ್ರಕರ್ತರೊಂದಿಗೆ ಟ್ರಸ್ಟ್ ಅಧ್ಯಕ್ಷ ವಿಕ್ರಮ್ ಅಯ್ಯಂಗಾರ್ ಮಾತನಾಡಿ, ಸ್ವಾಮಿ ವಿವೇಕಾನಂದರು ಮೈಸೂರಿಗೆ ಬಂದಾಗ ಇಲ್ಲಿ ನೆಲೆಸಿದ್ದು, ನಮ್ಮ ಸೌಭಾಗ್ಯ. ಇಂದು ದೇಶದಾದ್ಯಂತ ಸ್ವಾಮಿ ವಿವೇಕಾನಂದ ಜನ್ಮ ದಿನವನ್ನು ಯುವ ಜನರ ದಿನವನ್ನಾಗಿ ಆಚರಿಸಲಾಗುತ್ತಿದೆ. ವಿವಿಧ ಕಾರ್ಯಕ್ರಮಗಳ ಮೂಲಕ ವೀರ ಸನ್ಯಾಸಿ ಸಂದೇಶವನ್ನು ಸಾರಲಾಗುತ್ತಿದೆ. ಆದರೆ ವಿವೇಕಾನಂದರು ತಂಗಿದ್ದ ಸ್ಥಳದಲ್ಲಿ ಯಾರೂ ಗೌರವ ಸಲ್ಲಿಸದೇ ಇರುವುದು ವಿಷಾದಕರ ಎಂದು ಬೇಸರ ವ್ಯಕ್ತಪಡಿಸಿದರು.