ವಿ.ಪೇಟೆಯಲ್ಲಿ ಅಂಚೆ ಕಚೇರಿ ನೌಕರರ ಮುಷ್ಕರ
ಕೊಡಗು

ವಿ.ಪೇಟೆಯಲ್ಲಿ ಅಂಚೆ ಕಚೇರಿ ನೌಕರರ ಮುಷ್ಕರ

May 27, 2018

ವಿರಾಜಪೇಟೆ:  ಅಂಚೆ ನೌಕರರ ವಿವಿಧ ಬೇಡಿಕೆ ಗಳು ಹಾಗೂ ಕಮಲೇಶ್ ಚಂದ್ರ ಸಮಿತಿಯ ಏಳನೇ ಆಯೋ ಗದ ವರದಿಯನ್ನು ಜಾರಿಗೊಳಿ ಸುವಂತೆ ಆಗ್ರಹಿಸಿ ಅಂಚೆ ನೌಕರರ ಸಂಘ ಟನೆಯು ವಿರಾಜಪೇಟೆ ಗಡಿಯಾರ ಕಂಬದ ಬಳಿ ಯಿರುವ ತಾಲೂಕಿನ ಪ್ರಧಾನ ಅಂಚೆ ಕಚೇರಿಯ ಸಿಬ್ಬಂದಿ ಗಳು ಕೆಲಸಕ್ಕೆ ಹಾಜ ರಾಗದೆ ಮುಷ್ಕರ ನಡೆಸಿದರು.

ಈ ಸಂದರ್ಭ ಎ.ಐ.ಜಿ.ಡಿಎಸ್‍ಯು ಸಂಘಟನೆಯ ಕಾರ್ಯದರ್ಶಿ ಮಂಜು ನಾಥ್ ಮಾತನಾಡಿ, ಈ ಹಿಂದೆ ಇದೇ ಬೇಡಿಕೆಗಳನ್ನು ಮುಂದಿಟ್ಟು ಮುಷ್ಕರ ನಡೆಸಿದಾಗ ಬೇಡಿಕೆಗಳಿಗೆ ಕೇಂದ್ರ ಸರ ಕಾರ ಸ್ಪಂದಿಸದ ಕಾರಣ ಈಗ ಅಂಚೆ ನೌಕರರು ಅನಿರ್ಧಿಷ್ಟವಾಧಿ ಯವರೆಗೆ ಮುಷ್ಕರ ಹಮ್ಮಿಕೊಂಡಿದ್ದಾರೆ. ಇದರಿಂದ ರಾಷ್ಟ್ರದಾ ದ್ಯಂತ ಒಂದು ಲಕ್ಷದ ಇಪ್ಪತ್ತೈದು ಸಾವಿರ ಅಂಚೆ ಕಚೇರಿಗಳು ಕಾರ್ಯ ಸ್ಥಗಿತಗೊಳಿಸಿವೆ. ಈ ಬೇಡಿಕೆಗಳನ್ನು ಸರಕಾರ ಸ್ಪಂದಿಸುವ ತನಕ ಮುಷ್ಕರ ಮುಂದುವರೆ ಯಲಿದೆ ಎಂದರು. ಈ ಸಂದರ್ಭ ಸಂಘ ಟನೆಯ ಅಧ್ಯಕ್ಷ ಕುರಿಯನ್, ಪೂಣಚ್ಚ, ಮುರುಳಿಧರ್ ಮುಂತಾದವರು ಮುಷ್ಕರದಲ್ಲಿ ಭಾಗವಹಿಸಿದ್ದರು.

Translate »