2015ರ ಟಿಪ್ಪು ಜಯಂತಿ ಘರ್ಷಣೆ ಹಿಂದಿನ ಎಸ್ಪಿ ವರ್ತಿಕಾ ಕಟಿಯಾರ್‍ಗೆ ಕ್ಲೀನ್‍ಚಿಟ್
ಕೊಡಗು

2015ರ ಟಿಪ್ಪು ಜಯಂತಿ ಘರ್ಷಣೆ ಹಿಂದಿನ ಎಸ್ಪಿ ವರ್ತಿಕಾ ಕಟಿಯಾರ್‍ಗೆ ಕ್ಲೀನ್‍ಚಿಟ್

May 27, 2018

ಮಡಿಕೇರಿ:  ಕೊಡಗು 2015 ರಲ್ಲಿ ಟಿಪ್ಪು ಜಯಂತಿ ಆಚರಣೆ ಸಂದರ್ಭ ನಡೆದ ಕೋಮು ಘರ್ಷಣೆಯಲ್ಲಿ ಕರ್ತವ್ಯ ಲೋಪ ಆರೋಪ ಎದುರಿಸಿದ್ದ ಆಗಿನ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ಅವರನ್ನು ಗೃಹ ಇಲಾಖೆ ಆರೋಪ ಮುಕ್ತಗೊಳಿಸಿ ಆದೇಶ ಹೊರಡಿಸಿದೆ.

ಕಳೆದ 3 ವರ್ಷಗಳ ಹಿಂದೆ ನಡೆದ ಟಿಪ್ಪು ಜಯಂತಿ ಆಚರಣೆ ವೇಳೆ ಹಿಂದೂ ಪರ ಸಂಘಟನೆಯ ಕಾರ್ಯಕರ್ತ ಕುಟ್ಟಪ್ಪ ಮಡಿಕೇರಿ ಜಿಲ್ಲೆ ಆಸ್ಪತ್ರೆಯ ಆವರಣದಲ್ಲಿ ಮೃತ ಪಟ್ಟಿದ್ದರು. ಆ ಬಳಿಕ ನೀರುಕೊಲ್ಲಿ ಬಳಿ ಟಿಪ್ಪು ಜಯಂತಿ ಆಚರಿಸಿ ಮಡಿ ಕೇರಿಯಿಂದ ಸಿದ್ದಾಪುರ ಕಡೆಗೆ ತೆರಳು ತ್ತಿದ್ದ ಸಾಹುಲ್ ಹಮೀದ್ ಗುಂಡೇಟಿ ನಿಂದ ಮೃತ ಪಟ್ಟಿದ್ದರು. ಕೋಮು ಗಲಭೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಂದಿನ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿ ಯಾರ್ ಮತ್ತು ಜಿಲ್ಲಾಧಿಕಾರಿ ಮೀರ್ ಅಸೀಸ್ ಅಹಮದ್ ವಿರುದ್ಧ ಕರ್ತವ್ಯ ಲೋಪದ ಆರೋಪಗಳು ಎದುರಾಗಿ ಇಲಾಖೆ ತನಿಖೆ ನಡೆಸಲು ಸರ್ಕಾರ ಆದೇಶಿಸಿತ್ತು. ಮಾತ್ರವಲ್ಲದೆ ಸಂಪೂರ್ಣ ಘಟನೆಯನ್ನು ಮೈಸೂರು ಜಿಲ್ಲಾಧಿಕಾರಿ ಯಾಗಿದ್ದ ಶಿಖಾ ನೇತೃತ್ವದಲ್ಲಿ ತನಿಖೆ ನಡೆಸಲಾಗಿತ್ತು.

ಈ ಸಂಧರ್ಭ ಶಿಖಾ ಅವರು ಇಬ್ಬರೂ ಅಧಿಕಾರಿಗಳು ಕರ್ತವ್ಯಲೋಪ ಎಸಗಿ ದ್ದಾರೆಂದು ಸರ್ಕಾರಕ್ಕೆ ವರದಿ ನೀಡಿದ್ದರು. ಜಿಲ್ಲೆಯಲಿ ನಡೆದ ಕೋಮು ಘರ್ಷಣೆಗೆ ಜಿಲ್ಲಾಡಳಿತವೇ ಹೊಣೆ ಎಂದು ದಕ್ಷಿಣ ವಲಯ ಐಜಿಪಿ ಬಿ.ಕೆ.ಸಿಂಗ್ ರಾಜ್ಯ ಪೋಲಿಸ್ ಮಹಾನಿರ್ದೇಶಕರಾಗಿದ್ದ ಓಂ ಪ್ರಕಾಶ್ ಅವರಿಗೆ 12 ಪುಟಗಳ ವರದಿ ನೀಡಿದ್ದರು. ಈ ಸಂಧರ್ಭ ಗೃಹ ಇಲಾಖೆ ವರ್ತಿಕಾ ಕಟಿಯಾರ್‍ಗೆ ನೋಟೀಸ್ ನೀಡಿ ಸಮಜಾಯಿಷಿಕೆ ನೀಡುವಂತೆ ಸೂಚನೆ ನೀಡಿತ್ತು.

ಕಟಿಯಾರ್ ಸಮಜಾಯಿಷಿಕೆ: 2015ರ ನವೆಂಬರ್ 10ರಂದು ಮಡಿಕೇರಿಯಲ್ಲಿ ಆಯೋಜಿಸಲಾಗಿದ್ದ ಟಿಪ್ಪು ಜಯಂತಿಗೆ ಎಲ್ಲಾ ರೀತಿಯ ಭದ್ರತಾ ಕ್ರಮ ಕೈಗೊಳ್ಳಲಾಗಿತ್ತು. ಮಾತ್ರವಲ್ಲದೇ ವಿವಿಧ ಸಮುದಾಯಗಳ ಮುಖಂಡರೊಂದಿಗೆ ಶಾಂತಿ ಸಭೆ ನಡೆಸಸಲಾಗಿತ್ತು. ಟಿಪ್ಪು ಜಯಂತಿಗೆ ಪರ-ವಿರೋಧ ವ್ಯಕ್ತ ಗೊಂಡಿದ್ದ ಹಿನ್ನಲೆಯಲ್ಲಿ ಜಿಲ್ಲೆಯಾದ್ಯಂತ ಪೋಲಿಸ್ ಭದ್ರತೆ ಏರ್ಪಡಿಸಲಾಗಿತ್ತು. ಮಡಿಕೇರಿ ಜನರಲ್ ತಿಮ್ಮಯ್ಯ ವೃತ್ತದ ಬಳಿ ಕಲ್ಲುತೂರಾಟ ನಡೆದ ಸಂದರ್ಭ ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಎಲ್ಲಾ ರೀತಿಯ ಪ್ರಯತ್ನ ನಡೆಸಲಾಗಿದೆ. ಮಾತ್ರವಲ್ಲದೆ ಜಲ್ಲೆಯ ವಿವಿಧೆಡೆ ನಡೆದ ಘರ್ಷಣೆಗಳಲ್ಲಿ ನೂರಕ್ಕೂ ಹೆಚ್ಚು ಜನರನ್ನು ಬಂಧಿಸ ಲಾಗಿದೆ. ಗುಂಡೇಟು ಸಾವು ಪ್ರಕರಣದ ಆರೋಪಿಗಳನ್ನು ಕೂಡ ದಸ್ತಗಿರಿ ಮಾಡಿ ಶಾಂತಿ ಸ್ಥಾಪನೆಗೆ ಎಲ್ಲಾ ರೀತಿಯಾ ಕ್ರಮ ಕೈಗೊಳ್ಳಲಾಗಿತ್ತೆಂದು ಎಸ್.ಪಿ.ವರ್ತಿಕಾ ಕಟಿಯಾರ್ ಸಮಜಾಯಿಷಿಕೆ ನೀಡಿದರು. ಎಲ್ಲಾ ವಿಚಾರಗಳು ಮತ್ತು ತನಿಖಾ ವರದಿಯನ್ನು ಪರಿಶೀಲಿಸಿದ ಹಿಂದಿನ ಸರ್ಕಾರ ಎಸ್‍ಪಿ ವರ್ತಿಕಾ ಕಟಿ ಯಾರ್‍ಗೆ ಕ್ಲೀನ್ ಚೀಟ್ ನೀಡಿದೆ. ಈ ಕುರಿತು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಸರ್ಕಾರದ ಉಪ ಕಾರ್ಯ ದರ್ಶಿ ಬಿ.ಎಸ್ ನಾಗರಾಜ್ ಅವರು ಏಪ್ರಿಲ್ 26ರಂದು ಆದೇಶ ಹೊರಡಿಸಿದ್ದಾರೆ.

Translate »