ಬೋಡ್‍ನಮ್ಮೆ ವೇಷಧಾರಿಗೆ ಅಪರಿಚಿತ ವಾಹನ ಡಿಕ್ಕಿ ಚಿಂತಾಜನಕ ಸ್ಥಿತಿಯಲ್ಲಿರುವ ಕಾರ್ಮಿಕನಿಗೆ ಸಂಕೇತ್ ಪೂವಯ್ಯ ನೆರವು
ಕೊಡಗು

ಬೋಡ್‍ನಮ್ಮೆ ವೇಷಧಾರಿಗೆ ಅಪರಿಚಿತ ವಾಹನ ಡಿಕ್ಕಿ ಚಿಂತಾಜನಕ ಸ್ಥಿತಿಯಲ್ಲಿರುವ ಕಾರ್ಮಿಕನಿಗೆ ಸಂಕೇತ್ ಪೂವಯ್ಯ ನೆರವು

May 27, 2018

ಗೋಣಿ ಕೊಪ್ಪಲು:  ಹೆಬ್ಬಾಲೆ ಬೋಡ್‍ನಮ್ಮೆ ಸಂದರ್ಭ ನಡೆದಿದ್ದ ವಾಹನ ಅಪಘಾತದಲ್ಲಿ ಗಾಯಗೊಂಡು ಜೀವನ್ಮರಣ ಸ್ಥಿತಿಯಲ್ಲಿರುವ ವೇಷದಾರಿ ಕಾರ್ಮಿಕ ಮುತ್ತ ಅವರ ಚಿಕಿತ್ಸೆಗೆ ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಧನಸಹಾಯ ಮಾಡಿದರು.

ಮೈಸೂರಿನ ಖಾಸಗಿ ಆಸ್ಪತ್ರೆಗೆ ತೆರಳಿ ಕಾರ್ಮಿಕನ ಯೋಗ ಕ್ಷೇಮ ವಿಚಾರಿಸಿ, ಆತನ ಪತ್ನಿ ಕವಿತಾಳಿಗೆ 10 ಸಾವಿರ ವೈಯಕ್ತಿಕ ಧನ ಸಹಾಯ ನೀಡಿದರು.

ಕಳೆದ ಬುಧವಾರ ರಾತ್ರಿ ಪಾಲಿಬೆಟ್ಟ ರಸ್ತೆಯಲ್ಲಿ ಹಬ್ಬದ ವೇಷತೊಟ್ಟು ಸಂಭ್ರಮಿಸುತ್ತಿದ್ದ ಸಂದರ್ಭ ಅಪರಿಚಿತ ವಾಹನ ವೊಂದು ಡಿಕ್ಕಿಯಾಗಿ ತಲೆಭಾಗಕ್ಕೆ ಗಂಭೀರ ಪೆಟ್ಟಾಗಿತ್ತು. ಈಗ ಜೀವನ್ಮರಣ ಸ್ಥಿತಿಯಲ್ಲಿ ಕಾರ್ಮಿಕ ನರಳುತ್ತಿದ್ದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಯುತ್ತಿದೆ.

ಒತ್ತಾಯ: ಡಿ.ವೈ.ಎಸ್.ಪಿ ನಾಗಪ್ಪರೊಂದಿಗೆ ದೂರವಾಣ ಮೂಲಕ ಮಾತುಕತೆ ನಡೆಸಿದ ಸಂಕೇತ್ ಪೂವಯ್ಯ, ಕಾರ್ಮಿಕನಿಗೆ ಡಿಕ್ಕಿ ಪಡಿಸಿದ ವಾಹನ ಚಾಲಕನನ್ನು ಕೂಡಲೇ ಬಂಧಿಸಿ ಕಾರ್ಮಿಕ ನಿಗೆ ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿವೈಎಸ್‍ಪಿ ನಾಗಪ್ಪ, ರಾತ್ರಿ ವೇಳೆಯಲ್ಲಿ ಕಾರ್ಮಿಕ ಮುತ್ತಪ್ಪನಿಗೆ ಡಿಕ್ಕಿ ಪಡಿಸಿದ ವಾಹನ ಹಾಗೂ ಚಾಲಕನ ಪತ್ತೆಗೆ ಪೋಲಿಸರ ವಿಶೇಷ ತಂಡ ರಚಿಸಲಾಗಿದ್ದು ಆರೋಪಿಯನ್ನು ಸದ್ಯದಲ್ಲೆ ಬಂಧಿಸಲಾಗುವುದು. ಗೋಣ ಕೊಪ್ಪ ಠಾಣೆಯಲ್ಲಿ ಮೊಖದಮ್ಮೆ ದಾಖಲಾಗಿದೆ. ಸುತ್ತಮುತ್ತಲಿನ ಸಿ.ಸಿ ಕ್ಯಾಮರದಲ್ಲಿ ಘಟನೆಯ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ. ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Translate »