ಮೇ 31 ರಂದು ವಾಹನಗಳ ಹರಾಜು
ಕೊಡಗು

ಮೇ 31 ರಂದು ವಾಹನಗಳ ಹರಾಜು

May 27, 2018

ಕುಶಾಲನಗರ:  ಇಲ್ಲಿನ ಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣವೊಂದಕ್ಕೆ ಸಂಬಂಧಿಸಿ ಅಮಾನತ್ತುಪಡಿಸಲಾಗಿದ್ದ ಮಾರುತಿ 800 ಕಾರನ್ನು ಅದರ ಮಾಲೀಕರು ಮರಳಿ ವಶಕ್ಕೆ ತೆಗೆದುಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ಕೆಎ12ಎಂ5062 ಸಂಖ್ಯೆಯ ಈ ಕಾರನ್ನು ನ್ಯಾಯಾಲಯದ ಆದೇಶದಂತೆ ಈ ತಿಂಗಳ 31ರಂದು ಪೊಲೀಸ್ ಠಾಣಾ ಆವರಣದಲ್ಲಿ ಹರಾಜು ಹಾಕಲಾಗುತ್ತಿದೆ. ಮತ್ತೊಂದು ಪ್ರಕರಣದಲ್ಲಿ ಅಮಾನ ತ್ತಾಗಿರುವ ಟಾಟಾ ಸಿಯೆರಾ ವಾಹನವನ್ನೂ ಮಾಲಿಕರು ವಶಕ್ಕೆ ಪಡೆದುಕೊಂಡಿಲ್ಲವಾದ ಕಾರಣ ಕೆಎ12ಎಂ1399 ನಂಬರಿನ ಈ ವಾಹನವನ್ನೂ ಮೇ 31ರಂದು ಹರಾಜು ಹಾಕಲಾಗುತ್ತಿದೆ. ಆಸಕ್ತ ಸಾರ್ವಜನಿಕರು ಪಾಲ್ಗೊಳ್ಳುವಂತೆ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಸುಂದರನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಿಂಭಾಗದಲ್ಲಿ ನಂಬರ್ ಇಲ್ಲದೆ ನಿಂತಿದ್ದ ಚವರ್‍ಲೆಟ್ ತೆವೇರಾ ವಾಹನವನ್ನು ಠಾಣೆ ಬಳಿ ತಂದು ನಿಲ್ಲಿಸಲಾಗಿದೆ. ಈ ವಾಹನದ ಮಾಲಿಕರ ಬಂದು ವಾಹನ ತೆಗೆದುಕೊಂಡು ಹೋಗುವಂತೆ ಠಾಣಾ ಧಿಕಾರಿಗಳ ಪ್ರಕಟಣೆ ತಿಳಿಸಿದೆ.

Translate »