ಇಂದು ಕೆಲವೆಡೆ ವಿದ್ಯುತ್ ನಿಲುಗಡೆ
ಮೈಸೂರು

ಇಂದು ಕೆಲವೆಡೆ ವಿದ್ಯುತ್ ನಿಲುಗಡೆ

September 12, 2019

ಮೈಸೂರು,ಸೆ.11-ತುರ್ತು ನಿರ್ವಹಣಾ ಕಾಮಗಾರಿ ನಿಮಿತ್ತ ಸೆ.12ರಂದು ಬೆಳಿಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ದೇವನೂರು ವಿ.ವಿ. ಕೇಂದ್ರದ ವ್ಯಾಪ್ತಿಯಲ್ಲಿ ರಾಜೀವ್ ನಗರ 1ನೇ, 2ನೇ ಮತ್ತು 3ನೇ ಹಂತ, ಶಾಂತಿನಗರ, ನೆಹರೂ ನಗರ, ರಾಧಾಕೃಷ್ಣ ನಗರ, ಭಾರತ್‍ನಗರ, ಜೆ.ಎಸ್.ಎಸ್. ಬಡಾವಣೆ, ಶಕ್ತಿನಗರ, ಗೌಸಿಯಾನಗರ, ಕ್ಯಾತಮಾರನಹಳ್ಳಿ, ಕಲ್ಯಾಣಗಿರಿ, ಹಂಚ್ಯಾ, ಭುಗತಗಳ್ಳಿ, ಮೇಳಾಪುರ, ರಮ್ಮನಹಳ್ಳಿ ವಾಟರ್ ವಕ್ರ್ಸ್, ಕಾಳಸಿದ್ದನಹುಂಡಿ, ಸಾತಗಳ್ಳಿ, ರಮ್ಮನಹಳ್ಳಿ ಮತ್ತು ಬನ್ನೂರು ರಿಂಗ್‍ರಸ್ತೆ ಹಾಗೂ ಸುತ್ತಮುತ್ತ ವಿದ್ಯುತ್ ವ್ಯತ್ಯಯವಾಗಲಿದೆ. ರಾಜೀವ್‍ನಗರ ವಿ.ವಿ. ಕೇಂದ್ರದ ವ್ಯಾಪ್ತಿಯಲ್ಲಿ ನಾರಾಯಣ ಹೃದ ಯಾಲಯ, ರಾಜೀವ್‍ನಗರ 2ನೇ ಹಂತ, ಅಲ್ಬದರ್ ಮಸೀದಿ, ಸೂರ್ಯನಾರಾಯಣ ದೇವಸ್ಥಾನ, ಕ್ರಿಶ್ಚಿಯನ್ ಕಾಲೋನಿ, ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ದೊಡ್ಡಕೆರೆ ಮೈದಾನ ವಿ.ವಿ. ಕೇಂದ್ರದ ವ್ಯಾಪ್ತಿಯಲ್ಲಿ ರಾಮಾನುಜ ರಸ್ತೆ, ಹೊಸ ಬಂಡಿಕೇರಿ, ಜೆ.ಎಸ್.ಎಸ್. ಆಸ್ಪತ್ರೆ, ಅಗ್ರಹಾರ, ಬಸವೇಶ್ವರ ರಸ್ತೆ, ಚಾಮುಂಡಿಪುರಂನ ಹಲವು ಭಾಗಗಳು, ಸಬರ್ಬ್ ಬಸ್ ನಿಲ್ದಾಣ, ನಜರ್‍ಬಾದ್, ಇಟ್ಟಿಗೆಗೂಡು, ಮೃಗಾಲಯದ ಸುತ್ತಮುತ್ತ, ಸರ್ಕಾರಿ ಅಥಿತಿ ಗೃಹ ಮತ್ತು ಸುತ್ತಮುತ್ತ, ತಾಲೂಕು ಕಚೆÉೀರಿ, ಡಿ.ದೇವರಾಜ ಅರಸು ರಸ್ತೆ, ಬಿ.ಎನ್. ರಸ್ತೆ, ಚಾಮುಂಡಿಬೆಟ್ಟ, ಸಿದ್ದಾರ್ಥನಗರ, ಆಲನಹಳ್ಳಿ ಸುತ್ತಮುತ್ತ, ಗಿರಿದರ್ಶಿನಿ ಬಡಾವಣೆ, ಅರಮನೆ ಸುತ್ತಮುತ್ತ, ಶ್ರೀ ಹರ್ಷರಸ್ತೆ, ಸಯ್ಯಾಜಿರಾವ್‍ರಸ್ತೆ, ಇರ್ವಿನ್ ರಸ್ತೆ ಸುತ್ತಮುತ್ತ, ಧನ್ವಂತರಿ ರಸ್ತೆ ಹಾಗೂ ಶಿವರಾಂಪೇಟೆ ಸುತ್ತಮುತ್ತ ವಿದ್ಯುತ್ ವ್ಯತ್ಯಯವಾಗಲಿದೆ.

Translate »