ಮೈಸೂರು, ಸೆ.11-ಪೇಜಾವರ ಮಠದ ಶ್ರೀಪಾದಂಗಳವರ ಚಾತುರ್ಮಾಸ್ಯ ಗಾನಸಿರಿ ವೇದಾಂತ ಲಹರಿ ಕಾರ್ಯಕ್ರಮದ ಸಮಾರೋಪ ಸಮಾರಂಭವು ಸೆ.13ರಂದು ಶುಕ್ರವಾರ ನಗರದ ಕೃಷ್ಣಧಾಮ, ಸರಸ್ವತಿಪುರಂನಲ್ಲಿ ನಡೆಯಲಿದ್ದು, ಅಂದು ಸಂಜೆ 4 ರಿಂದ 5ರವರೆಗೆ ಯುವ ಪ್ರತಿಭಾವಂತ ಗಾಯಕಿಯರಾದ ಕು.ರಕ್ಷಣಾ ಹಾಗೂ ಕು.ರಕ್ಷಿತಾ ಸಹೋದರಿಯರು ದಾಸವಾಣಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಸಂಜೆ 5ರಿಂದ 7ರವರೆಗೆ ಗಾನಸಿರಿ ವೇದಾಂತ ಲಹರಿ ‘ಹರಿದಾಸ ವೈಭವ’ ಎಂಬ ಕಾರ್ಯಕ್ರಮ ನಡೆಯಲಿದೆ. ಅಂದು ಗಾಯನ ಕಾರ್ಯಕ್ರಮವನ್ನು ಮೈಸೂರಿನ ಪ್ರಖ್ಯಾತ ಗಾಯಕರಾದ ಹಾಗೂ ಝೀ ಕನ್ನಡ ವಾಹಿನಿಯ ಸರಿಗಮಪ ಖ್ಯಾತಿ ಶ್ರೀಹರ್ಷರವರು ನಡೆಸಿಕೊಡಲಿದ್ದಾರೆ. ಅಂದು ಇವರು ಪ್ರಸ್ತುತಪಡಿಸುವ ದಾಸರ ಪದಗಳ ಗಾಯನಕ್ಕೆ ಮೈಸೂರಿನ ಪ್ರಸಿದ್ಧ ವಿದ್ವಾಂಸರಾದ ಹಾಗೂ ಪ್ರವಚನಗಳಿಗೆ ಪ್ರಸಿದ್ಧಿಯಾಗಿರುವ ಉತ್ತಮ ವಾಗ್ಮಿಗಳಾದ ಡಾ.ಬೆ.ನಾ.ವಿಜಯೀಂದ್ರಾಚಾರ್ಯರು ವಿಶ್ಲೇಷಣೆ ನೀಡಲಿದ್ದಾರೆ. ಹೀಗೆ ಅಮೋಘ ಗಾಯನ, ಅದ್ಭುತ ವಿಶ್ಲೇಷಣೆಯ ಸಂಗಮ ಈ ‘ಹರಿದಾಸ ವೈಭವ’. ಇದೇ ವೇಳೆ ಕೀಬೋರ್ಡ್ ಕಲಾವಿದ ಗಣೇಶ್ ಭಟ್, ಮ್ಯಾಂಡಲಿನ್ ವಿಶ್ವನಾಥ್, ತಬಲಾ ಕಲಾವಿದರಾದ ಆತ್ಮಾರಾಮ್ ಹಾಗೂ ರಿದಮ್ ಪ್ಯಾಡ್ ಕಲಾವಿದ ವಿನಯ್ ರಂಗಧೋಳ್ ಅವರನ್ನು ಸನ್ಮಾನಿಸಲಾಗುವುದು. ಹೆಚ್ಚಿನ ಮಾಹಿತಿಗೆ ಎಸ್.ರವಿಕುಮಾರ್, ಮೊಬೈಲ್ 7204043565 ಸಂಪರ್ಕಿಸುವುದು.