ಕುಡಿಯುವ ನೀರಿನ ಸಮಸ್ಯೆಗೆ ಆದ್ಯತೆ ನೀಡಿ
ಮೈಸೂರು

ಕುಡಿಯುವ ನೀರಿನ ಸಮಸ್ಯೆಗೆ ಆದ್ಯತೆ ನೀಡಿ

June 18, 2019

ಮೈಸೂರು: ಮುಖ್ಯ ಮಂತ್ರಿಗಳೇ ಗ್ರಾಮ ವಾಸ್ತವ್ಯ ನಿಲ್ಲಿಸಿ, ರಾಜ್ಯದಲ್ಲಿ ಭೀಕರವಾಗಿರುವ ಕುಡಿಯುವ ನೀರಿನ ಸಮಸ್ಯೆಗೆ ಕ್ರಮ ಕೈಗೊಳ್ಳಿ ಎಂದು ಪ್ರತಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೋಮವಾರ ಇಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಅವರಿಗೆ ಸಲಹೆ ನೀಡಿದರು.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಶೇ.80 ರಷ್ಟು ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಮೈಸೂರು, ಚಾಮರಾಜ ನಗರ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ರಾಜ್ಯದಲ್ಲಿ ಬರ ಗಾಲ ತಾಂಡವವಾಡುತ್ತಿದೆ. ಹೀಗಿದ್ದೂ ಮುಖ್ಯಮಂತ್ರಿ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ದಲ್ಲಿಯೇ ಕಾಲ ಕಳೆಯುತ್ತಿದ್ದಾರೆ ಎಂದು ಆರೋಪಿಸಿದರು.

ಗ್ರಾಮ ವಾಸ್ತವ್ಯ ಬಿಡಿ, ರಾಜ್ಯದ ನೀರಿನ ಪರಿಸ್ಥಿತಿ ಅರಿತು ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಿ. ಅಧಿಕಾರಿ ಗಳು ಏನು ಮಾಡುತ್ತಿದ್ದಾರೆ. ಕೂಡಲೇ ಗಮನ ಹರಿಸಿ ಎಂದು ಆಗ್ರಹಿಸಿದರು.

ಜಿಂದಾಲ್ ಕಂಪನಿಗೆ ಭೂಮಿ ಹಂಚುವ ವಿಚಾರ ದಲ್ಲಿ ರಾಜಕೀಯ ಮಾಡುವ ಅಗತ್ಯ ನನಗಿಲ್ಲ ಎಂದು ಬಿ.ಎಸ್.ಯಡಿಯೂರಪ್ಪ ಅವರು ಈ ಸಂದರ್ಭದಲ್ಲಿ ಸ್ಪಷ್ಪಪಡಿಸಿದರು.

ನಾವು ಹೋರಾಟ ರೂಪಿಸಿದ್ದೆವು. ನಾವು ಧರಣಿ ಮಾಡುವುದು ವಾರದ ಹಿಂದೆಯೇ ಮುಖ್ಯಮಮಂತ್ರಿಯವರಿಗೆ ಗೊತ್ತಿತ್ತು. ಆಗಲೇ ಮಾತುಕತೆಗೆ ಕರೆಯಬಹುದಿತ್ತು. ಆದರೆ ನಾವು ಅಹೋರಾತ್ರಿ ಧರಣಿ ಮುಗಿಸಿ ಮೆರವಣಿಗೆ ಹೊರಡುವ ಹೊತ್ತಿಗೆ ಸಿಎಂ ಪತ್ರ ಬರೆದಿದ್ದಾರೆ. ಯಡಿಯೂರಪ್ಪ ಸಹ ಕಾರ ಕೊಡಲಿಲ್ಲ. ರಾಜಕೀಯ ಮಾಡು ತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಜಿಂದಾಲ್ ವಿಚಾರದಲ್ಲಿ ರಾಜಕೀಯ ಮಾಡುವ ಅಗತ್ಯ ನನಗಿಲ್ಲ. ನನಗೆ ರಾಜ್ಯ ಒಳಿತು ಮುಖ್ಯ ಎಂದು ಹೇಳಿದರು.