ಛತ್ರಪತಿ ಶಿವಾಜಿ ಜಯಂತಿ ಕುರಿತು ಪೂರ್ವ ಸಿದ್ಧತಾ ಸಭೆ
ಮೈಸೂರು

ಛತ್ರಪತಿ ಶಿವಾಜಿ ಜಯಂತಿ ಕುರಿತು ಪೂರ್ವ ಸಿದ್ಧತಾ ಸಭೆ

February 6, 2020

ಮೈಸೂರು, ಫೆ.5- ಛತ್ರಪತಿ ಶಿವಾಜಿ ಜಯಂತಿ ಆಚರಣೆ ಕುರಿತಂತೆ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಆರ್.ಪೂರ್ಣಿಮಾ ಅಧ್ಯಕ್ಷತೆಯಲ್ಲಿ ಪೂರ್ವ ಸಿದ್ಧತಾ ಸಭೆ ನಡೆಸಲಾಯಿತು.

ಫೆಬ್ರವರಿ 19ರಂದು ಛತ್ರಪತಿ ಶಿವಾಜಿ ಜಯಂತಿ ನಡೆಯಲಿದ್ದು, ಈ ಕುರಿತು ಶಿವಾಜಿ ಜಯಂ ತ್ಯೋತ್ಸವ ಆಚರಣೆ ಸಮಿತಿಯೊಂದಿಗೆ ಆಚರಣೆಗೆ ಅಗತ್ಯವಿರುವ ವ್ಯವಸ್ಥೆಗಳ ನಿರ್ವಹಣೆ ಕುರಿತು ಚರ್ಚಿಸಲಾಯಿತು. ಅಂದು ಬೆಳಿಗ್ಗೆ 10 ಗಂಟೆಗೆ ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ದಿಂದ ಮೆರವಣಿಗೆ ನಡೆಸಿ ಬಳಿಕ ಕಲಾಮಂದಿರ ದಲ್ಲಿ ವೇದಿಕೆ ಕಾರ್ಯಕ್ರಮ ನಡೆಸುವ ಬಗ್ಗೆ ಪೂರ್ವಭಾವಿ ಸಭೆಯಲ್ಲಿ ಚರ್ಚಿಸಿದರು.

ನಿಗದಿತ ಸಮಯಕ್ಕೆ ಮೆರವಣಿಗೆ ನಡೆಸಬೇಕು. ಇಲ್ಲದಿದ್ದರೆ ವೇದಿಕೆ ಕಾರ್ಯಕ್ರಮಕ್ಕೆ ತಡವಾಗುತ್ತದೆ. ವಿನಾಕಾರಣ ಅತಿಥಿಗಳ ಸಮಯ ವ್ಯರ್ಥ ಮಾಡು ವುದು ಬೇಡ ಎಂದು ಅಪರ ಜಿಲ್ಲಾಧಿಕಾರಿ ಸಮಿತಿಗೆ ಸೂಚನೆ ನೀಡಿದರು. ಮೆರವಣಿಗೆಗೆ ಹಲವು ಊರು ಗಳಿಂದ ಮಹಿಳೆಯರು ನಿಗದಿತ ಸಮಯಕ್ಕೂ ಮುಂಚೆ ಬಂದಿರುತ್ತಾರೆ. ಹೀಗಾಗಿ ಮೆರವಣಿಗೆ ಹೊರಡುವ ಸ್ಥಳದಲ್ಲಿ ಇ-ಶೌಚಾಲಯ ವ್ಯವಸ್ಥೆ ಹಾಗೂ ಕುಡಿ ಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಸಮಿತಿಯ ಸದಸ್ಯರೊಬ್ಬರು ಮನವಿ ಮಾಡಿದರು. ಈ ಬಗ್ಗೆ ಪ್ರತಿ ಕ್ರಿಯಿಸಿದ ಅಪರ ಜಿಲ್ಲಾಧಿಕಾರಿ, ನೀರಿನ ವ್ಯವಸ್ಥೆ ಮಾಡಲು ನಗರಪಾಲಿಕೆ ಅಧಿಕಾರಿಗೆ ತಿಳಿಸಿ, ಇ-ಶೌಚಾಲಯ ವ್ಯವಸ್ಥೆ ಕಲ್ಪಿಸುವ ಬಗ್ಗೆ ವಿಚಾರ ಮಾಡುವುದಾಗಿ ತಿಳಿಸಿದರು. ಸಭೆಯಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಹೆಚ್.ಚೆನ್ನಪ್ಪ, ಕನ್ನಡಪರ ಸಂಘಟನೆಯ ಮುಖಂ ಡರು ಹಾಗೂ ಶಿವಾಜಿ ಜಯಂತ್ಯೋತ್ಸವ ಆಚರಣೆ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Translate »