ಮೈಸೂರು,ಮಾ.2(ಆರ್‍ಕೆ)-ಮೈಸೂರು ಜಿಲ್ಲೆಯಲ್ಲಿ ಆರಂಭ ವಾಗಿರುವ ಆರ್ಥಿಕ ಗಣತಿ ಕಾರ್ಯದಲ್ಲಿ ಪ್ರಗತಿ ಸಾಧಿಸುವಂತೆ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮೈಸೂರಿನ ಡಿಸಿ ಕಚೇರಿಯಲ್ಲಿ ಸೋಮವಾರ ಸಭೆ ನಡೆಸಿದ ಅವರು, 2011ರ ಜನಗಣತಿ ಪ್ರಕಾರ ಮೈಸೂರು ಜಿಲ್ಲೆಯಲ್ಲಿ 7 ಲಕ್ಷ ಕುಟುಂಬಗಳಿದ್ದು, ಈವರೆಗೆ 27,000 ಕುಟುಂಬಗಳ ಗಣತಿ ಮಾಡ ಲಾಗಿದೆ. ಅದಕ್ಕಾಗಿ ನೇಮಕಗೊಂಡಿರುವ 468 ಗಣತಿದಾರರ ಪೈಕಿ ಕೇವಲ 84 ಮಂದಿ ಮಾತ್ರ ಕ್ರಿಯಾಶೀಲರಾಗಿದ್ದಾರೆ ಎಂದರು.
ಮೊದಲ ಹಂತದಲ್ಲಿ 350 ಮೇಲ್ವಿಚಾರಕರನ್ನು ನೇಮಕ ಮಾಡ ಬೇಕಾಗಿದ್ದು, ಅದರಲ್ಲಿ 29 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಾರ್ಚ್ 31ರೊಳಗಾಗಿ ಗಣತಿ ಕಾರ್ಯ ಪೂರ್ಣಗೊಳಿಸಬೇಕಾ ಗಿರುವುದರಿಂದ ನಿಯೋಜನೆಗೊಂಡ ಕಾರ್ಯಕರ್ತರು ಪರಿಣಾಮ ಕಾರಿಯಾಗಿ ಕೆಲಸ ಮಾಡುವಂತೆ ನೋಡಿಕೊಳ್ಳಿ ಎಂದರು. ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಎನ್.ಕೃಷ್ಣಮೂರ್ತಿ, ಜಿಲ್ಲಾ ಸಾಂಖ್ಯಿಕ ಕಚೇರಿ ಸಹಾಯಕ ನಿರ್ದೇಶಕ ಎಂ.ಪ್ರಕಾಶ್, ಅಸಿಸ್ಟೆಂಟ್ ಸ್ಟ್ಯಾಟಿ ಸ್ಟಿಕಲ್ ಆಫೀಸರ್ ದಾಕ್ಷಾಯಿಣಿ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹ ನಿರ್ದೇಶಕ ಕೆ.ಜಿ.ರಾಜೇಂದ್ರ, ಉಪನಿರ್ದೇಶಕ ಡಾ. ಪಾಂಡು ರಂಗ, ಜಿಲ್ಲಾ ಗಣತಿದಾರರಾದ ಉಮಾಶಂಕರ್, ವಿನೋದ್ ರಾಜ್, ಮಹಾಂತೇಶ ಸೇರಿದಂತೆ ಹಲವರು ಸಭೆಯಲ್ಲಿ ಹಾಜರಿದ್ದರು