ಮೈಸೂರು, ಆ.24(ಪಿಎಂ)- ಸಾಧಕ ಮಹನೀಯರು ತಮ್ಮ ಆತ್ಮಕಥನ ಬರೆ ಯುವ ಮೂಲಕ ಯುವ ಪೀಳಿಗೆ ಹಾಗೂ ಮುಂದಿನ ತಲೆಮಾರಿನ ಮಾರ್ಗದರ್ಶ ನಕ್ಕೆ ಅನುಕೂಲ ಕಲ್ಪಿಸಬೇಕು ಎಂದು ನವ ದೆಹಲಿಯ ಭಾರತೀಯ ಕೃಷಿ ಸಂಶೋ ಧನಾ ಪರಿಷತ್‍ನ ಮಹಾ ನಿರ್ದೇಶಕರೂ ಆದ ಮಣಿಪುರ ರಾಜ್ಯದ ಇಂಫಾಲ್‍ನ ಕೇಂದ್ರ ಕೃಷಿ ವಿಶ್ವವಿದ್ಯಾನಿಲಯದ ಕುಲಾಧಿ ಪತಿ ಡಾ.ಎಸ್.ಅಯ್ಯಪ್ಪನ್ ತಿಳಿಸಿದರು.
ಮೈಸೂರು ವಿವಿಯ ರಾಣಿಬಹದ್ದೂರ್ ಸಭಾಂಗಣದಲ್ಲಿ ಮೈಸೂರು ವಿಶ್ವವಿದ್ಯಾ ನಿಲಯ ಹಿರಿಯ ವಿದ್ಯಾರ್ಥಿಗಳ ಸಂಘದ (ಮೈವಿವಿಹಿವಿಸ) ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಹಿರಿಯ ವಿದ್ಯಾರ್ಥಿಗಳ ಜಾಗತಿಕ ಸಮಾವೇಶ ಮತ್ತು ಅಗ್ರಮಾನ್ಯ ಹಿರಿಯ ವಿದ್ಯಾರ್ಥಿ ಪ್ರಶಸ್ತಿ ಪ್ರದಾನ ಸಮಾ ರಂಭದಲ್ಲಿ ಅತಿಥಿಯಾಗಿ ಮಾತನಾಡಿದರು.
ಇಂದು ಪ್ರಶಸ್ತಿ ಪುರಸ್ಕøತರಾದ ಮಹ ನೀಯರು ಮಾಡಿರುವ ಸಾಧನೆ ಸಾಮಾನ್ಯ ವಲ್ಲ. ಇವರು ಸಾಧನೆಯ ಹಾದಿಯಲ್ಲಿ ಎದು ರಾದ ಎಲ್ಲಾ ಕಠಿಣ ಸವಾಲು ಮೆಟ್ಟಿ ನಿಂತಿದ್ದು, ಒಬ್ಬೊಬ್ಬರದು ಒಂದೊಂದು ದಂತಕಥೆ ಯಾಗಿವೆ. ಈ ಎಲ್ಲರ ಸಾಧನೆಯ ಹೆಜ್ಜೆ ಗುರುತುಗಳು ದಾಖಲಾಗುವ ಮೂಲಕ ನಮ್ಮ ಯುವ ಪೀಳಿಗೆ ಮತ್ತು ಮುಂದಿನ ತಲೆ ಮಾರಿಗೆ ಆದರ್ಶ ಹಾಗೂ ಮಾರ್ಗದರ್ಶನ ವಾಗಬೇಕು. ಈ ನಿಟ್ಟಿನಲ್ಲಿ ಎಲ್ಲಾ ಸಾಧಕರು ಆತ್ಮಕಥನ ಬರೆಯಬೇಕು ಎಂದು ಕೋರಿದರು.
ಸ್ವಂತ ಊರಲ್ಲಿ ದೊರೆಯುವ ಪ್ರಶಸ್ತಿಗೆ ಮುಂದೆ ಯಾವ ಪ್ರತಿಷ್ಠಿತ ಪ್ರಶಸ್ತಿಯೂ ಸಮನಾಗದು. ಅಂತಹ ಭಾವನಾತ್ಮಕ ಸೆಳೆತÀ ಸ್ವಂತ ಊರಿಗೆ ಇರುತ್ತದೆ. ಇಂದು ಪ್ರಶಸ್ತಿ ಪುರಸ್ಕøತರಾದ 7 ಮಂದಿಯೂ ಸಪ್ತ ಋಷಿ ಗಳು ಇದ್ದಂತೆ. ಅಂತಹ ತಪಸ್ಸು ಮಾಡಿ ಸಮಾಜಕ್ಕೆ ನೆರವಾಗಿದ್ದಾರೆ. ಪದ್ಮಶ್ರೀ ಡಾ. ಸಿ.ಎನ್.ಮಂಜುನಾಥ್ ಹೃದಯವಂತರು. ಇವರು ಹೃದಯವಂತಿಕೆಯಿಂದ ಅನಾ ರೋಗ್ಯ ಹೃದಯದ ದುರಸ್ತಿಗೊಳಿಸುತ್ತಾರೆ ಎಂದು ಅಭಿಮಾನ ವ್ಯಕ್ತಪಡಿಸಿದರು.
ಇಂದಿನ ಮತ್ತೊಬ್ಬ ಪ್ರಶಸ್ತಿ ಪುರಸ್ಕøತ ಪದ್ಮಭೂಷಣ ಡಾ.ಎಂ.ಮಹದೇವಪ್ಪ ಕೃಷಿ ಋಷಿ. ಇವರನ್ನು ಮೈಸೂರು ವಿವಿ ಹಿರಿಯ ವಿದ್ಯಾರ್ಥಿ ಎನ್ನುವ ಬದಲು ಹರಿಯದ ಹಸಿರು ವಿದ್ಯಾರ್ಥಿ ಎನ್ನು ವುದೇ ಸೂಕ್ತ ಎಂದು ಬಣ್ಣಿಸಿದರು.
ನನಗೂ ಮೈಸೂರು ವಿವಿಗೂ ನೇರ ಸಂಬಂಧವಿಲ್ಲ. ಆದರೆ ನಮ್ಮ ತಾತ ಚಂದ್ರಶೇಖರಶಾಸ್ತ್ರಿ ಮೈಸೂರು ವಿವಿಯಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿದ್ದವರು. ಉನ್ನತ ಶಿಕ್ಷಣ ವ್ಯವಸ್ಥೆಗೆ ಕೊಡುಗೆ ನೀಡುವ ನಿಟ್ಟಿ ನಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಹಿರಿಯ ವಿದ್ಯಾರ್ಥಿಗಳ ಸಂಘದ ಮಹತ್ವದ ಪಾತ್ರ ವಹಿಸುವಂತಾಗಲಿ. ಪ್ರಸಕ್ತ ಸಾಲಿನಲ್ಲಿ ಸಂಘದಲ್ಲಿ ಕನಿಷ್ಠ 5 ಸಾವಿರ ಸದಸ್ಯತ್ವ ಪಡೆಯುವಂತಾಗಿ ಸಂಘಟನೆ ಮತ್ತಷ್ಟು ಸದೃಢವಾಗಲಿ ಎಂದು ಹಾರೈಸಿದರು.
ಸಂಘದ ಮಹಾ ಪೋಷಕರೂ ಆದ ಮೈಸೂರು ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಮಾತನಾಡಿ, ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಆಳ್ವಿಕೆ ಕಾಲ ದಲ್ಲಿ ಮೈಸೂರಿನಲ್ಲಿ ಶಿಕ್ಷಣಕ್ಕೆ ಒತ್ತು ನೀಡ ಲಾಯಿತು. ಆ ಬಳಿಕ 10ನೇ ಚಾಮರಾಜ ಒಡೆಯರ್ ಶಿಕ್ಷಣದ ಕ್ಷೇತ್ರದಲ್ಲಿ ಅನೇಕ ಸುಧಾರಣೆ ತಂದರು. ನಂತರ ಆಡಳಿತದ ಚುಕ್ಕಾಣಿ ಹಿಡಿದ ನಾಲ್ವಡಿ ಕೃಷ್ಣರಾಜ ಒಡೆ ಯರ್ ಮೈಸೂರು ವಿವಿ ಸ್ಥಾಪಿಸಿ ಉನ್ನತ ಶಿಕ್ಷಣಕ್ಕೆ ಉತ್ತೇಜನ ನೀಡಿದರು. ಶತ ಮಾನ ಕಂಡಿರುವ ಮೈಸೂರು ವಿವಿಯಲ್ಲಿ ಹಲವು ಸಾಧಕರು ಹೊರಹೊಮ್ಮಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಪ್ರಶಸ್ತಿ ಪ್ರದಾನ: ಇದಕ್ಕೂ ಮುನ್ನ ಪದ್ಮ ಭೂಷಣ ಡಾ.ಎಂ.ಮಹದೇವಪ್ಪ (ಕೃಷಿ), ಪದ್ಮಶ್ರೀ ಡಾ.ಸಿ.ಎನ್.ಮಂಜುನಾಥ್ (ವೈದ್ಯ ಕೀಯ), ಪದ್ಮಶ್ರೀ ಪ್ರೊ.ಜೆ.ಎ.ಕೆ.ತರೀನ್ (ಆಡಳಿತ), ಪ್ರೊ.ರಾಮಕೃಷ್ಣ ರೆಡ್ಡಿ (ರಾಜ್ಯ ಶಾಸ್ತ್ರ/ಅಮೆರಿಕ), ಪ್ರೊ.ಟಿ. ಆರ್.ಸೀತಾ ರಾಮ್ (ಇಂಜಿನಿಯರಿಂಗ್), ಪ್ರೊ.ಆರ್. ಇಂದಿರಾ (ಸಮಾಜಶಾಸ್ತ್ರ), ರಾಜಗೋಪಾಲ ಕಡಾಂಬಿ (ಕ್ರೀಡೆ) ಅವರಿಗೆ ಸಂಘದ `ಅಗ್ರ ಮಾನ್ಯ ಹಿರಿಯ ವಿದ್ಯಾರ್ಥಿ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಮೈಸೂರು ವಿವಿ ಕುಲ ಪತಿ ಪ್ರೊ.ಜಿ.ಹೇಮಂತ್‍ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಂಘದ ಅಧ್ಯಕ್ಷ ಡಾ.ವಸಂತ ಕುಮಾರ್ ತಿಮಕಾಪುರ, ಉಪಾಧ್ಯಕ್ಷರಾದ ಎನ್.ನಿರಂಜನ್ ನಿಕ್ಕಮ್, ಪ್ರೊ.ಹೆಚ್.ಎಂ. ವಸಂತಮ್ಮ, ಕಾರ್ಯದರ್ಶಿ ಪ್ರೊ.ಎಸ್. ಉಮೇಶ್ ಮತ್ತಿತರರು ಹಾಜರಿದ್ದರು.