ಮೊಟ್ಟ ಮೊದಲು ಮೀಸಲಾತಿ ಪ್ರಯೋಗ ಮಾಡಿದ್ದೆ ಮೈಸೂರು ಸಂಸ್ಥಾನ
ಮೈಸೂರು

ಮೊಟ್ಟ ಮೊದಲು ಮೀಸಲಾತಿ ಪ್ರಯೋಗ ಮಾಡಿದ್ದೆ ಮೈಸೂರು ಸಂಸ್ಥಾನ

August 25, 2019

ಮೈಸೂರು, ಆ.24(ಎಂಕೆ)- ಮೊಟ್ಟ ಮೊದಲು ಮೀಸಲಾತಿ ಯನ್ನು ಪ್ರಯೋಗ ಮಾಡಿದ ಕೀರ್ತಿ ಮೈಸೂರು ಸಂಸ್ಥಾನಕ್ಕೆ ಸಲ್ಲುತ್ತದೆ ಎಂದು ಹಿರಿಯ ನ್ಯಾಯವಾದಿಗಳೂ ಆದ ಮಾಜಿ ಅಡ್ವೋಕೆಟ್ ಜನರಲ್ ಪೆÇ್ರ. ರವಿವರ್ಮಾ ಕುಮಾರ್ ಹೇಳಿದರು.

ಮೈಸೂರು ವಿವಿ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ಡಾ.ಬಿ.ಆರ್ ಅಂಬೇಡ್ಕರ್ ಪೀಠದ ವತಿಯಿಂದ ವಿe್ಞÁನ ಭವನದಲ್ಲಿ ಆಯೋಜಿಸಿದ್ದ 2 ದಿನಗಳ `ನೂರು ವರ್ಷಗಳ ಮೀಸಲಾತಿ ನಡಿಗೆ… ಒಂದು ಪರಿವೀಕ್ಷಣೆ’ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

1874ರಲ್ಲಿ 10 ಹುದ್ದೆಗಳ ಪೈಕಿ ಎರಡು ಹುದ್ದೆಗಳನ್ನು ಬ್ರಾಹ್ಮಣ ರಿಗೆ ನೀಡಿ, ಇನ್ನುಳಿದ ಹುದ್ದೆಗಳನ್ನು ಇತರರಿಗೆ ನೀಡಬೇಕು ಎಂಬುದಾಗಿತ್ತು. ಆದರೆ, 1918ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆ ಯರ್ ಜಾರಿಗೆ ತಂದ ಮಿಲ್ಲರ್ ಆಯೋಗದ ವರದಿಯಿಂದ ಮೀಸಲಾತಿಗೆ ಪ್ರಮುಖ ಆಯಾಮ ದೊರಕಿತು. ಇದನ್ನು ವಿರೋಧಿಸಿ ಆಗಿನ ದಿವಾನರಾಗಿದ್ದ ಸರ್.ಎಂ.ವಿಶ್ವೇಶ್ವರಯ್ಯ ಅವರು ರಾಜೀನಾಮೆ ನೀಡಿದರು. ಆದರೆ ದೃಢ ನಿರ್ಧಾರವನ್ನು ಕೈಗೊಂಡಿದ್ದ ನಾಲ್ವಡಿಯವರು ಹಿಂಜರಿಯದೆ ಮಿಲ್ಲರ್ ವರದಿಯನ್ನು ಜಾರಿಗೆ ತಂದರು ಎಂದು ತಿಳಿಸಿದರು.

ಒಂದಲ್ಲಾ ಒಂದು ರೀತಿಯಲ್ಲಿ ಮೀಸಲಾತಿಯನ್ನು ತೆಗೆದು ಹಾಕಲು ಪ್ರಯತ್ನಗಳು ನಡೆಯುತ್ತಲೇ ಇವೆ. ಅಂಬೇಡ್ಕರ್ ಅವರು ಮೀಸಲಾತಿಗಾಗಿ ಹೋರಾಟ ನಡೆಸುವಾಗ ಕೆಲವರು ಅವರ ಬೆನ್ನೆಲುಬಾಗಿ ನಿಂತಿದ್ದರೂ. ಪ್ರಮುಖವಾಗಿ ಗಾಂಧಿವಾದಿಯಾಗಿದ್ದ ಕೋಲಾರ ಜಿಲ್ಲೆಯ ದಲಿತ ಸಮುದಾಯದ ಟಿ.ಚನ್ನಯ್ಯ, ಸಂವಿಧಾನ ರಚನಾ ಸಭೆಯಲ್ಲಿ ಪಾಲ್ಗೊಂಡು ದಲಿತರಿಗೆ ಮೀಸ ಲಾತಿ ಬೇಕು ಎಂದು ಒತ್ತಾಯಿಸಿದ್ದರು ಎಂದು ಹೇಳಿದರು.

ಮೀಸಲಾತಿಯೇ ನಮ್ಮ ಸಮಸ್ಯೆಗೆ ಪರಿಹಾರವಲ್ಲ. ಆದರೆ ಅಸಮಾನತೆ ಬೆಳೆಯದಂತೆ ತಡೆಯಲು ಮೀಸಲಾತಿ ಬೇಕು. ಸಾರ್ವಜನಿಕ ಉದ್ದಿಮೆಗಳನ್ನು ಖಾಸಗಿಯವರಿಗೆ ನೀಡುತ್ತಿರುವ ಹೊತ್ತಿನಲ್ಲಿ, ಖಾಸಗಿ ವಲಯದಲ್ಲಿ ಮೀಸಲಾತಿ ಕೇಳುತ್ತಿರುವುದು ಸರಿಯಲ್ಲ. ಬದಲಾಗಿ ಸಾರ್ವಜನಿಕ ಉದ್ದಿಮೆಗಳನ್ನು ರಕ್ಷಿಸಬೇಕು. ಜಾತಿ ಜಾತಿಗಳ ನಡುವೆ ಉಂಟಾಗುತ್ತಿರುವ ಕಂದಕ, ಅಸಮಾನತೆ ಯನ್ನು ಹೊರಹಾಕಲು ಸಂವಿಧಾನದಲ್ಲಿರುವ ರಾಜ್ಯ ನೀತಿ ನಿರ್ದೇ ಶಕ ತತ್ವಗಳು ಸಮರ್ಪಕವಾಗಿ ಜಾರಿಯಾಗಬೇಕು ಎಂದರು.

ದಲಿತರಿಗೆ, ಹೋರಾಟಗಾರರಿಗೆ ಚೈತನ್ಯವನ್ನು ನೀಡುವ ಮಾಹಿತಿ ಯನ್ನು ಸಹ ಮುಚ್ಚಿಡಲಾಗುತ್ತಿದೆ. 8 ವರ್ಷಗಳಿಂದ ಒಳಮೀಸ ಲಾತಿ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಲಿಲ್ಲ. ಸಿದ್ದರಾಮಯ್ಯ ರಚಿಸಿದ್ದ ಕಾಂತರಾಜ್ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗವು ನಡೆಸಿದ ಜಾತಿ ಸಮೀಕ್ಷೆ ಮಾಹಿತಿಯನ್ನು ಇಂದಿಗೂ ಬಿಡುಗಡೆ ಮಾಡಿಲ್ಲ ಎಂದರು. ಕಾರ್ಯಕ್ರಮದಲ್ಲಿ ಕುಲಪತಿ ಪೆÇ್ರ.ಜಿ.ಹೇಮಂತ್ ಕುಮಾರ್, ಕಲಾ ನಿಕಾಯದ ಡೀನ್ ಪೆÇ್ರ.ಮಹದೇವ್, ಸಂದರ್ಶಕ ಪ್ರಾಧ್ಯಾಪಕ ಪ್ರೊ.ಬಸವರಾಜು ದೇವನೂರು, ಪೆÇ್ರ.ಜೆ. ಸೋಮ ಶೇಖರ್, ಡಾ.ಎಸ್.ನರೇಂದ್ರಕುಮಾರ್ ಉಪಸ್ಥಿತರಿದ್ದರು.

Translate »