ಕುಡಿಯುವ ನೀರು ಪೂರೈಸಲು ತ್ವರಿತವಾಗಿ ಸ್ಪಂದಿಸಿ
ಮೈಸೂರು

ಕುಡಿಯುವ ನೀರು ಪೂರೈಸಲು ತ್ವರಿತವಾಗಿ ಸ್ಪಂದಿಸಿ

January 23, 2019

ಮೈಸೂರು: ಬೇಸಿಗೆ ಆರಂಭವಾಗಿರುವುದರಿಂದ ಕುಡಿಯುವ ನೀರು ಪೂರೈಸಲು ತ್ವರಿತವಾಗಿ ಸ್ಪಂದಿಸ ಬೇಕೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಭೈರೇ ಗೌಡ ಅವರು ಇಲಾಖೆ ಅಧಿಕಾರಿಗಳಿಗೆ ಇಂದಿಲ್ಲಿ ತಾಕೀತು ಮಾಡಿದ್ದಾರೆ.

ಮೈಸೂರಿನ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ರಾಜ್ಯದ ಎಲ್ಲಾ 30 ಜಿಲ್ಲೆಗಳ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಉಪ ಕಾರ್ಯದರ್ಶಿಗಳೊಂದಿ ಗಿನ ಪ್ರಗತಿ ಪರಿಶೀಲನಾ ಸಭೆಯ ಅಧ್ಯ ಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು, ರಾಜ್ಯ ದಲ್ಲಿ ಗ್ರಾಮೀಣ ಭಾಗದ ಜನರು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ ಎಂದರು.

ಈಗಾಗಲೇ ಕೆಲವು ಜಿಲ್ಲೆಗಳು ಬರ ಪೀಡಿತ ಎಂದು ಘೋಷಿಸಲ್ಪಟ್ಟಿವೆ. ಕುಡಿ ಯುವ ನೀರು ಪೂರೈಕೆ ಯೋಜನೆಗಳಿಗೆ ಸರ್ಕಾರ ಈಗಾಗಲೇ ಪ್ರತೀ ಜಿಲ್ಲೆಗೆ 4.5 ಕೋಟಿ ರೂ. ಅನುದಾನ ನೀಡಿದೆ. ಈ ಉದ್ದೇ ಶಕ್ಕೆ ಹೆಚ್ಚುವರಿಯಾಗಿ ಹಣ ನೀಡುತ್ತೇವೆ. ಜಿಪಂ ಅಧಿಕಾರಿಗಳು ಕುಡಿಯುವ ನೀರು ಪೂರೈಸುವ ಕೆಲಸ ಪರಿಣಾಮಕಾರಿ ಯಾಗಿ ಮಾಡಬೇಕು ಎಂದರು.
ಈ ನಿಟ್ಟಿನಲ್ಲಿ ಅಧಿಕಾರಿಗಳು ತ್ವರಿತಗತಿ ಯಲ್ಲಿ ಸ್ಪಂದಿಸದಿದ್ದರೆ ಸರ್ಕಾರ ಎಷ್ಟೇ ಹಣ ಕೊಟ್ಟರೂ ಪ್ರಯೋಜನವಾಗದು ಎಂದ ಸಚಿವರು, ಜನರಿಂದ ದೂರು ಬಂದ ತಕ್ಷಣ ನೀರು ಪೂರೈಸಲು ಮುಂದಾಗಬೇಕು ಎಂದೂ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈಗಾಗಲೇ ಸ್ವಚ್ಛ ಭಾರತ್ ಅಭಿಯಾನ ದಡಿ ಕಾರ್ಯಪ್ರವೃತ್ತರಾಗಿರುವ ಅಧಿಕಾರಿ ಗಳು, ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ ಸ್ವಚ್ಛತೆ ಕಾಪಾಡಲು ಅಧಿಕಾರಿಗಳು ಶ್ರಮಿ ಸುವ ಮೂಲಕ ರಾಜ್ಯವನ್ನು ಸ್ವಚ್ಛತೆಯಲ್ಲಿ ಪ್ರಥಮ ಸ್ಥಾನಕ್ಕೆ ಕೊಂಡೊಯ್ಯುವುದು ಎಲ್ಲರ ಜವಾಬ್ದಾರಿ ಎಂದೂ ಸಚಿವರು ಇದೇ ವೇಳೆ ತಿಳಿಸಿದರು.

ತೆರಿಗೆ ವಸೂಲಿಯಲ್ಲಿ ರಾಜ್ಯ ಕೇವಲ ಶೇ.53ರಷ್ಟು ಸಾಧನೆ ಮಾಡಿರುವುದು ಅಧಿಕಾರಿಗಳ ಬೇಜವಾಬ್ದಾರಿಗೆ ಸಾಕ್ಷಿಯಾ ಗಿದೆ. ಹಳೇ ಬಾಕಿ ಸಂಗ್ರಹದ ಪ್ರಗತಿ ಬಹಳ ಕಡಿಮೆ ಇರುವುದರಿಂದ ಸಂಪನ್ಮೂಲ ಕ್ರೋಢೀಕರಿಸದಿದ್ದರೆ ಅಭಿವೃದ್ಧಿ ಯೋಜನೆ ಗಳು ಕುಂಠಿತಗೊಳ್ಳುತ್ತವೆ ಎಂದು ಸಚಿ ವರು ಅಸಮಾಧಾನ ವ್ಯಕ್ತಪಡಿಸಿದರು.

ರಸ್ತೆ ನಿರ್ವಹಣೆ, ಉದ್ಯೋಗ ಖಾತರಿ ಯೋಜನೆಗಳಿಗೂ ಆದ್ಯತೆ ನೀಡುವ ಮೂಲಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾ ಯತ್ ರಾಜ್ ಇಲಾಖೆಯನ್ನು ಪ್ರಗತಿಪಥದಲ್ಲಿ ಕೊಂಡೊಯ್ಯಬೇಕಾಗಿದೆ. ಶಿವಮೊಗ್ಗ ಅತೀ ಕಡಿಮೆ(ಶೇ.25) ಪ್ರಗತಿ ಸಾಧಿಸಿದರೆ, ಬೆಂಗ ಳೂರು ಗ್ರಾಮಾಂತರ ಜಿಲ್ಲೆಯ ಅತಿ ಹೆಚ್ಚು ಶೇ.90 ಸಾಧನೆ ಮಾಡಿದೆ ಎಂದರು.
ಶಿವಮೊಗ್ಗ ಜಿಪಂ ಸಿಇಓ ಅವರನ್ನು ತರಾಟೆಗೆ ತೆಗೆದುಕೊಂಡ ಸಚಿವರು, ನಿಮ್ಮ ಇಂಜಿನಿಯರ್‍ಗಳು ಕಟ್ ಅಂಡ್ ಪೇಸ್ಟ್ ಎಸ್ಟಿಮೇಟ್ ತಯಾರಿಸುವುದಕ್ಕಷ್ಟೇ ಸೀಮಿತ. ಅವರಿಗೆ ಒಂದು ಯೋಜನೆ ಬಗ್ಗೆ ಎಸ್ಟಿಮೇಟ್ ತಯಾರಿಸಲು ಬರುತ್ತದೆಯೇ ಕೇಳಿ ನೋಡಿ ಎಂದು ಗರಂ ಆದರು.

ಸಚಿವರು 2 ತಿಂಗಳಿಗೊಮ್ಮೆ ಬೆಂಗಳೂ ರಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸುತ್ತಿ ದ್ದರು. ಇದೇ ಪ್ರಥಮ ಬಾರಿ ಮೈಸೂರಲ್ಲಿ ಸಭೆ ಆಯೋಜಿಸಲಾಗಿದೆ.

ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್, ಕಾರ್ಯ ದರ್ಶಿ ಅಯ್ಯಪ್ಪ, ನಿರ್ದೇಶಕರಾದ ಎಂ.ಕೆ. ಕೆಂಪೇಗೌಡ, ಭುವನಹಳ್ಳಿ ನಾಗರಾಜ್, ನೀರು ಸರಬರಾಜು ಕಮೀಷ್ನರ್ ವಿಶಾಲ್, ಚೀಫ್ ಇಂಜಿನಿಯರ್ ಪ್ರಕಾಶ್ ಕುಮಾರ್, ಕರ್ನಾಟಕ ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಚೀಫ್ ಇಂಜಿನಿಯರ್ ಮಹದೇವಸ್ವಾಮಿ ಭಾಗವಹಿಸಿದ್ದರು.

ಮೈಸೂರು ಜಿಪಂ ಸಿಇಓ ಕೆ.ಜ್ಯೋತಿ, ಉಪ ಕಾರ್ಯದರ್ಶಿ ಶಿವಕುಮಾರ ಸ್ವಾಮಿ, ಮುಖ್ಯ ಯೋಜನಾಧಿಕಾರಿ ಪ್ರಭು ಸ್ವಾಮಿ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳ ಜಿಪಂ ಸಿಇಓ ಮತ್ತು ಉಪ ಕಾರ್ಯ ದರ್ಶಿಗಳು ತಮ್ಮ ಜಿಲ್ಲೆಗಳಲ್ಲಿನ ಪ್ರಗತಿ ಕುರಿತು ಸಚಿವರಿಗೆ ಮಾಹಿತಿ ನೀಡಿದರು.

Translate »