`ಮತ್ತೊಮ್ಮೆ ಮೋದಿ-2019’ಗಾಗಿ ಮೈಸೂರಲ್ಲಿ ರಸ್ತೆ ಓಟ
ಮೈಸೂರು

`ಮತ್ತೊಮ್ಮೆ ಮೋದಿ-2019’ಗಾಗಿ ಮೈಸೂರಲ್ಲಿ ರಸ್ತೆ ಓಟ

January 14, 2019

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಚಿತ್ರವಿರುವ, ಕೇಸರಿ ಬಣ್ಣದ ತೋಳಿರುವ, ಬಿಳಿ ಬಣ್ಣದ ಟೀ ಶರ್ಟ್ ಧರಿಸಿದ್ದ ನೂರಾರು ಮಂದಿ `ಮತ್ತೊಮ್ಮೆ ಮೋದಿ-2019’ ಘೋಷಣೆಯೊಂದಿಗೆ ಭಾನುವಾರ ಮೈಸೂರಿನ ರಸ್ತೆಗಳಲ್ಲಿ ಓಡಿದರು. ಇವರೆಲ್ಲರೂ, ನರೇಂದ್ರ (ಸ್ವಾಮಿ ವಿವೇಕಾನಂದ) ನಿಂದ ಹಿಡಿದು ಆಧುನಿಕ ನರೇಂದ್ರ, ನಮ್ಮ ಮೆಚ್ಚಿನ ಪ್ರಧಾನಿಗಾಗಿ, ದೇಶಕ್ಕಾಗಿ, ಸಾಮಾಜಿಕ ಜಾಗೃತಿಗಾಗಿ ಓಡುತ್ತಿರುವುದಾಗಿ ಘೋಷಣೆ ಮೊಳಗಿಸಿದರು.

ವಿವೇಕಾನಂದ ಜನ್ಮ ದಿನಾಚರಣೆ ಪ್ರಯುಕ್ತ ನಮೋ ಭಾರತ ಮೈಸೂರು’ ಸಂಘಟನೆ ಆಶ್ರಯದಲ್ಲಿ ನಮೋ ಥಾನ್- ರನ್ ಫಾರ್ ನರೇಂದ್ರ’ ಮ್ಯಾರಥಾನ್ ಕಾರ್ಯ ಕ್ರಮ ಏರ್ಪಡಿಸಲಾಗಿತ್ತು. ಯಾದವಗಿರಿಯ ಮೈಸೂರು ಆಕಾಶವಾಣಿ ಎದುರಿನ ಚೆಲುವಾಂಬ ಉದ್ಯಾನದಲ್ಲಿ ಭಾನುವಾರ ಬೆಳಿಗ್ಗೆ ಜಮಾಯಿಸಿದ ನಮೋ ಭಾರತ್ ಕಾರ್ಯಕರ್ತರು, ಭಾರತ ಮಾತೆ ಮತ್ತು ಸ್ವಾಮಿ ವಿವೇಕಾ ನಂದ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಮ್ಯಾರಥಾನ್‍ಗೆ ಚಾಲನೆ ನೀಡಿದರು.

ಅಲ್ಲಿಂದ ಆರಂಭವಾದ ಮ್ಯಾರಥಾನ್ ಒಂಟಿಕೊಪ್ಪಲು ವೃತ್ತ, ಮಾತೃಮಂಡಳಿ ವೃತ್ತ ಬಳಸಿ ಮತ್ತೆ ಆರಂಭ ಸ್ಥಳಕ್ಕೆ ಬಂದು ತಲುಪಿತು. ಭಾಗವಹಿಸಿದ್ದ ಎಲ್ಲರಿಗೂ ರಾಮಕೃಷ್ಣಾ ಶ್ರಮ ಮತ್ತು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಪ್ರಕಟಿಸಿರುವ `ವಿವೇಕಾನಂದ ವಿದ್ಯುತ್ ವಾಣಿ’ ಕಿರು ಪುಸ್ತಕ ವಿತ ರಿಸಲಾಯಿತು. ರನ್ ಫಾರ್ ನರೇಂದ್ರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರಲ್ಲಿ ಶೇ.50ರಷ್ಟು ಮಹಿಳೆಯರೂ ಇದ್ದದ್ದು ಕಂಡು ಬಂದಿತು. ವೋಟ್ ಫಾರ್ ಮೋದಿ ಘೋಷಣೆ ಮುಗಿಲು ಮುಟ್ಟುವಂತಿತ್ತು.

ಕಾರ್ಯಕಮದಲ್ಲಿ ಯೋಗ ಗುರು ಡಾ. ರಾಘವೇಂದ ಪೈ, ನಮೋ ಭಾರತ್ ಮೈಸೂರು ಅಧ್ಯಕ್ಷ ಎಸ್.ಕೆ.ದಿನೇಶ್, ವಕೀಲ ಪಿ.ಡಿ.ಮೇದಪ್ಪ, ಸಂಚಾಲಕ ಎಂ.ಜಿ.ಯಶವಂತ್‍ಕುಮಾರ್, ಹಿರಿಯ ಪತಕರ್ತ ವಿಜಯೇಂದರಾವ್, ಭವಾನಿ ಪೈ ಇನ್ನಿತರರು ಭಾಗವಹಿಸಿದ್ದರು.

Translate »