ತ್ರಿವಳಿ ತಲಾಖ್ ನಿಷೇಧ: ಕೇಂದ್ರ ಸರ್ಕಾರದಿಂದ ಮತ್ತೆ ಸುಗ್ರೀವಾಜ್ಞೆ
ಮೈಸೂರು

ತ್ರಿವಳಿ ತಲಾಖ್ ನಿಷೇಧ: ಕೇಂದ್ರ ಸರ್ಕಾರದಿಂದ ಮತ್ತೆ ಸುಗ್ರೀವಾಜ್ಞೆ

January 14, 2019

ನವದೆಹಲಿ: ತ್ರಿವಳಿ ತಲಾಖ್ ನಿಷೇಧಿಸುವ ತನ್ನ ಸುಗ್ರೀವಾಜ್ಞೆಯನ್ನು ಕೇಂದ್ರ ಸರ್ಕಾರ ಪುನಃ ಪ್ರಕಟಿಸಿದೆ.

ಶನಿವಾರ ಹೊರಡಿಸಿದ ಮುಸ್ಲಿಂ ಮಹಿಳಾ (ಮದುವೆ ಮೇಲಿನ ಹಕ್ಕುಗಳ ರಕ್ಷಣೆ) 2019 ಆದೇಶದಂತೆ ತ್ರಿವಳಿ ತಲಾಖ್ ಮೂಲಕ ವಿಚ್ಛೇದನ ಹೊಂದುವುದು ಕಾನೂನು ಬಾಹಿರ. ಹಾಗೂ ಈ ವಿಚ್ಛೇ ದನವು ಕಾನೂನಿನಡಿ ಮಾನ್ಯವಾಗತಕ್ಕದ್ದಲ್ಲ. ಅಲ್ಲದೆ ಈ ಬಗೆಯಲ್ಲಿ ತ್ರಿವಳಿ ತಲಾಖ್ ನೀಡಿದ ಪತಿ 3 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. 2018ರ ಸೆಪ್ಟೆಂಬರ್‍ನಲ್ಲಿ ತನ್ನ ಹಿಂದಿನ ಮಸೂದೆಯ ಕೆಲ ಭಾಗಗಳಲ್ಲಿ ಪರಿವರ್ತಿಸಿ ಮತ್ತೆ ಲೋಕಸಭೆಯಲ್ಲಿ ಮಂಡಿಸಿದ್ದ ಸರ್ಕಾರ ಲೋಕಸಭೆಯಲ್ಲಿ ಮಸೂದೆ ಅಂಗೀಕಾರಗೊಳಿಸುವುದರಲ್ಲಿ ಯಶಸ್ವಿಯಾಗಿದೆ. ಇದೀಗ ತ್ರಿವಳಿ ತಲಾಖ್ ಮಸೂದೆ ರಾಜ್ಯಸಭೆ ಅಂಗಣದಲ್ಲಿದೆ. ಈ ಮಸೂದೆಯು ಸಂಸತ್ತಿನ ಅಂಗೀಕಾರ ಪಡೆಯಲು ಸಾಧ್ಯವಾಗದ ಕಾರಣ, ಮತ್ತೆ ಹೊಸ ಸುಗ್ರೀವಾಜ್ಞೆ ಜಾರಿಗೊಳಿ ಸಲಾಗಿದೆ. ಇದಕ್ಕೂ ಮುನ್ನ ಕಳೆದ ವಾರ ಸಭೆ ಸೇರಿದ್ದ ಕೇಂದ್ರ ಸಂಪುಟ ಆದೇಶದ ಮರುಪರಿಶೀಲನೆಗೆ ಒಪ್ಪಿಗೆ ನೀಡಿತ್ತು. ಪ್ರಸ್ತಾವಿತ ಕಾನೂನನ್ನು ದುರ್ಬಳಕೆ ಮಾಡಬಹುದೆಂಬ ಭೀತಿಯಿಂದ ಸರ್ಕಾರ ಕೆಲವು ಸುರಕ್ಷತಾ ಅಂಶವನ್ನೊಳಗೊಂಡಂತೆ ಈ ಹೊಸ ಸುಗ್ರೀವಾಜ್ಞೆ ನೀಡಿದೆ.

ಹೊಸ ಸುಗ್ರೀವಾಜ್ಞೆಯಲ್ಲಿನ ಕೆಲ ಅಂಶಗಳು: ಆರೋಪಿಯು ಇದೊಂದು ಜಾಮೀನು ರಹಿತ ಅಪರಾಧವಾಗಿದ್ದರೂ ಸಹ ವಿಚಾರಣೆಗೆ ಮುಂಚೆಯೇ ಜಾಮೀನಿ ಗಾಗಿ ನ್ಯಾಯಾಧೀಶರನ್ನು ಸಂಪರ್ಕಿಸಲು ಅವಕಾಶವಿದೆ. ಈ ಜಾಮೀನು ರಹಿತ ಅಪರಾಧ ದಡಿಯಲ್ಲಿ ಪೊಲೀಸರು ಪೊಲೀಸ್ ಠಾಣೆಯಲ್ಲಿಯೇ ಜಾಮೀನು ನೀಡುವುದಕ್ಕೆ ಸಾಧ್ಯವಿಲ್ಲ.

“ಪತ್ನಿಯ ಹೇಳಿಕೆ ಕೇಳಿದ ನಂತರ” ಜಾಮೀನು ನೀಡಲು ಮ್ಯಾಜಿಸ್ಟ್ರೇಟ್ ನ್ಯಾಯಾ ಧೀಶರಿಗೆ ಅವಕಾಶವಿದೆ. ಮಸೂದೆಯಲ್ಲಿ ಹೇಳಲ್ಪಟ್ಟಂತೆ ಪತ್ನಿಗೆ ಪರಿಹಾರ ನೀಡಲು ಪತಿ ಒಪ್ಪಿಗೆ ನೀಡಿದ ಬಳಿಕವಷ್ಟೇ ಜಾಮೀನು ನೀಡಲಾಗುವುದು. ಪತ್ನಿ, ಆಕೆಯ ರಕ್ತ ಸಂಬಂಧಿಗಳು ಅಥವಾ ವಿವಾಹದ ಮೂಲಕ ಸಂಬಂಧಿಗಳಾದವರು ಯಾರಾದರೂ ದೂರಿತ್ತ ಪಕ್ಷದಲ್ಲಿ ಮಾತ್ರ ಪೊಲೀಸರು ಈ ಸಂಬಂಧ ಎಫ್‍ಐಆರ್ ದಾಖಲಿಸಬಹುದು.

ಇನ್ನು ತ್ರಿವಳಿ ತಲಾಖ್ ಒಂದು ಸೂಕ್ಷ್ಮ ವಿಚಾರವಾಗಿದ್ದು, ಓರ್ವ ನ್ಯಾಯಾಧೀಶರು ಪತಿ-ಪತ್ನಿಯರ ನಡುವಿನ ವಿವಾದ ಬಗೆಹರಿಸಲು ತನ್ನ ಪ್ರಯತ್ನ ಮಾಡುವುದಕ್ಕೆ ಅವಕಾಶವಿದೆ. ಪತ್ನಿ ಸಹ ನ್ಯಾಯಾಲಯಕ್ಕೆ ಹಾಜರಾ ದಾಗಲಷ್ಟೇ ಇದು ಸಂಭವಿಸಲಿದೆ. ಒಂದು ಸಂಯುಕ್ತ ಅಪರಾಧವಾದ ತ್ರಿವಳಿ ತಲಾಕ್ ಅಪರಾಧದ ದೂರನ್ನು ಎರಡೂ ಪಕ್ಷಗಳು ಒಪ್ಪಿಕೊಂಡಲ್ಲಿ ಹಿಂಪಡೆಯುವು ದಕ್ಕೆ ಸಹ ಅವಕಾಶವಿದೆ. ಈ ಕಾನೂನು ತ್ವರಿತ ತ್ರಿವಳಿ ತಲಾಕ್ ಅಥವಾ `ತಲಾಖ್-ಇ-ಬಿಡ್ಡತ್‍ಗೆ ಮಾತ್ರ ಅನ್ವಯ. ಇನ್ನು ಸಂತ್ರಸ್ತೆ ಅಥವಾ ಆಕೆ ಚಿಕ್ಕ ಮಕ್ಕಳಿಗೆ ಪರಿಹಾರ ಒದಗಿಸುವ ಅಧಿಕಾರವನ್ನು ಇದು ಆಯಾ ನ್ಯಾಯಾಧೀಶರಿಗೆ ಬಿಡುತ್ತದೆ. ಓರ್ವ ಮಹಿಳೆ ನ್ಯಾಯಾಧೀಶರ ಮೂಲಕ ಆಕೆಯ ಚಿಕ್ಕ ಮಕ್ಕಳ ಪಾಲನ್ನು ಪಡೆಯು ವುದು ಸಾಧ್ಯ. ಈ ಸಂಬಂಧ ನ್ಯಾಯಾಧೀಶರ ತೀರ್ಮಾನ ಅಂತಿಮವಾಗಿರಲಿದೆ.

“ಪತ್ನಿಯ ಹೇಳಿಕೆ ಕೇಳಿದ ನಂತರ” ಜಾಮೀನು ನೀಡಲು ಮ್ಯಾಜಿಸ್ಟ್ರೇಟ್ ನ್ಯಾಯಾ ಧೀಶರಿಗೆ ಅವಕಾಶವಿದೆ. ಮಸೂದೆಯಲ್ಲಿ ಹೇಳಲ್ಪಟ್ಟಂತೆ ಪತ್ನಿಗೆ ಪರಿಹಾರ ನೀಡಲು ಪತಿ ಒಪ್ಪಿಗೆ ನೀಡಿದ ಬಳಿಕವಷ್ಟೇ ಜಾಮೀನು ನೀಡಲಾಗುವುದು. ಪತ್ನಿ, ಆಕೆಯ ರಕ್ತ ಸಂಬಂಧಿಗಳು ಅಥವಾ ವಿವಾಹದ ಮೂಲಕ ಸಂಬಂಧಿಗಳಾದವರು ಯಾರಾದರೂ ದೂರಿತ್ತ ಪಕ್ಷದಲ್ಲಿ ಮಾತ್ರ ಪೊಲೀಸರು ಈ ಸಂಬಂಧ ಎಫ್‍ಐಆರ್ ದಾಖಲಿಸಬಹುದು. ಇನ್ನು ತ್ರಿವಳಿ ತಲಾಖ್ ಒಂದು ಸೂಕ್ಷ್ಮ ವಿಚಾರವಾಗಿದ್ದು, ಓರ್ವ ನ್ಯಾಯಾಧೀಶರು ಪತಿ-ಪತ್ನಿಯರ ನಡುವಿನ ವಿವಾದ ಬಗೆಹರಿಸಲು ತನ್ನ ಪ್ರಯತ್ನ ಮಾಡುವುದಕ್ಕೆ ಅವಕಾಶವಿದೆ. ಪತ್ನಿ ಸಹ ನ್ಯಾಯಾಲಯಕ್ಕೆ ಹಾಜರಾ ದಾಗಲಷ್ಟೇ ಇದು ಸಂಭವಿಸಲಿದೆ. ಒಂದು ಸಂಯುಕ್ತ ಅಪರಾಧವಾದ ತ್ರಿವಳಿ ತಲಾಕ್ ಅಪರಾಧದ ದೂರನ್ನು ಎರಡೂ ಪಕ್ಷಗಳು ಒಪ್ಪಿಕೊಂಡಲ್ಲಿ ಹಿಂಪಡೆಯುವು ದಕ್ಕೆ ಸಹ ಅವಕಾಶವಿದೆ. ಈ ಕಾನೂನು ತ್ವರಿತ ತ್ರಿವಳಿ ತಲಾಕ್ ಅಥವಾ `ತಲಾಖ್-ಇ-ಬಿಡ್ಡತ್‍ಗೆ ಮಾತ್ರ ಅನ್ವಯ. ಇನ್ನು ಸಂತ್ರಸ್ತೆ ಅಥವಾ ಆಕೆ ಚಿಕ್ಕ ಮಕ್ಕಳಿಗೆ ಪರಿಹಾರ ಒದಗಿಸುವ ಅಧಿಕಾರವನ್ನು ಇದು ಆಯಾ ನ್ಯಾಯಾಧೀಶರಿಗೆ ಬಿಡುತ್ತದೆ. ಓರ್ವ ಮಹಿಳೆ ನ್ಯಾಯಾಧೀಶರ ಮೂಲಕ ಆಕೆಯ ಚಿಕ್ಕ ಮಕ್ಕಳ ಪಾಲನ್ನು ಪಡೆಯು ವುದು ಸಾಧ್ಯ. ಈ ಸಂಬಂಧ ನ್ಯಾಯಾಧೀಶರ ತೀರ್ಮಾನ ಅಂತಿಮವಾಗಿರಲಿದೆ.

Translate »