ಬೆಂಗಳೂರು: ಉಗ್ರರ ದಾಳಿಯಲ್ಲಿ ಹುತಾತ್ಮನಾದ ಯೋಧ ಗುರು ಅವರ ಕುಟುಂಬಕ್ಕೆ 25 ಲಕ್ಷ ರೂ.ಗಳ ಪರಿಹಾರವನ್ನು ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಘೋಷಿಸಿದ್ದಾರೆ.
ಜಮ್ಮುವಿನ ಪುಲ್ವಾಮಾದಲ್ಲಿ ಉಗ್ರರ ದಾಳಿಯಲ್ಲಿ ಮೃತಪಟ್ಟ ಮಂಡ್ಯ ಜಿಲ್ಲೆ ಮದ್ದೂರು ತಾಲೂಕು ಗುಡಿಗೆರಿಯ ಯೋಧನ ಪಾರ್ಥಿವ ಶರೀರವನ್ನು ವಿಶೇಷ ವಿಮಾನದಲ್ಲಿ ಎಚ್‍ಎಎಲ್ ವಿಮಾನ ನಿಲ್ದಾಣಕ್ಕೆ ತಂದಾಗ ಬರ ಮಾಡಿಕೊಂಡು ಗೌರವ ಸಲ್ಲಿಸಿದ ಮುಖ್ಯ ಮಂತ್ರಿ ಅವರು ಯೋಧರ ಪರಿಹಾರದ ಜೊತೆಗೆ ಅವರ ಪತ್ನಿಗೆ ಸರಕಾರಿ ಹುದ್ದೆ ನೀಡುವುದಾಗಿ ತಿಳಿಸಿದರು. ಯೋಧ ಗುರು ಅವರ ಕುಟುಂಬದ ಜವಾಬ್ದಾರಿ ಯನ್ನು ಸರಕಾರ ವಹಿಸಲಿದೆ. ಈ ಬಗ್ಗೆ ಅವರು ಅಧೀರರಾಗುವುದು ಬೇಡ. ಅವರ ದುಃಖದಲ್ಲಿ ನಾವು ಕೂಡ ಪಾಲು ದಾರರಾಗಿದ್ದೇವೆ ಎಂದು ಹೇಳಿದರು.