ಕೊಡಗಿನ ಪಾದ್ರಿ ಪಪುವಾ ನ್ಯೂಗಿನಿ ದೇಶದ ಬಿಷಪ್ ಆಗಿ ಆಯ್ಕೆ
ಕೊಡಗು

ಕೊಡಗಿನ ಪಾದ್ರಿ ಪಪುವಾ ನ್ಯೂಗಿನಿ ದೇಶದ ಬಿಷಪ್ ಆಗಿ ಆಯ್ಕೆ

December 9, 2018

ವಿರಾಜಪೇಟೆ: ಕೊಡಗಿನ ವಿರಾಜಪೇಟೆ ಮೂಲದ ಧರ್ಮಗುರು ರೆ. ಫಾ ರೊಜಾರಿಯಾ ಮಿನೇಜಸ್ (49) ಅವರು ಪಪುವಾ ನ್ಯೂಗಿನಿ ದೇಶದ ಲೇ ಪ್ರಾಂತ್ಯದ ಬಿಷಪ್ (ಧರ್ಮಾಧ್ಯಕ್ಷ) ಆಗಿ ಆಯ್ಕೆ ಯಾಗಿದ್ದಾರೆ. ಕ್ರೈಸ್ತ ಧರ್ಮದ ಜಾಗ ತಿಕ ಗುರುಗಳಾದ ಪೋಪ್ ಪ್ರಾನ್ಸಿಸ್ ಅವರು ಅಕ್ಟೋಬರ್ 10 ರಂದು ವ್ಯಾಟಿ ಕನ್ನಲ್ಲಿ ಈ ಆಯ್ಕೆ ಮಾಡಿದ್ದಾರೆ.

ರೊಜಾರಿಯ ಮಿನೇಜಸ್ ಅವರು ವಿರಾಜಪೇಟೆಯ ಬೇಟೋಳ್ಳಿ ಗ್ರಾಮದ ದಿ.ದೊಮಿಂಗೊ ಮಿನೇಜಸ್ ಹಾಗೂ ಮೋಂತಿ ಮೇರಿ ಮಿನೇಜಸ್ ಪುತ್ರರಾಗಿದ್ದು, 1999ರಲ್ಲಿ ಗುರುದೀಕ್ಷೆ ಪಡೆದು ಪ್ರಪಂ ಚದ ವಿವಿಧೆಡೆ ಸೇವೆ ಸಲ್ಲಿಸಿದ್ದಾರೆ. ಡಿಸೆಂಬರ್ 15ರಂದು ಪಪುವಾ ನ್ಯೂಗಿನಿಯಾ ದೇಶದ ಕಾರ್ಡಿನಲ್ ಆಗಿರುವ ಜಾನ್ ರಿಬರ್ಟ್ ಅವರು ರೆ. ಫಾ ರೊಜಾರಿಯಾ ಮಿನೇಜಸ್ ಅವರನ್ನು ಅಧಿಕೃತ ವಾಗಿ ಬಿಷೆಪ್ ರೊಜಾರಿಯೋ ಎಂದು ಘೋಷಿಸಲಿದ್ದಾರೆ.

Translate »