ಪ್ರತ್ಯೇಕ ಅಪಘಾತ: ಏಳು ಮಂದಿ ಸಾವು
ಮೈಸೂರು

ಪ್ರತ್ಯೇಕ ಅಪಘಾತ: ಏಳು ಮಂದಿ ಸಾವು

March 23, 2019

ಮಂಡ್ಯ/ಸರಗೂರು: ಮಂಡ್ಯ ಮತ್ತು ಮೈಸೂರು ಜಿಲ್ಲೆ ಯಲ್ಲಿ ಇಂದು ನಡೆದ ಪ್ರತ್ಯೇಕ ಅಪಘಾತಗಳಲ್ಲಿ ಅಣ್ಣ-ತಂಗಿ ಸೇರಿದಂತೆ 7 ಮಂದಿ ಮೃತಪಟ್ಟಿ ರುವ ಬಗ್ಗೆ ವರದಿಯಾಗಿದೆ. ಮಂಡ್ಯ ಜಿಲ್ಲೆಯ ನಾಗಮಂಗಲ ಹೊರವಲಯದ ಶಂಕನಹಳ್ಳಿ ಬಳಿ ಜಲ್ಲಿ ತುಂಬಿದ ಟಿಪ್ಪರ್ ಮತ್ತು ಪ್ಯಾಸೆಂಜರ್ ಆಟೋ ನಡುವೆ ನಡೆದ ಮುಖಾಮುಖಿ ಡಿಕ್ಕಿ ಯಲ್ಲಿ ಐವರು ಸಾವನ್ನಪ್ಪಿದರೆ, ಮೈಸೂರು ಜಿಲ್ಲೆಯ ಸರಗೂರು ಸಮೀಪದ ಬಡಗಲಪುರ ಬಳಿ ಗೂಡ್ಸ್ ಆಟೋ ಮಗುಚಿ ಬಿದ್ದ ಪರಿ ಣಾಮ ಅಣ್ಣ-ತಂಗಿ ಸಾವಿಗೀಡಾಗಿದ್ದಾರೆ.
ಮಂಡ್ಯ ವರದಿ: ಇಂದು ಸಂಜೆ 7.30ರ ಸುಮಾರಿನಲ್ಲಿ ನಾಗಮಂಗಲದಿಂದ ಶಂಕನಹಳ್ಳಿ ಕಡೆಗೆ ತೆರಳುತ್ತಿದ್ದ ಆಟೋಗೆ (ಕೆಎ 58 2820) ಎದುರಿನಿಂದ ಬಂದ ಜಲ್ಲಿ ತುಂಬಿದ್ದ ಟಿಪ್ಪರ್ (ಕೆಎಲ್ 41 ಡಿ409) ಡಿಕ್ಕಿ ಹೊಡೆದಿದೆ. ಇದ ರಿಂದಾಗಿ ಆಟೋ ಸಂಪೂರ್ಣವಾಗಿ ಜಖಂ ಗೊಂಡಿದ್ದು, ಆಟೋ ಚಾಲಕ ಸುಖಧರೆ ಗ್ರಾಮದ ಸತೀಶ್, ಕರೀಕ್ಯಾತನಹಳ್ಳಿಯ ಅರಸಮ್ಮ, ಕಾಂತಾ ಪುರದ ಬೋರಲಿಂಗ, ಸುರೇಶ ಮತ್ತು ತಮಿಳು ನಾಡು ಸೇಲಂನ ತಲ್ಲೂಸೇಠ್ ಎಂಬುವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾಳೇನಹಳ್ಳಿಯ ಬಸವ, ಪುಟ್ಟಸ್ವಾಮಿ, ನಾಗರಾಜು ಮತ್ತು ಪುಟ್ಟೇ ಗೌಡ ಎಂಬುವರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ನಾಗಮಂಗಲ ಸಾರ್ವಜನಿಕ ಆಸ್ಪತ್ರೆ ಮತ್ತು ಆದಿಚುಂಚನಗಿರಿ ಆಸ್ಪತ್ರೆಗಳಿಗೆ ದಾಖಲಿಸ ಲಾಗಿದೆ. ಅಪಘಾತದ ನಂತರ ಟಿಪ್ಪರ್ ಚಾಲಕ ಪರಾರಿಯಾಗಿದ್ದು, ಟಿಪ್ಪರ್ ಬೀದರ್-ಶ್ರೀರಂಗ ಪಟ್ಟಣ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ನಡೆಸುತ್ತಿರುವ ಬಾಲಾಜಿ ಕನ್ಸ್‍ಟ್ರಕ್ಷನ್‍ಗೆ ಸೇರಿದ್ದು ಎಂದು ಹೇಳಲಾಗಿದೆ.

ಸರಗೂರು ವರದಿ: ಕೂಲಿ ಕಾರ್ಮಿಕರು ಪ್ರಯಾಣಿಸುತ್ತಿದ್ದ ಗೂಡ್ಸ್ ಆಟೋ ಮಗುಚಿ ಬಿದ್ದು, ಅಣ್ಣ ಮತ್ತು ತಂಗಿ ಸಾವನ್ನಪ್ಪಿದ ಘಟನೆ ಇಲ್ಲಿಗೆ ಸಮೀಪದ ಬಡಗಲಪುರ ಗ್ರಾಮದ ಬಳಿ ನಡೆದಿದೆ. ತಾಲೂಕಿನ ಯಶವಂತಪುರ ಗ್ರಾಮದ ದೇವಯ್ಯ(48) ಮತ್ತು ಅವರ ತಂಗಿ ಕೂಸಮ್ಮ (38) ಅಪಘಾತದಲ್ಲಿ ಸಾವನ್ನಪ್ಪಿದ್ದು, ಆಟೋ ದಲ್ಲಿದ್ದ 15 ಕಾರ್ಮಿಕರು ಗಾಯಗೊಂಡಿದ್ದಾರೆ.

ಯಶವಂತಪುರದಿಂದ ಪುರದಕಟ್ಟೆ ಗ್ರಾಮಕ್ಕೆ ಕೂಲಿಗಾಗಿ ಶುಕ್ರವಾರ ಬೆಳಿಗ್ಗೆ 7.30ರ ವೇಳೆ ಗೂಡ್ಸ್ ಆಟೋದಲ್ಲಿ ಪ್ರಯಾಣ ಮಾಡುತ್ತಿದ್ದರು. ಬಡಗಲಪುರ ಬಳಿ ನಿಯಂತ್ರಣ ತಪ್ಪಿದ ಆಟೋ ಮಗುಚಿ ಬಿದ್ದ ಪರಿಣಾಮ ಅಣ್ಣ ಮತ್ತು ತಂಗಿ ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ಹೆಚ್.ಡಿ. ಕೋಟೆ ಸರ್ಕಾರಿ ಆಸ್ಪತ್ರೆ ಮತ್ತು ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಬಾಲಕ ಜಲಸಮಾಧಿ: ಹಸುವಿಗೆ ನೀರು ಕುಡಿಸಲು ಕೆರೆಗೆ ತೆರಳಿದ್ದ ಬಾಲಕನೊರ್ವ ಕಾಲು ಜಾರಿ ಬಿದ್ದು, ಸಾವನ್ನಪ್ಪಿರುವ ಘಟನೆ ತಾಲೂಕಿನ ಕಚುವಿನಹಳ್ಳಿಯಲ್ಲಿ ಶುಕ್ರವಾರ ನಡೆದಿದೆ. ಹನಗೋಡು ಹೋಬಳಿಯ ನೇರಳಕುಪ್ಪೆ ಗ್ರಾಮದ ರೈತ ನಾಗರಾಜ್‍ರ ಪುತ್ರ ದರ್ಶನ್(14) ಮೃತಪಟ್ಟ ಬಾಲಕ. ಮೃತನಿಗೆ ತಂದೆ-ತಾಯಿ, ಸಹೋದರ ಇದ್ದಾರೆ.
ಈತ ನೇರಳಕುಪ್ಪೆ ಫ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿಯಾಗಿದ್ದು, ಶುಕ್ರವಾರ ಕನ್ನಡ ಪರೀಕ್ಷೆ ಬರೆದ ನಂತರ ಮಧ್ಯಾಹ್ನ 2.30ರ ವೇಳೆ ದನಗಳಿಗೆ ನೀರು ಕುಡಿಸಲು ಹೋಗಿದ್ದ. ಕಾಲುಜಾರಿ ಕೆರೆಗೆ ಬಿದ್ದು ಸಾವನ್ನಪ್ಪಿದ್ದಾನೆ. ವಿಷಯ ತಿಳಿದು ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಮತ್ತಿತರ ಗಣ್ಯರು ಮೃತರ ಮನೆಗೆ ಭೇಟಿ ಸಾಂತ್ವನ ಹೇಳಿದರು. ಶನಿವಾರ ಸ್ವಗ್ರಾಮದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.

Translate »