ತಾಪಂ ಅಧ್ಯಕ್ಷೆಯಾದರೂ `ಮಡಿ ಹಾಸುವ’ ವೃತ್ತಿ ಬಿಡದ ಶೈಲಜಾ.!
ಮಂಡ್ಯ

ತಾಪಂ ಅಧ್ಯಕ್ಷೆಯಾದರೂ `ಮಡಿ ಹಾಸುವ’ ವೃತ್ತಿ ಬಿಡದ ಶೈಲಜಾ.!

April 29, 2019

ಮಂಡ್ಯ: ಅಧಿಕಾರ, ಅಂತಸ್ತು ಬಂದು ಬಿಟ್ಟರೆ ಕೆಲವರು ತಮ್ಮ ಮೂಲ ವೃತ್ತಿಯ ಜೊತೆಗೆ ಹಾವಭಾವ ವನ್ನೇ ಬದಲಿಸಿಕೊಂಡು ಬಿಡುತ್ತಾರೆ. ಅಧಿ ಕಾರದ ಅಹಂನಲ್ಲಿ `ನಾನು ಹೇಳಿ ದಂತೆಯೇ ಕೇಳಬೇಕು’ ಎಂದು ದರ್ಪ ತೋರುವವರೂ ಇರುತ್ತಾರೆ. ಆದರೆ ತದ್ವಿರುದ್ಧ ಎಂಬಂತೆ ಇದ್ದಾರೆ ಮಂಡ್ಯ ತಾಲೂಕು ಪಂಚಾಯತಿ ಅಧ್ಯಕ್ಷೆ ಶೈಲಜಾ!

ನಗರದ ಸಮುದಾಯ ಭವನದಲ್ಲಿ ಇಂದು ನಡೆಯುತ್ತಿದ್ದ ಸಂತೆ ಕಸಲಗೆರೆಯ ಕುಟುಂಬವೊಂದರ ಮದುವೆಯಲ್ಲಿ ಪಾಲ್ಗೊಂಡಿದ್ದ ಅವರು, ವಧು-ವರರನ್ನು ಕರೆತರಲು ಮಡಿ ಹಾಸುವ ಕಾಯಕದಲ್ಲಿ ತೊಡಗಿದ್ದರು. ಅವರ ಈ ವೃತ್ತಿ ಗೌರವದ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಸದ್ಯ ಮಂಡ್ಯ ತಾಲೂಕು ಪಂಚಾಯಿತಿ ಅಧ್ಯಕ್ಷೆಯಾಗಿದ್ದರೂ ತಮ್ಮ ವಂಶದ ಮೂಲವೃತ್ತಿ ಹಾಗೂ ಕಾಯಕ ಸಂಸ್ಕೃತಿ ಯನ್ನು ಬಿಟ್ಟಿಲ್ಲ, ಬಿಡುವುದೂ ಇಲ್ಲ ಎನ್ನು ತ್ತಾರೆ ಮೂಲತಃ ಸಂತೆ ಕಸಲಗೆರೆಯ ನಿವಾಸಿಯಾದ ಶೈಲಜಾ ತಿಮ್ಮಯ್ಯ.

ಪತಿ ತಿಮ್ಮಯ್ಯ ಜೊತೆ ಸೇರಿ, ಗ್ರಾಮದಲ್ಲಿ ನಡೆಯುವ ಮದುವೆ, ದೇವರ ಉತ್ಸವ ಸೇರಿದಂತೆ ಶುಭಕಾರ್ಯಗಳಲ್ಲಿ ಮಡಿ ಹಾಸುವ ವೃತ್ತಿ ಮಾಡುತ್ತಿದ್ದಾರೆ. ತಲೆಮಾರುಗಳಿಂದ ಕುಟುಂಬದ ಹಿರಿಯರು ಮಾಡಿಕೊಂಡು ಬರುತ್ತಿದ್ದ ವೃತ್ತಿಯನ್ನು ಶೈಲಜಾ-ತಿಮ್ಮಯ್ಯ ದಂಪತಿ ಬಿಡದೇ ಮುಂದುವರಿಸಿಕೊಂಡು ಹೋಗು ತ್ತಿದ್ದಾರೆ. ತಾಪಂ ಅಧ್ಯಕ್ಷೆಯ ಈ ಕಾಯಕ ಪ್ರೀತಿಗೆ ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ.

Translate »