ಮೈಸೂರು,ಡಿ.18-ಕೃಷ್ಣಪಥ ಸಮಿತಿ ವತಿಯಿಂದ ನಾಡಿನ ಹಿರಿಯ ರಾಜಕೀಯ ಮುತ್ಸದ್ದಿ ಎಸ್.ಎಂ.ಕೃಷ್ಣ ಅವರ ಐವತ್ತು ವಸಂತಗಳ ಸಾರ್ಥಕ ಸಂಸದೀಯ ಬದುಕಿನ ನೆನಪಿಗಾಗಿ ಹೊರತಂದಿರುವ ಎಸ್.ಎಂ. ಕೃಷ್ಣ ಅವರ `ಕೃಷ್ಣಪಥ’ ಸಾಧನೆ-ಸಿದ್ಧಿಗಳ ಪರಿಚಯ ಹಾಗೂ ಆಕರ ಗ್ರಂಥಗಳ ಲೋಕಾರ್ಪಣೆ ಸಮಾರಂಭವನ್ನು ಜ.4 ರಂದು ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾ ಧ್ಯಕ್ಷರಾದ ಡಾ.ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಶ್ರೀ ಮುಕ್ತಿದಾನಂದ ಮಹಾರಾಜ್ ಕೃಷ್ಣಪಥ ಲೋಕಾರ್ಪಣೆ ಮಾಡುವರು. ನಿವೃತ್ತ ಮುಖ್ಯ ನ್ಯಾಯಮೂರ್ತಿಗಳಾದ ಎಂ.ಎನ್.ವೆಂಕಟಾಚಲಯ್ಯ `ಸ್ಮøತಿ ವಾಹಿನಿ’ ಜೊತೆ 5 ಗ್ರಂಥಗಳ ಲೋಕಾರ್ಪಣೆ ಮಾಡುವರು. ವಿಶೇಷ ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಭಾಗವಹಿಸುವರು. ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ.ಮನು ಬಳಿಗಾರ್ ಗ್ರಂಥಗಳ ಪರಿಚಯ ಮಾಡಿಕೊಡುವರು. ಅತಿಥಿಗಳಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ. ಸಿದ್ದಲಿಂಗಯ್ಯ ಭಾಗವಹಿಸುವರು.
