ಸ್ಮಾರ್ಟ್ ಸಿಟಿ ಕುರಿತು ಬೆಳಗಾವಿ,   ಧಾರವಾಡ ಪಾಲಿಕೆ ಸದಸ್ಯರಿಗೆ ತರಬೇತಿ
ಮೈಸೂರು

ಸ್ಮಾರ್ಟ್ ಸಿಟಿ ಕುರಿತು ಬೆಳಗಾವಿ, ಧಾರವಾಡ ಪಾಲಿಕೆ ಸದಸ್ಯರಿಗೆ ತರಬೇತಿ

January 9, 2019

ಮೈಸೂರು: ಬೆಳಗಾವಿ ಮತ್ತು ಧಾರವಾಡ ನಗರ ಪಾಲಿಕೆ ಸದಸ್ಯ ರಿಗೆ ಮೈಸೂರಿನ ಲಲಿತ ಮಹಲ್ ರಸ್ತೆಯಲ್ಲಿರುವ ಆಡಳಿತ ತರಬೇತಿ ಸಂಸ್ಥೆ (ಎಟಿಐ) ಆವರಣದ ರಾಜ್ಯ ಗ್ರಾಮೀ ಣಾಭಿವೃದ್ಧಿ ಸಂಸ್ಥೆ (ಎಸ್‍ಆರ್‍ಡಿಐ) ಯಲ್ಲಿ ಸ್ಮಾರ್ಟ್ ಸಿಟಿ ಕುರಿತು ತರಬೇತಿ ನೀಡಲಾಯಿತು.

ಬೆಳಗಾವಿ ನಗರದ ಮೇಯರ್ ಬಸಪ್ಪ ಚಿಕ್ಕಲದಿನಿ, ಉಪಮೇಯರ್ ಚಮನ ಸಾಬ್, ಧಾರವಾಡ ನಗರದ ಮೇಯರ್ ಶೋಭಾಪಾಲಗತ್ತಿ ನೇತೃತ್ವದಲ್ಲಿ 45 ಮಂದಿ ಸದಸ್ಯರು ಸೋಮವಾರ ಮೈಸೂರಿಗೆ ಆಗಮಿಸಿದ್ದರು.

ಸ್ಮಾರ್ಟ್ ಸಿಟಿ ಅಭಿವೃದ್ಧಿ ಮತ್ತು ನಿರ್ವ ಹಣೆ ಕುರಿತಂತೆ ಜಾಗೃತಿ ಮೂಡಿಸುವ ಸಲುವಾಗಿ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಮೈಸೂರಲ್ಲಿ ಎರಡು ದಿನಗಳ ಕಾಲ ತರಬೇತಿ ನೀಡಲಾಯಿತು. ಧಾರವಾಡ ಮತ್ತು ಬೆಳಗಾವಿ ನಗರಗಳ ಕಾರ್ಪೋರೇಟರ್‍ಗಳು ಇಂದು ಸಂಜೆ ತಮ್ಮ ಸ್ಥಳಗಳಿಗೆ ಹಿಂದಿರುಗಿದರು.

ಸೋಮವಾರ ಸಂಜೆ ಪಾಲಿಕೆ ಸದಸ್ಯರ ನಿಯೋಗವು ಮೈಸೂರು ನಗರ ಪಾಲಿಕೆಗೆ ಭೇಟಿ ನೀಡಿತ್ತು. ಮೇಯರ್ ಪುಷ್ಪಲತಾ ಜಗನ್ನಾಥ್, ಉಪಮೇಯರ್ ಶಫಿ ಅಹಮದ್, ಪಾಲಿಕೆ ಆಯುಕ್ತ ಕೆ.ಹೆಚ್. ಜಗದೀಶ್ ಅವರು ಪಿಪಿಟಿ ಮೂಲಕ ಇಲ್ಲಿನ ಕಾರ್ಯವೈಖರಿಯನ್ನು ವಿವರಿಸಿದರು.

Translate »