ಬಿಜೆಪಿಯಿಂದ ಮಾತ್ರ ಸಾಮಾಜಿಕ ನ್ಯಾಯ ಪರಿಗಣನೆ: ಶಾಸಕ ನಾಗೇಂದ್ರ
ಮೈಸೂರು

ಬಿಜೆಪಿಯಿಂದ ಮಾತ್ರ ಸಾಮಾಜಿಕ ನ್ಯಾಯ ಪರಿಗಣನೆ: ಶಾಸಕ ನಾಗೇಂದ್ರ

August 26, 2018

ಮೈಸೂರು: ಕಾಂಗ್ರೆಸ್ ನವರು ಸಾಮಾಜಿಕ ನ್ಯಾಯವೆಂದು ಬರೀ ಬಾಯಲ್ಲಿ ಮಾತ್ರ ಹೇಳುತ್ತಾರೆ. ಆದರೆ ನಾವು ಸಮಾಜದ ಎಲ್ಲಾ ವರ್ಗದವರನ್ನು ಪರಿಗಣಿಸಿ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿದಿದ್ದೇವೆ ಎಂದು ಶಾಸಕ ಎಲ್. ನಾಗೇಂದ್ರ ತಿಳಿಸಿದರು.

ನಗರದ ಮಹದೇಶ್ವರ ಬಡಾವಣೆ ವಾರ್ಡ್ ನಂ-3ರ ಬಿಜೆಪಿ ಅಭ್ಯರ್ಥಿ ಕೆ.ಎಂ. ಸತೀಶ್ ಚಂದ್ರನ್ ಪರ ಮತಯಾಚಿಸಿ ಮಾಧ್ಯಮ ಗಳಿಗೆ ಪ್ರತಿಕಿಯಿಸಿದ ಅವರು, ಎಲ್ಲಾ ಸಮು ದಾಯದವರಿಗೂ ನಾವು ಆದ್ಯತೆಯನ್ನು ನೀಡಿದ್ದು, ಈ ಬಾರಿ ಕೊಡಗಿನವರು ಮತ್ತು ಮೂವರು ಪೌರಕಾರ್ಮಿಕರಿಗೆ ಅವಕಾಶ ನೀಡಿದ್ದೇವೆ ಎಂದರು.

ಹೋದ ಕಡೆಯೆಲ್ಲಾ ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕಳೆದ ಬಾರಿ ಚಾಮರಾಜ ಕ್ಷೇತ್ರ ವ್ಯಾಪ್ತಿಯಲ್ಲಿ ಕೇವಲ 1 ವಾರ್ಡ್‍ನಲ್ಲಿ ಮಾತ್ರ ಗೆದ್ದಿದ್ದು, ಈ ಬಾರಿ 12ರಿಂದ 13 ವಾರ್ಡ್‍ಗಳಲ್ಲಿ ಖಂಡಿತ ಜಯ ಗಳಿಸುತ್ತೇವೆ. ಹಾಗೆಯೇ ಕೆ.ಆರ್. ಕ್ಷೇತ್ರ ವ್ಯಾಪ್ತಿಯಲ್ಲಿ 15 ಮತ್ತು ನರಸಿಂಹರಾಜ ಕ್ಷೇತ್ರ ವ್ಯಾಪ್ತಿಯಲ್ಲಿ 5 ಸ್ಥಾನಗಳನ್ನು ಗೆಲ್ಲುವ ಮೂಲಕ ಸರಳ ಬಹುಮತದೊಂದಿಗೆ ನಗರ ಪಾಲಿಕೆ ಚುನಾವಣೆಯಲ್ಲಿ ಗೆದ್ದು, ಆಡಳಿ ತದ ಜವಾಬ್ದಾರಿಯನ್ನು ಪಡೆದುಕೊಳ್ಳು ತ್ತೇವೆ. ಇನ್ನೆರಡು ದಿನಗಳಲ್ಲಿ ಚುನಾ ವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡು ತ್ತೇವೆ ಎಂದು ಹೇಳಿದರು.

ನಂತರ ತೆರೆದ ವಾಹನದಲ್ಲಿ ಮಹದೇ ಶ್ವರ ಬಡಾವಣೆಯ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಮತಯಾಚನೆ ಮಾಡಿದರು.
ಮಾಜಿ ವಿಧಾನ ಪರಿಷತ್ ಸದಸ್ಯ ಡಿ. ಮಾದೇಗೌಡ, ಸ್ವಾಮಿ ಮಲ್ಲಪ್ಪ, ಶ್ರೀನಾಥ್ ಚಿನ್ನು, ರ,ಏಶ್, ಬೋರಲಿಂಗೇಗೌಡ, ಶಿವರಾಮ್, ಭೈರವ, ಲಿಂಗರಾಜು ಇತರೆ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.

ಸಿಹಿ ಹಂಚಿ ಮತಯಾಚನೆ: ಸುಬ್ಬರಾಯನ ಕೆರೆ ವಾರ್ಡ್ ನಂ-23ರ ಜೆಡಿಎಸ್ ಅಭ್ಯರ್ಥಿ ಜೆ.ಆರ್.ಪುಷ್ಪಾ ಶಿವರಾಮ್ ವಾರ್ಡ್ ವ್ಯಾಪ್ತಿಯ ಹಳೇ ಬಂಡಿಕೇರಿಯಲ್ಲಿರುವ ವೆಂಕಟೇಶ್ವರ ದೇವಾಲಯದಲ್ಲಿ ದೇವ ಸ್ಥಾನಕ್ಕೆ ಬರುವ ಭಕ್ತರಿಗೆ ಸಿಹಿ ಹಂಚುವ ಮೂಲಕ ಮತಯಾಚನೆ ಮಾಡಿದರು. 6ನೇ ವಾರ್ಡ್‍ನ ಕಾಂಗ್ರೆಸ್ ಅಭ್ಯರ್ಥಿ ಕೆ.ಎಂ. ದಿನೇಶ್ ಗೋಕುಲಂನ ಪ್ರಮುಖ ಬೀದಿಗಳಲ್ಲಿ ಮನೆ ಮನೆಗೆ ತೆರಳಿ ಮತಯಾಚಿಸಿದರು.

Translate »