ವಿರಾಜಪೇಟೆ: ಕೊಡಗು ಕಾವೇರಿ ಮಾತೆ, ಪ್ರಕೃತಿಯ ತವರೂರು, ಇತ್ತೀಚಿಗೆ ಭಾರಿ ಮಳೆಯಿಂದಾಗಿ ಅನೇಕರು ಮನೆ ಆಸ್ತಿ ಕಳೆದುಕೊಂಡಿದ್ದರು, ಶ್ರೀ ಕಾವೇರಿ ಮಾತೆ ಯಾರನ್ನು ಕೈಬಿಡದೆ ಎಲ್ಲರ ಕಷ್ಟವನ್ನು ಪರಿಹರಿಸುವಂತ ಶಕ್ತಿದಾತೆ ಎಂದು ಮನಿ ಯಪಂಡ ಕಾಂತಿ ಸತೀಶ್ ಹೇಳಿದರು.
ವಿರಾಜಪೇಟೆ ಕೊಡವ ಸಮಾಜದ ಸಭಾಂಗಣದಲ್ಲಿ ಕೊಡವ ಸಮಾಜ ಪೊಮ್ಮ ಕ್ಕಡ ಒಕ್ಕೂಟದ ವತಿಯಿಂದ ಆಯೋಜಿಸ ಲಾಗಿದ್ದ ‘ಶ್ರೀ ಕಾವೇರಿ ತೀರ್ಥ ಪೂಜಾ ಕಾರ್ಯಕ್ರಮ’ದ ಅಧ್ಯಕ್ಷತೆ ವಹಿಸಿದ್ದ ಕಾಂತಿ ಸತೀಶ್ ಮಾತನಾಡಿ, ಕೊಡಗಿನ ಕಾವೇರಿ ನದಿ ರಾಜ್ಯ ಹಾಗೂ ಹೊರ ರಾಜ್ಯಗ ಳಿಗೂ ನೀರು ಕೊಡುವಲ್ಲೀವನದಿಯಾಗಿದೆ. ಭಕ್ತಿಯಿಂದ ಬಂದವರ ಕಷ್ಟಗಳನ್ನು ಪರಿ ಹರಿಸಿ ಸುಖ ಶಾಂತಿ ನೀಡುವಂತ ದೇವ ರನ್ನು ಪ್ರತಿಯೊಬ್ಬರು ಸದಾ ಸ್ಮರಿಸು ವಂತಾಗಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗೋಣಿ ಕೊಪ್ಪಲಿನ ಡಾ.ಕಾಳಿಮಾಡ ಶಿವಪ್ಪ ಮಾತನಾಡಿ, ಕೊಡಗಿನ ಹಿಂದೂ ಸಮಾಜ ಗಳ ಎಲ್ಲಾ ಕಾರ್ಯಕ್ರಮಗಳು ಶ್ರೀ ಕಾವೇ ರಮ್ಮನ ಸ್ಮರಣೆಯಲ್ಲೇ ನಡೆಯುವಂತದ್ದು, ಮಾಹಿಳೆಯರು ತಮ್ಮ ಮನೆಯ ಕೆಲಸಗಳ ಜವಾಬ್ದಾರಿಯೊಂದಿಗೆ ಕೊಡವ ಸಮಾಜ ಪೊಮ್ಮಕ್ಕಡ ಒಕ್ಕೂಟದಲ್ಲಿಯು ತೊಡಗಿಸಿ ಕೊಳ್ಳುವ ಮೂಲಕ ಸಂಘ-ಸಂಸ್ಥೆಗಳಲ್ಲಿ ಸೇವೆ ಮಾಡುತ್ತಿರುವುದು ಉತ್ತಮ ಕಾರ್ಯ ವಾಗಿದೆ. ಶ್ರೀ ಇಗ್ಗುತಪ್ಪ- ಕಾವೇರಮ್ಮ ಕೊಡ ಗನ್ನು ರಕ್ಷಿಸುತ್ತಾರೆ ಎಂದು ಹೇಳಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಮೇವಂಡ ವಶ್ಮ ಕರುಂಬಯ್ಯ ಪೊಮ್ಮಕ್ಕಡ ಒಕ್ಕೂಟ ಉತ್ತಮ ಕಾರ್ಯಗಳನ್ನು ಮಾಡುತ್ತಿರು ವುದು ಶ್ಲಾಘನೀಯ. ಮುಂದೆಯು ಒಕ್ಕೂ ಟದ ಅಭಿವೃದ್ಧಿಗೆ ಸದಸ್ಯರ ಸಹಕಾರ ಅಗತ್ಯ ಎಂದರು. ತಾತಂಡ ಪ್ರತಾಪ್ ಬೆಳ್ಯಪ್ಪ ಮಾತನಾಡಿದರು.
ವೇದಿಕೆಯಲ್ಲಿ ಕುಲ್ಲಚಂಡ ಚಿಪ್ಪಿ ಕಾರ್ಯಪ್ಪ, ಚಲ್ಮಂಡ ಗೌರಿ, ಪಳೆಯಂಡ ಮನು ಸುಬ್ಬಯ್ಯ, ಪೊಯ್ಯಟೀರ ಭಾನು ಭೀಮಯ್ಯ, ಗೋಣಿಕೊಪ್ಪಲಿನ ಭಜನಾ ಮಂಡಳಿ ಸದಸ್ಯರಾದ ಯಶೋಧ ಚಂದ್ರ ಶೇಖರ್, ರಾಧಾಕೃಷ್ಣ, ಪುರುಷೋತ್ತಮ ಇತರರು ಉಪಸ್ಥಿತರಿದ್ದರು.
ಇದಕ್ಕೂ ಮೊದಲು ಅರ್ಚಕರಾದ ಮೋಹನ್ ಭಟ್ ಅವರಿಂದ ಗಣಪತಿ ಹೋಮ, ಕಾವೇರಿ ತೀರ್ಥ ಪೂಜೆ ನಡೆ ಯಿತು. ಗೋಣಿಕೊಪ್ಪಲು ಉಮಾಮಹೇಶ್ವರಿ ಭಜನಾಮಂಡಳಿ ಸದಸ್ಯರಿಂದ ಶ್ರೀ ಕಾವೇರಿ ಮಾತೆಯ ಭಕ್ತಿಗೀತೆ ಮತ್ತು ಭಜನೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಒಕ್ಕೂಟದ ಸದಸ್ಯರುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.