ಇಬ್ಬರೂ ಬೆನ್ನಿಗೆ ಚೂರಿ ಹಾಕುವವರೇ…ಸಿದ್ದು, ಹೆಚ್‍ಡಿಡಿ ವಿರುದ್ಧ ಶ್ರೀನಿವಾಸಪ್ರಸಾದ್ ವಾಗ್ದಾಳಿ
ಮೈಸೂರು

ಇಬ್ಬರೂ ಬೆನ್ನಿಗೆ ಚೂರಿ ಹಾಕುವವರೇ…ಸಿದ್ದು, ಹೆಚ್‍ಡಿಡಿ ವಿರುದ್ಧ ಶ್ರೀನಿವಾಸಪ್ರಸಾದ್ ವಾಗ್ದಾಳಿ

August 24, 2019

ಮೈಸೂರು, ಆ. 23(ಆರ್‍ಕೆ)- ಸಿದ್ದರಾಮಯ್ಯ ಹಾಗೂ ಹೆಚ್.ಡಿ. ದೇವೇಗೌಡ ಇಬ್ಬರೂ ಬೆನ್ನಿಗೆ ಚೂರಿ ಹಾಕುವವರೇ ಎಂದು ಸಂಸದ ವಿ. ಶ್ರೀನಿವಾಸಪ್ರಸಾದ್ ಅವರು ಇಂದಿಲ್ಲಿ ವಾಗ್ದಾಳಿ ನಡೆಸಿದ್ದಾರೆ. ಮೈಸೂರಿನ ಜಯಲಕ್ಷ್ಮೀಪುರಂನಲ್ಲಿರುವ ನಿವಾಸದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಬೆನ್ನಿಗೆ ಚೂರಿ ಹಾಕಿಯೇ ಮೇಲೆ ಬಂದಿದ್ದು. ದೇವೇಗೌಡರೂ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಾಯಿಗೆ ಬಂದಂತೆ ಅಪ್ಪನಾಣೆ ಎಂದೆಲ್ಲಾ ಪರಸ್ಪರ ಮಾತನಾಡಿಕೊಂಡು ವಿರೋಧಿಸುತ್ತಿದ್ದವರು, ನಂತರದ ಲೋಕಸಭಾ ಚುನಾವಣೆಯಲ್ಲಿ ಭಾಯಿ-ಭಾಯಿ ಅಂತ ಹೇಳಿಕೊಂಡು ಅಕ್ಕಪಕ್ಕದಲ್ಲಿ ಕುಳಿತುಕೊಂಡರು. ಕಳೆದ 3 ದಿನಗಳಿಂದ ಒಬ್ಬರ ಮೇಲೊಬ್ಬರು ಆರೋಪ-ಪ್ರತ್ಯಾರೋಪ ಮಾಡಿಕೊಳ್ಳುತ್ತಿರು ವುದನ್ನು ನೋಡಿ ರಾಜ್ಯದ ಜನ ಅಸಹ್ಯಪಡುತ್ತಿದ್ದಾರೆ ಎಂದು ಪ್ರಸಾದ್ ನುಡಿದರು. ವಿರೋಧ ಪಕ್ಷದಲ್ಲಿದ್ದೀರಾ, ಈಗಲಾದರೂ ಗಂಭೀರವಾಗಿರೋದನ್ನು ಕಲಿಯಿರಿ ಎಂದು ಸಿದ್ದರಾಮಯ್ಯ ಮತ್ತು ದೇವೇಗೌಡರಿಗೆ ಸಲಹೆ ನೀಡಿದ ಅವರು, ಮಾನಸಿಕವಾಗಿ ಜೆಡಿಎಸ್-ಕಾಂಗ್ರೆಸ್‍ನವರು ಮೈತ್ರಿಯಾಗಿರಲಿಲ್ಲ. ದೈಹಿಕವಾಗಿ ಮಾತ್ರ ಒಟ್ಟಿಗೆ ಕುಳಿತುಕೊಳ್ಳುತ್ತಿದ್ದರು ಎಂದರು. ಸದನದಲ್ಲಿ ಸಿಎಂರನ್ನು ಸಮರ್ಥಿಸಿಕೊಳ್ಳುತ್ತಿದ್ದ ಸಿದ್ದರಾಮಯ್ಯ ಈಗ್ಯಾಕೆ ಅವರ ಬಗ್ಗೆ ಮಾತಾ ಡ್ತಿದ್ದಾರೆ. ಇವರ ಹೇಳಿಕೆಗಳನ್ನು ನೋಡಿದ್ರೆ ಜನರಿಗೆ ಅಸಹ್ಯವಾಗುತ್ತಿದೆ ಎಂದರು.

Translate »