ಫೆ.16ರಿಂದ ಶ್ರೀರಾಮಕೃಷ್ಣ, ಶಾರದಾದೇವಿ, ಸ್ವಾಮಿ ವಿವೇಕಾನಂದರ ಜಾತ್ರಾ ಮಹೋತ್ಸವ
ಮೈಸೂರು

ಫೆ.16ರಿಂದ ಶ್ರೀರಾಮಕೃಷ್ಣ, ಶಾರದಾದೇವಿ, ಸ್ವಾಮಿ ವಿವೇಕಾನಂದರ ಜಾತ್ರಾ ಮಹೋತ್ಸವ

February 4, 2020
  • ಮೈಸೂರು ನಗರದ ಈ ಮಹನೀಯರ ಹೆಸರಿನ ಬಡಾವಣೆಗಳಲ್ಲಿ ವಿಶೇಷ ಸಂದೇಶ
  • ಕಾರ್ಯಕ್ರಮದ ರೂಪುರೇಷೆ ಪ್ರಕಟಿಸಿದ ಡಿ.ಮಾದೇಗೌಡ

ಮೈಸೂರು, ಫೆ.3(ಎಸ್‍ಬಿಡಿ)- ಮೈಸೂರಿ ನಲ್ಲಿ ಫೆ.16ರಿಂದ 3 ದಿನ ದಿವ್ಯತ್ರಯರ ಜಾತ್ರಾ ಮಹೋತ್ಸವ ಹಾಗೂ ಶ್ರೀ ರಾಮ ಕೃಷ್ಣ ರಥೋತ್ಸವ ಏರ್ಪಡಿಸಲಾಗಿದೆ.

ಶ್ರೀ ರಾಮಕೃಷ್ಣ ಬಳಗ, ಶ್ರೀ ರಾಮಕೃಷ್ಣ ಸೇವಾ ಕೇಂದ್ರ ಹಾಗೂ ಸಾರ್ವಜನಿಕರ ಸಹಯೋಗದಲ್ಲಿ ದಿವ್ಯತ್ರಯರಾದ ಶ್ರೀ ರಾಮಕೃಷ್ಣರು, ಶಾರದಾದೇವಿ ಹಾಗೂ ಸ್ವಾಮಿ ವಿವೇಕಾನಂದರ ಜಾತ್ರಾ ಮಹೋ ತ್ಸವ ಏರ್ಪಡಿಸಿದ್ದು, ಈ ಹಿನ್ನೆಲೆ ಶ್ರೀರಾಮ ಕೃಷ್ಣ ಆಶ್ರಮದ ಅಧ್ಯಕ್ಷರಾದ ಶ್ರೀ ಮುಕ್ತಿದಾ ನಂದಜೀ ಅವರ ಸಾನಿಧ್ಯದಲ್ಲಿ ಸೋಮ ವಾರ ಪೂರ್ವಭಾವಿ ಸಭೆ ನಡೆಸಲಾಯಿತು.

ರಾಮಕೃಷ್ಣ ವಿದ್ಯಾಕೇಂದ್ರದ ಮುಖ್ಯಸ್ಥ ರಾದ ಯುಕ್ತೇಶಾನಂದಜೀ, ರಿಮ್ಸೆ ಮುಖ್ಯಸ್ಥರಾದ ಶಿವಕಾಂತಾನಂದಜೀ, ಯತಿಗಳಾದ ಶಾಂತಿವ್ರತಾನಂದಜೀ, ಪುಣ್ಯ ವ್ರತಾನಂದಜೀ, ರಾಮಕೃಷ್ಣನಗರ, ಶಾರದಾ ದೇವಿನಗರ ಹಾಗೂ ವಿವೇಕಾ ನಂದನಗರ ನಿವಾಸಿಗಳು ಸಭೆಯಲ್ಲಿ ಭಾಗವಹಿಸಿದ್ದರು. ವಿಧಾನ ಪರಿಷತ್ ಮಾಜಿ ಸದಸ್ಯರೂ ಆದ ರಾಮಕೃಷ್ಣ ಬಳಗದ ಡಿ. ಮಾದೇ ಗೌಡರು, ಕಾರ್ಯಕ್ರಮ ರೂಪು ರೇಷೆ, ಸಿದ್ಧತೆ ಬಗ್ಗೆ ಸಭೆಗೆ ತಿಳಿಸಿದರು.

ಸಂಭ್ರಮ-ಸಂದೇಶ: ದಿವ್ಯತ್ರಯರ ಹೆಸರಿ ನಲ್ಲಿರುವ 3 ಬಡಾವಣೆಗಳಲ್ಲಿ ಜಾತ್ರಾ ಸಂಭ್ರಮ ದೊಂದಿಗೆ ಸಂದೇಶ ಪ್ರಸಾರವೂ ಆಗಲಿದೆ. ಫೆ.16ರಂದು ಶಾರದಾದೇವಿನಗರ, ಫೆ.17 ರಂದು ವಿವೇಕಾನಂದನಗರದಲ್ಲಿ ವಿಶೇಷ ಉಪ ನ್ಯಾಸ ಆಯೋಜಿಸಲಾಗಿದೆ. ಫೆ.18ರಂದು ಶ್ರೀ ರಾಮಕೃಷ್ಣ ರಥೋತ್ಸವ ನೆರವೇರ ಲಿದೆ. ಅಂದು ಸಂಜೆ ಶಾರದಾದೇವಿನಗರ ವೃತ್ತದಿಂದ ಸಾರೋಟ್‍ನಲ್ಲಿ ಶಾರದಾ ಮಾತೆಯ ಭಾವಚಿತ್ರ ಹಾಗೂ ವಿವೇಕಾ ನಂದನಗರ ವೃತ್ತದಿಂದ ಸ್ವಾಮಿ ವಿವೇಕಾ ನಂದರ ಭಾವಚಿತ್ರವನ್ನು ವೈಭವದ ಮೆರವಣಿಗೆ ಮೂಲಕ ರಾಮಕೃಷ್ಣ ನಗರದ ಶ್ರೀ ರಾಮಕೃಷ್ಣ ಪರಮ ಹಂಸರ ವೃತ್ತಕ್ಕೆ ತರಲಾಗುವುದು. ಬಳಿಕ ರಾಮಕೃಷ್ಣ ರಥೋತ್ಸವ ನೆರವೇರಲಿದೆ.

ವಿವೇಕ ಸಂಚಾರ: ದಿವ್ಯತ್ರಯರ ಜಾತ್ರಾ ಮಹೋತ್ಸವದ ಯಶಸ್ಸಿಗೆ ಪೂರಕವಾಗಿ ಈ ಬಾರಿ `ವಿವೇಕ ಸಂಚಾರ’ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮನೆ ಮನೆಗಳು ಹಾಗೂ ಮನ ಮನಗಳಿಗೆ ಈ ಉತ್ಸವದ ಬಗ್ಗೆ ಮಾಹಿತಿ ತಲುಪಿಸುವ ನಿಟ್ಟಿನಲ್ಲಿ ಫೆ.8ರಿಂದ 10ರವರೆಗೆ ಶಾರದಾ ದೇವಿನಗರ, ಫೆ.12ರಿಂದ 14ರವರೆಗೆ ವಿವೇಕಾನಂದನಗರ ಹಾಗೂ ಫೆ.15ರಿಂದ 17ರವರೆಗೆ ರಾಮಕೃಷ್ಣನಗರದಲ್ಲಿ `ವಿವೇಕ ಸಂಚಾರ’ ಕಾರ್ಯಕ್ರಮ ನಡೆಯಲಿದೆ. ಡಿ.ಮಾದೇಗೌಡರ ನೇತೃತ್ವದ ತಂಡ ನಿಗದಿತ ದಿನಗಳಲ್ಲಿ ಬೆಳಿಗ್ಗೆ 6ರಿಂದ 8ರವ ರೆಗೆ ಆಯ್ದ ಉದ್ಯಾನಗಳಲ್ಲಿ, 11ರಿಂದ 1ರವರೆಗೆ ಶಾಲಾ-ಕಾಲೇಜು, ಮಧ್ಯಾಹ್ನ 3ರಿಂದ 5ರವರೆಗೆ ಸ್ತ್ರೀಶಕ್ತಿ ಸಂಘಗಳ ಕಾರ್ಯ ಸ್ಥಳ ಹಾಗೂ ಸಂಜೆ 6ರಿಂದ ರಾತ್ರಿ 8 ರವರೆಗೆ ದೇವಾಲಯಗಳಲ್ಲಿ ಕರಪತ್ರ ಹಂಚಿಕೆ ಹಾಗೂ ಪುಸ್ತಕ ಮಾರಾಟ ಮೂಲಕ ಪ್ರಸಾರ ನಡೆಸಲಿದೆ. ಸ್ತ್ರೀಶಕ್ತಿ ಸಂಘ, ಭಜನಾ ಮಂಡಳಿ ಸೇರಿದಂತೆ ವಿವಿಧ ಎನ್‍ಜಿಓ ಸದಸ್ಯರು ಈ ಕಾರ್ಯಕ್ಕೆ ಕೈಜೋಡಿಸಲಿದ್ದಾರೆ.

ಮೈಸೂರು `ದೇವನಗರಿ’ ಆಗಬೇಕೆಂಬ ರಾಷ್ಟ್ರಕವಿ ಕುವೆಂಪು ಅವರ ಆಶಯದಂತೆ ಇಲ್ಲಿನ ಅನೇಕ ಬಡಾವಣೆಗಳಲ್ಲಿ ಆಧ್ಯಾತ್ಮಿಕ ನೆಲೆಗಟ್ಟಿದೆ. ರಾಮಕೃಷ್ಣನಗರ, ಶಾರದಾದೇವಿ ನಗರ, ವಿವೇಕಾನಂದ ನಗರ ಸೇರಿದಂತೆ ಸುತ್ತ ಮುತ್ತಲ ಅನೇಕ ಬಡಾವಣೆ ಗಳು ಮಹಾತ್ಮರ ಹೆಸರಿನಿಂದ ಗುರುತಿಸಿ ಕೊಳ್ಳುತ್ತಿವೆ. ಈ ಸಂದರ್ಭ ದಲ್ಲಿ ಆಧ್ಯಾತ್ಮ ಪ್ರಖರತೆ ಹೆಚ್ಚಿಸುವ ನಿಟ್ಟಿನಲ್ಲಿ ನಡೆಸುತ್ತಿ ರುವ ದಿವ್ಯತ್ರಯರ ಜಾತ್ರಾ ಮಹೋತ್ಸವಕ್ಕೆ ಎಲ್ಲರೂ ಸಹಕಾರ ನೀಡಬೇಕೆಂದು ಮಾದೇಗೌಡರು ಮನವಿ ಮಾಡಿದರು.

Translate »