ಹುಣಸೂರು,ಕೆ.ಆರ್.ಪೇಟೆ  ಉಪಚುನಾವಣೆ: ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭ
ಮೈಸೂರು

ಹುಣಸೂರು,ಕೆ.ಆರ್.ಪೇಟೆ ಉಪಚುನಾವಣೆ: ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭ

November 12, 2019

ಮೈಸೂರು, ನ. 11(ಆರ್‍ಕೆ)- ಡಿಸೆಂಬರ್ 5 ರಂದು ನಡೆಯಲಿರುವ ಮೈಸೂರು ಜಿಲ್ಲೆ ಹುಣಸೂರು ಹಾಗೂ ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ವಿಧಾನಸಭಾ ಕ್ಷೇತ್ರ ಗಳ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಇಂದಿನಿಂದ ಆರಂಭವಾಗಿದೆ.
ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಹಾಗೂ ಮಂಡ್ಯ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರು ಇಂದು ಪ್ರತ್ಯೇಕವಾಗಿ ಮೈಸೂರು ಹಾಗೂ ಮಂಡ್ಯದ ತಮ್ಮ ಕಚೇರಿಗಳ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ, ಉಪ ಚುನಾವಣೆಗೆ ಮಾಡಿಕೊಂಡಿರುವ ಸಿದ್ಧತೆ ಬಗ್ಗೆ ವಿವರಿಸಿದರು.

ನವೆಂಬರ್ 11(ಸೋಮವಾರ)ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ನವೆಂಬರ್ 18 ನಾಮಪತ್ರ ಸಲ್ಲಿಸಲು ಕಡೇ ದಿನವಾಗಿದೆ. ನವೆಂಬರ್ 19 ಉಮೇದುವಾರಿಕೆ ದಾಖಲೆ ಪರಿಶೀಲನೆ ನಡೆಯಲಿದ್ದು, ನವೆಂಬರ್ 21 ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನ. ಡಿಸೆಂಬರ್ 5ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 9ರಂದು ಹುಣಸೂ ರಿನ ಡಿ.ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಕೆ.ಆರ್.ಪೇಟೆಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ.

ಹುಣಸೂರಲ್ಲಿ 2,26,920 ಮತದಾರರು: ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ 1,12.770 ಮಹಿಳೆಯರು, ಇತರ ನಾಲ್ವರು ಸೇರಿ ಒಟ್ಟು 2,26,920 ಮತದಾರರಿದ್ದಾರೆ (ಪರಿ ಷ್ಕರಣೆ ಪ್ರಗತಿಯಲ್ಲಿರುವುದರಿಂದ ಮತದಾರರ ಸಂಖ್ಯೆ ಹೆಚ್ಚಾಗ ಬಹುದು). ಆ ಪೈಕಿ 2,235 ವಿಶೇಷಚೇತನ ಮತದಾರ ರಿದ್ದು, ಕ್ಷೇತ್ರದಾದ್ಯಂತ 274 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಕುಡಿಯುವ ನೀರು, ಶೌಚಾಲಯ, ವಿದ್ಯುತ್ ಸಂಪರ್ಕ, ರ್ಯಾಂಪ್ ಸೇರಿದಂತೆ ಎಲ್ಲಾ ಮತಗಟ್ಟೆಗಳಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲಾಗಿದೆ. 546 ಬ್ಯಾಲೆಟ್ ಯೂನಿಟ್ 540 ಕಂಟ್ರೋಲ್ ಯೂನಿಟ್ ಹಾಗೂ 527 ವಿವಿಪ್ಯಾಟ್ ಯೂನಿಟ್ ಗಳನ್ನು ಚುನಾವಣೆಗೆ ಬಳಸಲಾಗುತ್ತಿದೆ. ಮತ ಯಂತ್ರಗಳನ್ನು ಹುಣಸೂರಿನ ನಗರಸಭೆ ಕಾರ್ಯಾಲಯದ ಕಟ್ಟಡದ ವೇರ್‍ಹೌಸ್‍ನಲ್ಲಿ ಇರಿಸಲಾಗಿದ್ದು, ಪೊಲೀಸ್ ಭದ್ರತೆ ಹಾಗೂ ಸಿಸಿಟಿವಿಗಳನ್ನು ಅಳವಡಿಸಲಾಗಿದೆ.

ಕಂಟ್ರೋಲ್ ರೂಂ: ಚುನಾವಣೆ ಹಿನ್ನೆಲೆಯಲ್ಲಿ ಮೈಸೂ ರಿನ ಡಿಸಿ ಕಚೇರಿಯಲ್ಲಿ 1077 ಹಾಗೂ 1950 ಕಂಟ್ರೋಲ್ ರೂ.ಗಳನ್ನು ತೆರೆಯಲಾಗಿದ್ದು, ಹುಣಸೂರು ಉಪವಿಭಾಗಾ ಧಿಕಾರಿ ಕಚೇರಿ 08222-252073 ಹಾಗೂ ಹುಣಸೂರು ತಾಲೂಕು ಕಚೇರಿ 08222-252040ಗಳಿಗೂ ಸಾರ್ವಜನಿ ಕರು ಚುನಾವಣಾ ಅಕ್ರಮಗಳು, ದೂರು ಅಥವಾ ಮಾಹಿತಿ ಗಾಗಿ ಸಂಪರ್ಕಿಸಬಹುದು. ಮತಗಟ್ಟೆಗಳಿಗೆ ಓರ್ವ ಅಧ್ಯ ಕ್ಷಾಧಿಕಾರಿ, ಮೂವರು ಮತಗಟ್ಟೆ ಅಧಿಕಾರಿಗಳಂತೆ ಕ್ಷೇತ್ರ ದಾದ್ಯಂತ 1315 ಸಿಬ್ಬಂದಿಗಳನ್ನು
ನೇಮಿಸಲಾಗಿದೆ. ನವೆಂಬರ್ 18ರೊಳಗೆ ಚುನಾವಣಾ ವೀಕ್ಷಕರು ಹಾಗೂ 20ರೊಳಗೆ ವೆಚ್ಚ ವೀಕ್ಷಕರು ಆಗಮಿಸಲಿದ್ದು, ಹೊಸದಾಗಿ ನೇಮಕವಾಗಿರುವ ಹುಣಸೂರು ಉಪವಿಭಾಗಾಧಿಕಾರಿ ಪೂವಿತಾ ಅವರು ಉಪಚುನಾವಣಾಧಿಕಾರಿಯಾಗಿದ್ದು, ಅವರ ಕಚೇರಿಯಲ್ಲೇ ನಾಮಪತ್ರಗಳನ್ನು ಸ್ವೀಕರಿಸಲಾಗುವುದು.

6 ಚೆಕ್‍ಪೋಸ್ಟ್‍ಗಳು: ಮನುಗನಹಳ್ಳಿ, ದೊಡ್ಡೆಕೊಪ್ಪಲು ಸೇರಿದಂತೆ ಹುಣಸೂರು ಕ್ಷೇತ್ರದಾದ್ಯಂತ 6 ಚೆಕ್‍ಪೋಸ್ಟ್‍ಗಳನ್ನು ಸ್ಥಾಪಿಸಲಾಗಿದ್ದು, ವಾಹನಗಳ ತೀವ್ರ ತಪಾಸಣೆ ಮಾಡಲಾಗುತ್ತಿದೆ. ನಿಗದಿಗಿಂತ ಹೆಚ್ಚು ಹಣ, ಬೆಲೆ ಬಾಳುವ ವಸ್ತು, ಚಿನ್ನ-ಬೆಳ್ಳಿ ಸಾಗಣೆ ಮಾಡುವವರು ಅದಕ್ಕೆ ಸಂಬಂಧಿಸಿದ ಪೂರಕ ದಾಖಲೆಗಳನ್ನು ತೋರಿಸಬೇಕು.

1 ಸಾವಿರ ಪೊಲೀಸ್ ಸಿಬ್ಬಂದಿ: ಉಪಚುನಾವಣೆಗೆ ಅಧಿಕಾರಿಗಳು ಸೇರಿ ಒಟ್ಟು 1 ಸಾವಿರ ಪೊಲೀಸ್ ಸಿಬ್ಬಂದಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. 5 ಫ್ಲೈಯಿಂಗ್ ಸ್ಕ್ವಾಡ್, 6 ಸಿಪಿಐ ಮೊಬೈಲ್ ಸ್ಕ್ವಾಡ್‍ಗಳನ್ನು ವ್ಯವಸ್ಥೆ ಮಾಡುತ್ತಿರುವುದಾಗಿ ರಿಷ್ಯಂತ್ ಅವರು ತಿಳಿಸಿದ್ದಾರೆ. ಲೈಸನ್ಸ್‍ದಾರರಿಂದ ಗನ್‍ಗಳನ್ನು ಠೇವಣಿ ಇರಿಸಿಕೊಳ್ಳಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಸಮಾಜಘಾತುಕ ಚಟುವಟಿಕೆಗಳಲ್ಲಿ ಭಾಗಿಯಾಗುವ ಆಸಾಮಿಗಳನ್ನು ವಶಕ್ಕೆ ಪಡೆಯಲಾಗುವುದು ಎಂದೂ ತಿಳಿಸಿದರು. ಚುನಾವಣಾ ತಹಶೀಲ್ದಾರ್ ಬಿ.ರಾಮಪ್ರಸಾದ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಕೆ.ಆರ್‍ಪೇಟೆಯಲ್ಲಿ 2,08,384 ಮತದಾರರರು: ಕೃಷ್ಣರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 258 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಕ್ಷೇತ್ರದಲ್ಲಿ ಒಟ್ಟು 2,08,384 ಮತದಾರರಿದ್ದು, ಇದರಲ್ಲಿ 1,05,848 ಪುರುಷ, 1,02,533 ಮಹಿಳಾ ಹಾಗೂ ಇತರೆ 03 ಮಂದಿ ಮತದಾರರಿದ್ದಾರೆ. ನ.18ರವರೆಗೆ ಮತದಾರರ ಪಟ್ಟಿಗೆ ಹೆಸರು ಸೇರಿಸಿಕೊಳ್ಳಲು (ಫಾರಂ 6ನೀಡಿ) ಅವಕಾಶವಿದೆ. ನಂತರ ಯಾರನ್ನೂ ಮತ ಪಟ್ಟಿಗೆ ಸೇರಿಸಿಕೊಳ್ಳುವುದಿಲ್ಲ ಎಂದು ಡಾ.ಎಂ.ವಿ.ವೆಂಕಟೇಶ್ ಹೇಳಿದ್ದಾರೆ.

ಜಿಲ್ಲೆಯಲ್ಲೂ ನೀತಿ ಸಂಹಿತೆ: ಕೃಷ್ಣರಾಜ ಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾಗಿದ್ದು, ಇದರನ್ವಯ ಕ್ಷೇತ್ರದಲ್ಲಿ ಎಲ್ಲಾ ಖಾಸಗಿ ಹಾಗೂ ಸರ್ಕಾರಿ ಪ್ಲ್ಲೆಕ್ಸ್‍ಗಳನ್ನು ತೆರವುಗೊಳಿಸಲಾಗುವುದು. ಕಟ್ಟುನಿಟ್ಟಾಗಿ ನೀತಿ ಸಂಹಿತೆ ಜಾರಿ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಉಳಿದಂತೆ ಜಿಲ್ಲೆಯಲ್ಲೂ ನೀತಿ ಸಂಹಿತೆ ಜಾರಿಯಾಗಿದೆ. ಯಾವುದೇ ಅಭಿವೃದ್ಧಿ ಕೆಲಸ ಮಾಡಬೇಕಾದರೂ ಜಿಲ್ಲಾ ಚುನಾವಣಾ ಅಧಿಕಾರಿಗಳ ಗಮನಕ್ಕೆ ತಂದು ಕಾಮಗಾರಿ ಮಾಡುವುದು ಅನಿವಾರ್ಯವಾಗಿದೆ ಎಂದರು.

ವೀP್ಷÀಕರ ತಂಡ ಕಾರ್ಯ: ಉಪ ಚುನಾವಣೆಗಾಗಿ 516 ಕಂಟ್ರೋಲ್ ಯೂನಿಟ್, 516 ಬ್ಯಾಲೆಟ್ ಯೂನಿಟ್, 516 ವಿವಿ ಪ್ಯಾಟ್ ಬಳಕೆ ಮಾಡಲಾಗುವುದು. ಅಲ್ಲದೇ ಕ್ಷೇತ್ರ ವ್ಯಾಪ್ತಿಯಲ್ಲಿ ಒಬ್ಬ ನೋಡಲ್ ಅಧಿಕಾರಿ, 4 ಸ್ಥಿರ ಜಾಗೃತ ತಂಡ, 6 ಸಂಚಾರಿ ತಪಾಸಣಾ ದಳ, 3 ವಿಡಿಯೋ ಜಾಗೃತಿ ತಂಡ, 1 ವಿಡಿಯೋ ವೀಕ್ಷಣಾ ತಂಡ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಯೋಗೇಶ್, ವಾರ್ತಾಧಿಕಾರಿ ಟಿ.ಕೆ.ಹರೀಶ್ ಉಪಸ್ಥಿತರಿದ್ದರು.

ಒಂದೆಡೆ ಹುಣಸೂರಿಗೆ ಮಾತ್ರ ನೀತಿಸಂಹಿತೆ, ಕೆ.ಆರ್.ಪೇಟೆಯದ್ದು ಇಡೀ ಮಂಡ್ಯ ಜಿಲ್ಲೆಗೇ ಅನ್ವಯ
ಮೈಸೂರು, ನ.11(ಆರ್‍ಕೆ)- ಉಪಚುನಾವಣೆ ನೀತಿಸಂಹಿತೆಯು ಹುಣಸೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಮಾತ್ರ ಅನ್ವಯವಾಗಿರುತ್ತದೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಪ್ರಕಟಿಸಿದ್ದು, ಆದರೆ ಕೆ.ಆರ್.ಪೇಟೆ ವಿಧಾನ ಸಭೆ ಉಪಚುನಾವಣೆ ನೀತಿ ಸಂಹಿತೆ ಇದೇ ಮಂಡ್ಯ ಜಿಲ್ಲೆಗೆ ಅಳವಡಿಕೆಯಾಗುತ್ತದೆ ಎಂದು ಮಂಡ್ಯ ಡಿಸಿ ಡಾ.ಎಂ.ವಿ.ವೆಂಕಟೇಶ್ ಸ್ಪಷ್ಟಪಡಿಸಿದ್ದಾರೆ. ನಗರಪಾಲಿಕೆಗಳಿರುವ ಜಿಲ್ಲೆಗಳಲ್ಲಿ ಉಪಚುನಾವಣೆ ನಡೆಯುತ್ತಿರುವ ವಿಧಾನಸಭಾ ಕ್ಷೇತ್ರಗಳಲ್ಲಿ ಮಾತ್ರ ನೀತಿಸಂಹಿತೆ ಜಾರಿಯಲ್ಲಿರುತ್ತದೆ. ಉಳಿದ ಕ್ಷೇತ್ರಗಳಲ್ಲಿ ಮಾತ್ರ ಇಡೀ ಜಿಲ್ಲೆಗೆ ಅನ್ವಯವಾಗು ತ್ತದೆ ಎಂದು ಭಾರತ ಚುನಾವಣಾ ಆಯೋಗವು ನಿರ್ದೇಶನ ನೀಡಿದೆ. ಮಾದರಿ ನೀತಿಸಂಹಿತೆ ಹಾಗೂ ಅಭ್ಯರ್ಥಿಗಳ ವೆಚ್ಚದ ಮೇಲೆ ನಿಗಾ ಇಡಲು ತಂಡಗಳನ್ನು ರಚಿಸಲಾಗಿದ್ದು, ಸೆಕ್ಟರ್ ಆಫೀಸರ್, ಫ್ಲೈಯಿಂಗ್ ಸ್ಕ್ವಾಡ್, ಸ್ಟ್ಯಾಟಿಕ್ ಸರ್ವಲನ್ಸ್ ಟೀಂ, ವೀಡಿಯೋ ವೀವಿಂಗ್ ಟೀಂ, ವೀಡಿಯೋ ಸರ್ವಲನ್ಸ್ ಟೀಂಗಳನ್ನು ರಚಿಸಲಾಗಿದೆ. ಸರ್ಕಾರಿ ಕಟ್ಟಡಗಳು, ಸಾರ್ವಜನಿಕ ಸ್ಥಳಗಳಲ್ಲಿ ಗೋಡೆ ಬರಹಗಳು, ಪೋಸ್ಟರ್‍ಗಳು, ಬ್ಯಾನರ್, ಕಟೌಟ್, ಹೋರ್ಡಿಂಗ್ಸ್, ಧ್ವಜಗಳಂತಹ ನೀತಿಸಂಹಿತೆ ಉಲ್ಲಂಘನೆಯಾಗುವ ಯಾವ ಪರಿಕರಗಳಿಲ್ಲದಂತೆ ನೋಡಿಕೊಳ್ಳಬೇಕು, ರಾಜಕೀಯ ವ್ಯಕ್ತಿಗಳ ಜಾಹೀರಾತು ಫಲಕಗಳನ್ನು ತೆರವುಗೊಳಿಸಬೇಕು, ಸರ್ಕಾರಿ ವೆಬ್‍ಸೈಟ್‍ಗಳಲ್ಲಿ ರಾಜಕೀಯ ವ್ಯಕ್ತಿಗಳು, ಸಚಿವರ ಭಾವಚಿತ್ರವಿಲ್ಲದಂತೆ ನೋಡಿಕೊಳ್ಳಬೇಕು ಎಂದೂ ಚುನಾವಣಾ ಆಯೋ ಗವು ತಿಳಿಸಿದೆ. ಹುಣಸೂರು ಕ್ಷೇತ್ರ ಹೊರತುಪಡಿಸಿ ಮೈಸೂರು ಜಿಲ್ಲೆಯ ಇತರೆಡೆ ಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿಪೂಜೆ, ಟೆಂಡರ್ ಪ್ರಕ್ರಿಯೆ, ಸಭೆ-ಸಮಾರಂಭಗಳು ನಡೆಯಲು ಅಭ್ಯಂತರವಿಲ್ಲವಾದರೂ, ಯಾವುದೇ ಕಾರ್ಯಕ್ರಮ ಉಪಚುನಾವಣೆ ನಡೆಯುತ್ತಿರುವ ಹುಣಸೂರು ಕ್ಷೇತ್ರಕ್ಕೆ ಸಂಬಂಧಿಸಿದ್ದಾಗಿರಬಾರದು ಎಂದು ಮೈಸೂರು ಡಿಸಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ.

ಮೊದಲ ದಿನ 6 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ
ಬೆಂಗಳೂರು: ಶಾಸಕರ ರಾಜೀ ನಾಮೆಯಿಂದ ತೆರವುಗೊಂಡಿದ್ದ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿ ರುವ ಉಪಚುನಾವಣೆಗೆ ಎರಡನೇ ಅವಧಿಯ ನಾಮಪತ್ರ ಸಲ್ಲಿಕೆಯ ಮೊದ ಲನೇ ದಿನವೇ 6 ಅಭ್ಯರ್ಥಿಗಳಿಂದ ನಾಮಪತ್ರಗಳು ಸಲ್ಲಿಕೆಯಾಗಿವೆ.

ಶಾಸಕರು ರಾಜೀನಾಮೆ ನೀಡಿದ ಬಳಿಕ ವಿಧಾನಸಭೆಯ ಸಭಾಧ್ಯಕ್ಷ ರಮೇಶ್ ಕುಮಾರ್ ಎಲ್ಲರನ್ನು ಅನರ್ಹಗೊ ಳಿಸಿ, ತೀರ್ಪು ನೀಡಿದ್ದರು. ಇದಾದ ಬಳಿಕ ಅನರ್ಹರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಈ ನಡುವೆ ಕೇಂದ್ರ ಚುನಾವಣಾ ಆಯೋಗ ಸಭಾಧ್ಯಕ್ಷರು ನೀಡಿದ ತೀರ್ಪಿನ ಆಧಾರದ ಮೇಲೆ ಉಪ ಚುನಾವಣೆಯನ್ನು ಘೋಷಣೆ ಮಾಡಿತ್ತಾದರೂ, ಸುಪ್ರೀಂಕೋರ್ಟ್‍ನ ನಿರ್ದೇಶನದಂತೆ ಚುನಾವಣೆಯನ್ನು ಡಿ.5ಕ್ಕೆ ಮುಂದೂಡಲಾಗಿತ್ತು. ಕಳೆದ ಬಾರಿ ಚುನಾವಣಾ ಅಧಿಸೂಚನೆ ಹೊರ ಡಿಸಿದ್ದ ಸಂದರ್ಭದಲ್ಲಿಯೇ ಹಲವು ರಾಜ ಕೀಯ ಪಕ್ಷಗಳಿಂದ ಅಭ್ಯರ್ಥಿಗಳು ನಾಮ ಪತ್ರ ಸಲ್ಲಿಸಿದ್ದರು. ಇದನ್ನೂ ಪರಿಗ ಣಿಸಿರುವ ಹಿನ್ನೆಲೆಯಲ್ಲಿ ಒಟ್ಟಾರೆ 35 ಅಭ್ಯರ್ಥಿಗಳಿಂದ 36 ನಾಮಪತ್ರಗಳು ಸಲ್ಲಿಕೆಯಾದಂತಾಗಿದೆ.

ಎಲ್ಲೆಲ್ಲಿ ಎಷ್ಟು: ಅಥಣಿ- 6, ಕಾಗ ವಾಡ-5, ಗೋಕಾಕ-2, ಯಲ್ಲಾಪುರ -4, ಹಿರೇಕೆರೂರು- 0, ರಾಣಿಬೆನ್ನೂರು -1, ವಿಜಯನಗರ-3, ಚಿಕ್ಕಬಳ್ಳಾಪುರ -1, ಕೆ.ಆರ್.ಪುರಂ-4, ಯಶವಂತ ಪುರ-4, ಮಹಾಲಕ್ಷ್ಮಿಲೇಔಟ್-0, ಶಿವಾಜಿನಗರ-2, ಹೊಸಕೋಟೆ-0, ಕೃಷ್ಣರಾಜಪೇಟೆ-1, ಹುಣಸೂರು- 2.

Translate »