ಖಾಸಗಿ ಬಸ್ ನಿಲ್ದಾಣ ರಸ್ತೆ ವಿಸ್ತರಣೆಗೆ ಚಾಲನೆ
ಕೊಡಗು

ಖಾಸಗಿ ಬಸ್ ನಿಲ್ದಾಣ ರಸ್ತೆ ವಿಸ್ತರಣೆಗೆ ಚಾಲನೆ

January 3, 2019

ಮಡಿಕೇರಿ:ನಗರದ ರೇಸ್ ಕೋರ್ಸ್ ರಸ್ತೆ ಬಳಿ ನಿರ್ಮಾಣಗೊಂಡಿ ರುವ ನೂತನ ಖಾಸಗಿ ಬಸ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಾಜಾಸೀಟು ರಸ್ತೆಯ ವಿಸ್ತರಣೆ ಕಾರ್ಯಕ್ಕೆ ಕೊನೆಗೂ ಚಾಲನೆ ನೀಡಲಾಯಿತು.

ಆರಂಭಿಕ ಚಿಂತನೆಯಂತೆ ಬಸ್‍ಗಳ ಸಂಚಾ ರಕ್ಕೆ ಅನುಕೂಲವಾಗಲು ಈ ರಸ್ತೆ 15 ಮೀಟರ್‍ನಷ್ಟು ಅಗಲವಿರಬೇಕೆಂದು ಯೋಜನೆ ರೂಪಿಸಲಾಗಿತ್ತು. ಆದರೆ ಯಾವುದೇ ಕಟ್ಟ ಡಗಳಿಗೆ ಹಾನಿಯಾಗದಂತೆ ಕೊಂಚ ರಿಯಾ ಯಿತಿ ನೀಡಿರುವ ನಗರಸಭೆ ಈಗ ಇರುವ ರಸ್ತೆಯಂಚಿನಿಂದ ತಲಾ ಎರಡೂವರೆ ಮೀಟ ರ್‍ನಷ್ಟು ವಿಸ್ತರಣೆಗೆ ಮುಂದಾಗಿದೆ. ಎರಡೂ ಬದಿಗಳಲ್ಲಿ ಇಷ್ಟೇ ವಿಸ್ತೀರ್ಣ ದಲ್ಲಿ ರಸ್ತೆ ವಿಸ್ತರಣೆಗೊಳ್ಳಲಿದ್ದು, ಜೆಸಿಬಿಗಳ ಮೂಲಕ ಬರೆಯನ್ನು ತೆರವುಗೊಳಿಸುವ ಕಾರ್ಯಕ್ಕೆ ನಗರಸಭೆ ಚಾಲನೆ ನೀಡಿದೆ.
ಎರಡೂವರೆ ಮೀಟರ್‍ನಲ್ಲಿ ತಲಾ ಒಂದು ಮೀಟರ್‍ನ್ನು ರಸ್ತೆಗೂ, ಉಳಿದ ತಲಾ ಒಂದೂವರೆ ಮೀಟರ್ ಪ್ರದೇಶವನ್ನು ಪಾದ ಚಾರಿ ಮಾರ್ಗಕ್ಕೂ ಬಳಸಿಕೊಳ್ಳಲು ನಿರ್ಧ ರಿಸಲಾಗಿದೆ. ನಗರದ ಅಭಿವೃದ್ಧಿ ದೃಷ್ಟಿ ಯಿಂದ ಈ ಭಾಗದ ನಿವಾಸಿಗಳು ರಸ್ತೆ ವಿಸ್ತರಣೆಗೆ ಸಂಪೂರ್ಣ ಸಹಕಾರ ನೀಡಿ ದ್ದಾರೆ ಎಂದು ನಗರಸಭಾ ಅಧ್ಯಕ್ಷೆ ಕಾವೇ ರಮ್ಮ ಸೋಮಣ್ಣ ತಿಳಿಸಿದ್ದಾರೆ.

ಅಸಮಾಧಾನ: ರಸ್ತೆ ವಿಸ್ತರಣೆಗೆ ಅಗತ್ಯ ವಿರುವ ಹಣವನ್ನು ನಗರಸಭೆ ಮೀಸಲಿ ಟ್ಟಿಲ್ಲ, ಅಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಬಸ್ ಗಳು ಸಂಚರಿಸುವುದರಿಂದ ಕೆಲವು ಕಡೆ ತಡೆಗೋಡೆ ನಿರ್ಮಿಸಲೇಬೇಕಾಗಿದೆ. ವೈಜ್ಞಾ ನಿಕ ರೂಪದಲ್ಲಿ ರಸ್ತೆ ವಿಸ್ತರಣೆ ಪ್ರಸ್ತುತ ಪರಿಸ್ಥಿತಿಯಲ್ಲಿ ಅಸಾಧ್ಯವಾಗಿದೆ. ಆದರೂ ರಸ್ತೆಯಂಚಿನಿಂದ ಎರಡು ಮೀಟರ್‍ನಷ್ಟು ಮಾತ್ರ ವಿಸ್ತರಿಸಲಾಗುತ್ತಿದೆ ಎಂದು ನಗರ ಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಟಿ.ಉಣ್ಣಿ ಕೃಷ್ಣನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜಕೀಯ ಮಾಡುತ್ತಿದ್ದಾರೆ: ಬಿಜೆಪಿಯ ವರು ರಸ್ತೆ ವಿಸ್ತರಣೆ ಕಾಮಗಾರಿ ಆರಂ ಭಿಸುವ ಸಂದರ್ಭ ರಾಜಕೀಯ ಮಾಡು ವುದಕ್ಕಾಗಿ ಆಕ್ಷೇಪ ವ್ಯಕ್ತಪಡಿಸಿದರು. ಆದರೆ ಸ್ಥಳೀಯ ನಿವಾಸಿಗಳು ನಗರಸಭೆಯ ಪ್ರಯ ತ್ನಕ್ಕೆ ಬೆಂಬಲ ಸೂಚಿಸಿದ್ದಾರೆ. ರಾಜಾಸೀಟು ರಸ್ತೆಯ ಎರಡು, ಮೂರು ಮನೆಗಳ ತಡೆ ಗೋಡೆಗಷ್ಟೇ ಹಾನಿಯಾಗಲಿದೆ. ಉಳಿದಂತೆ ಯಾರ ಮನೆಗೂ, ಕಟ್ಟಡಗಳಿಗೂ ಹಾನಿ ಯಾಗುವುದಿಲ್ಲ, ಬರೆಯನ್ನಷ್ಟೇ ತೆರವುಗೊ ಳಿಸಲಾಗುತ್ತಿದೆ. ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿಗಳ ವಸತಿ ಗೃಹಕ್ಕೆ ತೆರಳುವ ರಸ್ತೆ ಹದಗೆಡುವುದರಿಂದ ನಗರಸಭೆ ವತಿಯಿಂ ದಲೇ ಪರ್ಯಾಯ ರಸ್ತೆ ನಿರ್ಮಿಸಿ ಕೊಡಲಾಗುವುದೆಂದು ಕಾಂಗ್ರೆಸ್‍ನ ಹಿರಿಯ ನಗರಸಭಾ ಸದಸ್ಯ ಹೆಚ್.ಎಂ. ನಂದ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಜಿಲ್ಲಾಧಿಕಾರಿ ಮಾತಿಗೆ ಮನ್ನಣೆ: ಮಡಿ ಕೇರಿ ಜನತೆಯ ಹಲವು ವರ್ಷಗಳ ಬೇಡಿ ಕೆಯಾಗಿದ್ದ ನೂತನ ಖಾಸಗಿ ಬಸ್ ನಿಲ್ದಾ ಣದ ಕಾಮಗಾರಿ ಪೂರ್ಣಗೊಂಡ ನಂತರ ಉದ್ಘಾಟನೆಯಾಗಿ ಒಂದು ವರ್ಷ ಸಮೀ ಪಿಸಿದರೂ ಸಾರ್ವಜನಿಕರ ಸೇವೆಗೆ ಲಭ್ಯ ವಾಗದ ಕಾರಣ ಸಹಜವಾಗಿಯೇ ಜಿಲ್ಲಾ ಧಿಕಾರಿ ಶ್ರೀವಿದ್ಯಾ ಅವರು ತೀವ್ರ ಅಸಮಾ ಧಾನ ವ್ಯಕ್ತಪಡಿಸಿದ್ದರು. ಸುಮಾರು 4.90 ಕೋಟಿ ರೂ.ಗಳ ಯೋಜನೆ ಸದುಪ ಯೋಗವಾಗದೆ ಇರುವ ಬಗ್ಗೆ ಗಮನಿಸಿದ ಅವರು ಎರಡು ಸಭೆಗಳನ್ನು ನಡೆಸಿ ರಸ್ತೆ ವಿಸ್ತರಣೆಗೆ ಕ್ರಮ ಕೈಗೊಳ್ಳುವಂತೆ ನಗರ ಸಭೆಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದರು.

ಜಿಲ್ಲಾಧಿಕಾರಿಗಳ ಮಾತಿಗೆ ಮನ್ನಣೆ ನೀಡಿದ ನಗರಸಭೆಯ ಅಧಿಕಾರಿಗಳು ರಾಜಾ ಸೀಟು ರಸ್ತೆಯ ನಿವಾಸಿಗಳಿಗೆ ನೋಟಿಸ್ ನೀಡಿ ಅಭಿವೃದ್ಧಿ ಕಾರ್ಯಕ್ಕೆ ಸಹಕರಿಸುವಂತೆ ಮನವಿ ಮಾಡಿಕೊಂಡಿದ್ದರು. ಇದೀಗ ರಸ್ತೆ ವಿಸ್ತರಣೆಗೂ ಕ್ರಮ ಕೈಗೊಂಡಿರುವ ನಗರಸಭೆ ಇನ್ನು ಎರಡು ವಾರಗಳಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳಿಸುವ ವಿಶ್ವಾಸ ವ್ಯಕ್ತಪಡಿಸಿದೆ.

Translate »