ಮೈಸೂರು: ರಾಜ್ಯದ ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ಡಾ. ಅಜಯ್ ನಾಗಭೂಷಣ್ ಅವರು ಇಂದು ಬೆಂಗಳೂರಿನಿಂದ ರಾಜ್ಯದ ಎಲ್ಲಾ ಲೋಕಸಭಾ ಕ್ಷೇತ್ರ ಗಳ ಚುನಾವಣಾ ಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದರು.
ಮೈಸೂರಿನ ಜಿಲ್ಲಾ ಧಿಕಾರಿ ಕಚೇರಿಯಲ್ಲಿ ರುವ ವಿಡಿಯೋ ಕಾನ್ಫರೆನ್ಸ್ ಕೊಠಡಿಯಲ್ಲಿ ಉಪಸ್ಥಿತರಿದ್ದ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ಅಭಿರಾಮ್ ಜಿ. ಶಂಕರ್ ಅವರಿಗೆ, ಹೆದ್ದಾರಿಗಳಲ್ಲಿರುವ ಸ್ಟ್ಯಾಟಿಕ್ ಚೆಕ್‍ಪೋಸ್ಟ್‍ಗಳಲ್ಲಿ ದಿನದ 24 ಗಂಟೆಯೂ ವಾಹನಗಳನ್ನು ಕಟ್ಟುನಿಟ್ಟಾಗಿ ಪರಿಶೀಲಿಸಿ ರಶೀದಿ ಇಲ್ಲದ ವಸ್ತುಗಳು, ದಾಖಲೆ ರಹಿತ ನಗದನ್ನು ವಶಪಡಿಸಿಕೊಂಡು ಸಮಗ್ರ ಮಾಹಿತಿಯನ್ನು ಚುನಾವಣಾ ಆಯೋ ಗಕ್ಕೆ ಪ್ರತೀ ದಿನ ಸಲ್ಲಿಸಬೇಕೆಂದು ಡಾ. ಅಜಯ್ ನಾಗಭೂಷಣ್ ಸೂಚಿಸಿದರು.
ಅಬಕಾರಿ ಅಧಿಕಾರಿಗಳು, ಚುನಾವಣಾ ವೀಕ್ಷಕರು. ತಪಾಸಣೆ ವೇಳೆ ಸಿಕ್ಕಿದ ಲಿಕ್ಕರ್ ಮತ್ತಿತರ ವಸ್ತುಗಳನ್ನು ನಿಯಮಾನುಸಾರ ವಶಪಡಿಸಿಕೊಂಡು ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಿಸುವ ಮೂಲಕ ಚುನಾವಣಾ ಅಕ್ರಮಗಳಿಗೆ ಕಡಿವಾಣ ಹಾಕುವಂತೆಯೂ ನಿರ್ದೇಶನ ನೀಡಿದರು.
ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಪ್ರಚಾರದ ವೇಳೆ ಬಳಸುವ ವಾಹನಗಳು, ಭಾವಚಿತ್ರಗಳ ಫ್ಲೆಕ್ಸ್, ಕಟೌಟ್‍ಗಳು, ಸಭೆ-ಸಮಾರಂಭ, ಬಹಿರಂಗ ಸಭೆಗಳಲ್ಲಿ ಒದಗಿ ಸುವ ಊಟ-ತಿಂಡಿ-ತಂಪು ಪಾನೀಯ ಗಳ ಬಗ್ಗೆ ವೆಚ್ಚ ವೀಕ್ಷಕರು ಪಡೆಯುವ ಮಾಹಿತಿಗಳನ್ನು ಅಭ್ಯರ್ಥಿಗಳು ನೀಡುವ ಅಂಕಿ-ಅಂಶಗಳೊಂದಿಗೆ ತಾಳೆ ಮಾಡಿ ವ್ಯತ್ಯಾಸವಿದ್ದರೆ ಸರಿಪಡಿಸಿ ಪ್ರತೀ ಮೂರು ದಿನಗಳಿಗೊಮ್ಮೆ ಆಯೋಗಕ್ಕೆ ಕಳುಹಿಸಿ ಕೊಡಬೇಕೆಂದೂ ಡಾ. ಅಜಯ್ ನಾಗ ಭೂಷಣ್ ಸೂಚನೆ ನೀಡಿದರು.
1950 ಕಂಟ್ರೋಲ್ ರೂಂ: ಮೈಸೂ ರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆರಂಭಿಸಿ ರುವ ‘1950’ ಉಚಿತ ಕರೆಯ ಚುನಾ ವಣಾ ಕಂಟ್ರೋಲ್ ರೂಂನಲ್ಲಿ ಈವರೆಗೆ 3,472 ಕರೆಗಳನ್ನು ಸ್ವೀಕರಿಸಲಾಗಿದೆ.
ಪ್ರತೀ ದಿನ ಮತದಾರರ ಪಟ್ಟಿಯಲ್ಲಿ ನಮ್ಮ ಹೆಸರಿದೆಯಾ? ನಮ್ಮ ಓಟು ಯಾವ ಮತಗಟ್ಟೆಯಲ್ಲಿದೆ? ಎಂಬುದನ್ನು ತಿಳಿದು ಕೊಳ್ಳಲು ಜಿಲ್ಲೆಯಾದ್ಯಂತ ಜನರು ಕರೆ ಮಾಡುತ್ತಿದ್ದಾರೆ. ಬೆಳಿಗ್ಗೆ 6ರಿಂದ ಮಧ್ಯಾಹ್ನ 2ರವರೆಗೆ, ನಂತರ 2ರಿಂದ ರಾತ್ರಿ 10ರವ ರೆಗೆ, ನಂತರ ಬೆಳಿಗ್ಗೆ 6 ಗಂಟೆವರೆಗಿನ ಪಾಳಿ ಯಲ್ಲಿ ತಲಾ ಮೂವರು ಸಿಬ್ಬಂದಿ ಚುನಾ ವಣಾ ಕಂಟ್ರೋಲ್ ರೂಂ.ನಲ್ಲಿ ಕೆಲಸ ಮಾಡುತ್ತಿದ್ದು, ಸಮಗ್ರ ಮಾಹಿತಿಯನ್ನು ನ್ಯಾಷನಲ್ ಗ್ರಿವೆನ್ಸಸ್ ರಿಡ್ರೆಸಲ್ ಸಿಸ್ಟಂ (ಓಉಖS) ಪೋರ್ಟಲ್‍ಗೆ ಅಪ್‍ಲೋಡ್ ಮಾಡುತ್ತಿದ್ದಾರೆ. ಇಂದು ಬೆಳಿಗ್ಗೆ ಪಾಳಿ ಯಲ್ಲಿ ಬುಡಕಟ್ಟು ಅಭಿವೃದ್ಧಿ ಇಲಾಖೆಯ ಗುರುಪ್ರಸಾದ್, ಶಿಕ್ಷಣ ಇಲಾಖೆಯ ಆಲ್ಟಸ್ ಲೋಬೋ ಮತ್ತು ಸಿ.ಡಿ. ಚಂದ್ರು ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿ ಕರು ಕರೆ ಮಾಡಿದಾಗ ಸಿಸ್ಟಂನಲ್ಲಿ ನೋಡಿ ಕೇಳಿದ ಮಾಹಿತಿಯನ್ನು ನೀಡುತ್ತಿದ್ದರು.