ಸಿದ್ದಾಪುರ: ಕಾಮುಕರ ಅಟ್ಟಹಾಸಕ್ಕೆ ಬಲಿಯಾದ ಸಂಧ್ಯಾಳ ಕುಟುಂಬಕ್ಕೆ ಪರಿಹಾರ ನೀಡಲು ಮುಂದಾಗದ ತಾಲೂಕು ಆಡಳಿತದ ವಿರುದ್ಧ ಸಿದ್ದಾಪುರ ಗ್ರಾಮ ಪಂಚಾಯಿತಿ ಮುಂದೆ ಜಸ್ಟಿಸ್ ಫಾರ್ ಸಂಧ್ಯಾ ಹೋರಾಟ ಸಮಿತಿಯ ಪ್ರಮುಖರು ದಿಢೀರ್ ಪ್ರತಿಭಟನೆ ನಡೆಸಿದರು.
ಹತ್ಯೆಯಾಗಿ ಎರಡು ವಾರ ಕಳೆದರೂ ವಿರಾಜಪೇಟೆ ತಹಶೀಲ್ದಾರ್ ವಿದ್ಯಾರ್ಥಿನಿಯ ಮನೆಗೆ ಭೇಟಿ ನೀಡದ ಕಾರಣ ಹೋರಾಟ ಸಮಿತಿಯ ಪ್ರಮುಖರು, ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರರನ್ನು ತರಾಟೆಗೆ ತೆಗೆದುಕೊಂಡರು.
ಹೋರಾಟ ಸಮಿತಿಯ ತಂಡ ಮಂಗಳ ವಾರ ಕೊಡಗು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಸಂಧ್ಯಾಳ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು. ಘಟನೆ ನಡೆದು ಎರಡು ವಾರ ಕಳೆದರೂ ಸರಕಾರದ ಪ್ರತಿ ನಿಧಿಗಳು ಯಾರೂ ಕೂಡಾ ಸಂಧ್ಯಾಳ ಮನೆಗೆ ಭೇಟಿ ನೀಡದಿರುವುದರ ಬಗ್ಗೆ ಜಿಲ್ಲಾಧಿಕಾರಿಗಳ ಗಮನಸೆಳೆದರು. ಕೂಡಲೇ ವಿರಾಜಪೇಟೆ ತಹಶೀಲ್ದಾರರಿಗೆ ದೂರ ವಾಣಿ ಮೂಲಕ ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಆದರೆ ಸ್ಥಳಕ್ಕೆ ಬರಲು ವಿಳಂಬವಾದ ಕಾರಣ ದಿಢೀರ್ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಸುದ್ದಿ ತಿಳಿದು ನಂತರ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರರು ಬೇಡಿಕೆಗ ಳನ್ನು ತಿಳಿಸುವಂತೆ ಸೂಚಿಸಿದರು. ಈ ಸಂದರ್ಭ ತರಾಟೆಗೆ ತೆಗೆದುಕೊಂಡ ಪ್ರತಿ ಭಟನಾಕಾರರು, ಘಟನೆ ನಡೆದು ಎರಡು ವಾರಗಳು ಕಳೆದರೂ ಕನಿಷ್ಠ ಸಂಧ್ಯಾಳ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಲು ಸಾಧ್ಯವಾಗಿಲ್ಲ. ಜಿಲ್ಲಾಧಿಕಾರಿಗಳ ಸೂಚ ನೆಯ ಬಳಿಕ ಕಾಟಾಚಾರಕ್ಕೆ ಭೇಟಿ ನೀಡಿ ರುವ ಕ್ರಮವನ್ನು ಖಂಡಿಸಿದರು.
ಸಂಧ್ಯಾ ಕುಟುಂಬಕ್ಕೆ 25 ಲಕ್ಷ ರೂ. ಪರಿ ಹಾರ ಹಾಗೂ ಕುಟುಂಬದ ಸದಸ್ಯ ರೋರ್ವರಿಗೆ ಸರ್ಕಾರಿ ಕೆಲಸ ಕೊಡ ಬೇಕೆಂದು ಮನವಿ ಮಾಡಿದರು.
ತಹಶೀಲ್ದಾರ್ ಗೋವಿಂದ ರಾಜು ಮಾತ ನಾಡಿ, ಕಾರಣಾಂತರಗಳಿಂದ ಭೇಟಿ ನೀಡಲು ಸಾಧ್ಯವಾಗಲಿಲ್ಲ. ಸರಕಾರದ ಸವಲತ್ತುಗಳನ್ನು ಒದಗಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಪ್ರತಿಭಟನಾ ಸ್ಥಳಕ್ಕೆ ಬಂದ ಜಿಲ್ಲಾ ಪಂಚಾ ಯತಿ ಸದಸ್ಯೆ ಸರೀತಾ ಪೂಣಚ್ಚ ತಹಶೀ ಲ್ದಾರ್ ಅವರೊಂದಿಗೆ ಮಾತುಕತೆ ನಡೆಸಿದರು. ಸಂಧ್ಯಾಳ ಕುಂಟುಂಬಕ್ಕೆ ಸರಕಾರ ಪರಿಹಾರ ವನ್ನು ವಿಳಂಬ ಮಾಡದೆ ನೀಡಬೇಕೆಂದ ಅವರು, ಉಸ್ತುವಾರಿ ಸಚಿವರಿಗೆ ಮಾಹಿತಿ ನೀಡಲಾಗಿದೆ. ಸರಕಾರ ಸವಲತುಗಳನ್ನು ಕೊಡಿಸುವ ಭರವಸೆ ನೀಡಿದರು. ಈ ಸಂದರ್ಭ ಗ್ರಾಮ ಪಂಚಾಯತಿ ಅಧ್ಯಕ್ಷ ಎಂ.ಕೆ.ಮಣಿ, ಹೋರಾಟ ಸಮಿತಿಯ ಸಂಚಾಲಕ ಶಿವಪ್ಪ, ಪ್ರಮುಖರಾದ ಮುಸ್ತಫ, ವಿಶ್ವನಾಥ್, ಗಿರೀಶ್, ಜನಾರ್ದನ್, ಜಾಫರ್ ಅಲಿ, ಸುರೇಶ್, ಸೇರಿದಂತೆ ಇನ್ನಿತರರು ಇದ್ದರು.