ವೃತ್ತಿ ಕೌಶಲ, ವ್ಯಕ್ತಿತ್ವ ವಿಕಸನದಿಂದ ವಿದ್ಯಾರ್ಥಿ ಪ್ರಗತಿ-ಸಾಧನೆ
ಮೈಸೂರು

ವೃತ್ತಿ ಕೌಶಲ, ವ್ಯಕ್ತಿತ್ವ ವಿಕಸನದಿಂದ ವಿದ್ಯಾರ್ಥಿ ಪ್ರಗತಿ-ಸಾಧನೆ

January 1, 2019

ಮೈಸೂರು,ಡಿ.31(ಎಸ್‍ಪಿಎನ್)- ವಿದ್ಯಾರ್ಥಿ ದಿಸೆಯಲ್ಲೇ ವೃತ್ತಿ ಕೌಶಲ, ವ್ಯಕ್ತಿತ್ವ ವಿಕಸನ, ಸಾಮಾಜಿಕ ಮೌಲ್ಯಗಳನ್ನು ಅಳ ವಡಿಸಿಕೊಂಡರೆ, ಪ್ರತಿಯೊಬ್ಬ ವಿದ್ಯಾರ್ಥಿಯೂ ದೇಶದಲ್ಲಿ ಪ್ರಗತಿಯ ನಾಗಾಲೋಟದಲ್ಲಿ ತಮ್ಮ ಕೊಡುಗೆ ದಾಖಲಿಸಬಹುದು ಎಂದು ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಆದಿಚುಂಚನ ಗಿರಿ ಮಠದ ಪೀಠಾಧಿಪತಿ ಡಾ.ನಿರ್ಮಲಾ ನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ಮೈಸೂರು-ಬೆಂಗಳೂರು ರಸ್ತೆಯ ಕಲಾಮಂದಿರದಲ್ಲಿ ಆದಿಚುಂಚನಗಿರಿ ವಿದ್ಯಾ ಸಂಸ್ಥೆಗಳ ವಾರ್ಷಿಕೋತ್ಸವ ಸಮಾ ರಂಭದಲ್ಲಿ ಅವರು ಸೋಮವಾರ ಮಾತ ನಾಡಿದರು.
ಕಾರ್ಯಕ್ರಮದ ಮಧ್ಯೆ ಶಿಳ್ಳೆ ಹೊಡೆಯುವ ವಿದ್ಯಾರ್ಥಿಗಳು ಕೆಟ್ಟವ ರೆಂಬ ಅಭಿಪ್ರಾಯಕ್ಕೆ ನಾನು ಬರುವುದಿಲ್ಲ. ಬದಲಾಗಿ ಸಮಯ, ಸಂದರ್ಭಕ್ಕೆ ತಕ್ಕಂತೆ ತಮ್ಮ ಸಾಮಾಜಿಕ ನಡವಳಿಕೆಗಳನ್ನು ಸರಿಪಡಿಸಿಕೊಳ್ಳುವುದೇ ಉತ್ತಮ ವಿದ್ಯಾ ರ್ಥಿಯ ನಿಜವಾದ ಕಲಿಕೆ ಎಂದರು.

ಪ್ರತಿ ವಿದ್ಯಾರ್ಥಿಗೂ ವರ್ಷದಿಂದ ವರ್ಷಕ್ಕೆ ಕಲಿಕೆ ಸಾಕಷ್ಟಿರುತ್ತದೆ. ತಾವು ನಾನು ಏನನ್ನು ಕಲಿಯುತ್ತಿದ್ದೇವೆ ಎಂಬುದನ್ನು ವಿದ್ಯಾರ್ಥಿಗಳು ಮೊದಲು ಮನವರಿಕೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ, ಯಾವುದೇ ವಿಷಯದಲ್ಲಿ ರ್ಯಾಂಕ್ ಪಡೆದರೂ ಪ್ರಯೋ ಜನವಿಲ್ಲ. ಮುಂದಿನ ಜೀವನ ಕಟ್ಟಿಕೊಳ್ಳಲು ಸಹಕಾರಿಯಾಗುವುದಿಲ್ಲ. ಆದ್ದರಿಂದ ಪದವಿ ಹಂತದ ಕಲಿಕೆಯಲ್ಲಿ ತಾವು ಸಾಗಬೇಕಿ ರುವ ವಿಷಯವನ್ನು ಮೊದಲು ನಿರ್ಧ ರಿಸಿ, ವಿದ್ಯಾಭ್ಯಾಸ ಮುಂದುವರಿಸುವುದು ಉತ್ತಮ ಎಂದು ಸಲಹೆ ನೀಡಿದರು.

ಪಠ್ಯೇತರ ಚಟುವಟಿಕೆಗಳಲ್ಲಿ ಭಾಗಿ ಯಾಗುವ ವಿದ್ಯಾರ್ಥಿಗಳಲ್ಲಿ ಕ್ರಿಯಾ ಶೀಲತೆ, ಆತ್ಮಸ್ಥೈರ್ಯ, ಸಾಮಾಜಿಕ ಕಳ ಕಳಿ ಸೇರಿಕೊಳ್ಳುತ್ತದೆ. ಇತರೆ ಮೌಲ್ಯಗಳ ಬಗ್ಗೆ ಆತ್ಮವಿಮರ್ಶೆಗೆ ದಾರಿ ಮಾಡಿಕೊಡು ತ್ತದೆ. ಆದ್ದರಿಂದ ಎಲ್ಲಾ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗಿಯಾ ಗಬೇಕು. ತಮ್ಮ ಪಂಚೇಂದ್ರಿಯಗಳನ್ನು ನಿಯಂತ್ರಿಸುವ ಶಕ್ತಿಯನ್ನು ವಿದ್ಯಾರ್ಥಿ ದಿಸೆಯಲ್ಲಿ ಕಲಿತುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತಕುಮಾರ್ ಮಾತನಾಡಿ, ನಾನು 1984ರಲ್ಲಿ ಜೆಎಸ್‍ಎಸ್ ಪ್ರೌಢಶಾಲೆಯಲ್ಲಿ ಅರೆಕಾಲಿಕ ಶಿಕ್ಷಕನಾಗಿ ವೃತ್ತಿಜೀವನ ಆರಂಭಿಸಿ, ನಂತರ ಮೈಸೂರು ವಿವಿ ಯಲ್ಲಿ ಪ್ರೊಫೆಸರ್ ಹಾಗೂ ಕುಲಪತಿ ಹುದ್ದೆ ಅಲಂಕರಿಸಿದ್ದೇನೆ. ವೃತ್ತಿ ಜೀವನ ದಲ್ಲಿ ಪ್ರೌಢಶಾಲಾ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸಿದ ತೃಪ್ತಿ, ಈ ಹುದ್ದೆಯಲ್ಲಿ ಸಿಗ ಲಿಲ್ಲ ಎಂದು ತಿಳಿಸಿದರು.

ಬಿಜಿಎಸ್ ವಿದ್ಯಾಸಂಸ್ಥೆ ಪ್ರವೇಶಿಸಿದ ವಿದ್ಯಾರ್ಥಿಯ ಮೊದಲ ಕಲಿಕೆ ಶಿಸ್ತು, ಸಾಮಾಜಿಕ ನಡವಳಿಕೆ, ವ್ಯಕ್ತಿತ್ವ ವಿಕಸನ ಹಾಗೂ ನೈತಿಕ ಮೌಲ್ಯಗಳ ಬಗ್ಗೆ ಪರಿ ಚಯ. ಇಂಥ ಶಿಕ್ಷಣ ಎಲ್ಲಾ ವಿದ್ಯಾಸಂಸ್ಥೆ ಗಳಲ್ಲಿ ದೊರೆಯುವುದಿಲ್ಲ. ಓರ್ವ ವಿದ್ಯಾರ್ಥಿ ಶಾಲಾ ಆವರಣದಲ್ಲಿ ಏನನ್ನು ಕಲಿಯು ತ್ತಾನೋ ಅದನ್ನೇ ವೃತ್ತಿ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾನೆ ಎಂದರು. ವಿದ್ಯಾರ್ಥಿಗಳು ಗ್ರಂಥಾಲಯದ ಪ್ರಯೋ ಜನ ಪಡೆದುಕೊಳ್ಳಬೇಕು. ಇದಕ್ಕೆ ಪ್ರಾಥ ಮಿಕ ಹಂತದಲ್ಲೇ ಪುಸ್ತಕ ಓದಿನ ಬಗ್ಗೆ ಶಿಕ್ಷಕರು ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.

ಇದೇ ವೇಳೆ 10 ಪ್ರತಿಭಾವಂತ ವಿದ್ಯಾರ್ಥಿ ಗಳಾದ ಅಭಿಷೇಕ್‍ಗೌಡ, ವೈಷ್ಣವಿ, ಗಗನ್ ಗೌಡ, ಸಿ.ಡಿ.ಮೋಹನ್, ಪಿ.ಸಿ.ಭೂಮಿಕಾ, ಗಾಯತ್ರಿ, ಶ್ರೀಲಕ್ಷ್ಮಿ, ಡಿ.ಕೀರ್ತನ್, ಪದ್ಮ ಪ್ರಿಯಾ ಜಿ.ನಾಯಕ್, ಎಸ್.ಕೀರ್ತನಾ ಅವರನ್ನು ಅಭಿನಂದಿಸಲಾಯಿತು. ನಂತರ ಕರ್ನಾಟಕ ಕಾವಲು ಪಡೆಯ ಕ್ಯಾಲೆಂ ಡರ್ ಬಿಡುಗಡೆಗೊಳಿಸಲಾಯಿತು. ಅಧ್ಯಕ್ಷ ಮೋಹನಕುಮಾರ್ ಗೌಡ ಸೇರಿದಂತೆ ಇತರೆ ಪದಾಧಿಕಾರಿಗಳು ಉಪಸ್ಥಿತರಿ ದ್ದರು. ಬಿಜಿಎಸ್ ವಿದ್ಯಾರ್ಥಿಗಳಿಂದ ಕೊಡ ಗಿನ ಸಂತ್ರಸ್ತರಿಗೆ 12 ಲಕ್ಷ ರೂ. ಹಣ ಸಂಗ್ರಹಿಸಿ ದೇಣಿಗೆ ನೀಡಲಾಗಿದೆ ಎಂದು ಆಯೋಜಕರು ಪ್ರಕಟಿಸಿದರು.

ವೇದಿಕೆಯಲ್ಲಿ ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ಕೆ.ಆರ್. ನಗರದ ಕಾಗಿನೆಲೆ ಮಠದ ಶ್ರೀ ಶಿವಾ ನಂದಪುರಿ ಸ್ವಾಮೀಜಿ, ಚುಂಚನಕಟ್ಟೆ ಅನ್ನ ದಾನೇಶ್ವರ ಸ್ವಾಮೀಜಿ, ಶ್ರೀಶೈಲನಾಥ ಸ್ವಾಮೀಜಿ, ವಿದ್ಯಾಧರನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಡಿಡಿಪಿಯು ಡಾ. ದಯಾನಂದ, ಮೈಸೂರು ವಿವಿ ಸಿಡಿಸಿ ನಿರ್ದೇಶಕ ಶ್ರೀಕಂಠಸ್ವಾಮಿ ಮತ್ತಿತರರಿದ್ದರು.

Translate »