ಸುತ್ತೂರು ಜಾತ್ರಾ ಮಹೋತ್ಸವ ಆರಂಭ
ಮೈಸೂರು

ಸುತ್ತೂರು ಜಾತ್ರಾ ಮಹೋತ್ಸವ ಆರಂಭ

February 2, 2019

ಮೈಸೂರು:ಶ್ರೀಮತ್ಸುತ್ತೂರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಸಂಸ್ಥಾಪನಾಚಾರ್ಯ ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವವು ಮೈಸೂರು ಜಿಲ್ಲೆ, ಸುತ್ತೂರು ಶ್ರೀ ಕ್ಷೇತ್ರದಲ್ಲಿ ಇಂದಿನಿಂದ ಆರಂಭವಾಯಿತು. ಫೆಬ್ರವರಿ 6ರವರೆಗೆ ನಡೆ ಯಲಿರುವ ಜಾತ್ರಾ ಮಹೋತ್ಸವವನ್ನು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಜಗದ್ಗುರು ಡಾ.ಶ್ರೀ ನಿರ್ಮಲಾನಂದನಾಥ ಮಹಾಸ್ವಾಮಿಗಳು ಇಂದು ಸುತ್ತೂರು ಶ್ರೀ ಕ್ಷೇತ್ರದಲ್ಲಿ ಉದ್ಘಾಟಿಸಿದರು.

ಸುತ್ತೂರು ಮಠಾಧೀಶ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ, ತಿರುವಂತನಪುರದ ಶಿವಗಿರಿ ಮಠದ ಅಧ್ಯಕ್ಷ ಶ್ರೀ ಸ್ವಾಮಿ ವಿಶುದ್ದಾ ನಂದಜೀ, ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮ ನಾಥ ಸ್ವಾಮೀಜಿ ಹಾಗೂ ರಾಮನಗರ ಶಾಖಾ ಮಠದ ಶ್ರೀ ಅನಂತೇಶ್ವರ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ನಡೆದ ಸಮಾರಂಭದಲ್ಲಿ ಮಾಜಿ ಶಾಸಕ ವಾಸು, ತರಳಬಾಳು ವಿದ್ಯಾಸಂಸ್ಥೆಗಳ ಪ್ರಧಾನ ಕಾರ್ಯದರ್ಶಿ ಡಾ.ಸಿದ್ದಯ್ಯ, ಅಮೇರಿಕಾದ ಶೀಲಾ ರಾಜಶೇಖರ್, ಶ್ರೀಮತಿ ಕವಿತಾ ಕೊಟ್ರಪ್ಪ, ವಿಜಯ್ ಕೊಟ್ರಪ್ಪ, ಬೆಂಗಳೂರು ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ, ಕರ್ನಾಟಕ ಚಲನಚಿತ್ರ ವಾಣಿಜ್ಯ
ಮಂಡಳಿ ಅಧ್ಯಕ್ಷ ಎಸ್.ಎ.ಚಿನ್ನೇಗೌಡ, ಬೆಂಗಳೂರು ವರ್ತಕ ಹೆಚ್.ಎಸ್.ಸೋಮ ಶೇಖರ್ ಭಾಗವಹಿಸಿದ್ದರು. ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀಕ್ಷೇತ್ರದಲ್ಲಿ ಆಯೋಜಿಸಿರುವ ಸಾಂಸ್ಕøತಿಕ ಮೇಳವನ್ನು ಚಮ್ಮಾಳೆ ಬಾರಿಸುವ ಮೂಲಕ ಶ್ರೀ ನಿರ್ಮಲಾನಂದ ಸ್ವಾಮೀಜಿ ಉದ್ಘಾಟಿಸಿದರು. ಇದೇ ವೇಳೆ 6 ದಿನಗಳ ಕಾಲ ನಡೆಯುವ ವಸ್ತು ಪ್ರದರ್ಶನ ಹಾಗೂ ಕೃಷಿ ಮೇಳವನ್ನು ಗಣ್ಯರು ಟೇಪು ಕತ್ತರಿಸುವ ಮೂಲಕ ಉದ್ಘಾಟಿಸಿದರು. ಸುತ್ತೂರಿನ ಜೆಎಸ್‍ಎಸ್ ಶಾಲಾ ಮಕ್ಕಳು ಪ್ರಾರ್ಥಿಸಿದರೆ, ಜಿ.ಎಲ್. ತ್ರಿಪುರಾಂತಕ ಸ್ವಾಗತಿಸಿದರು. ಸೋಮಸುಂದರಂ ಕಾರ್ಯಕ್ರಮ ನಿರೂಪಿಸಿದರೆ, ಕೆ.ಎಲ್.ಬಸಪ್ಪ ವಂದಿಸಿದರು. ಆರು ದಿನಗಳ ಕಾಲ ನಡೆಯಲಿರುವ ಜಾತ್ರಾ ಮಹೋ ತ್ಸವಕ್ಕೆ ಶ್ರೀಕ್ಷೇತ್ರ ಸುತ್ತೂರು ತಳಿರು-ತೋರಣ, ಪುಷ್ಪಗಳಿಂದ ಅಲಂಕೃತಗೊಂಡಿದ್ದು, ಗ್ರಾಮದೆಲ್ಲೆಡೆ ಹಬ್ಬದ ವಾತಾವರಣದಿಂದ ಕಂಗೊಳಿಸುತ್ತಿದೆ. ಬರುವ ಭಕ್ತರಿಗಾಗಿ ಕುಡಿಯುವ ನೀರು, ಊಟ-ವಸತಿ, ಸ್ವಚ್ಛತಾ ವ್ಯವಸ್ಥೆ ಮಾಡಲಾಗಿದೆ.

ದೇಶೀ ಆಟಗಳು, ಕಪಿಲಾ ನದಿಯಲ್ಲಿ ದೋಣಿ ವಿಹಾರ, ರಂಗೋಲಿ ಸ್ಪರ್ಧೆ, ಸೋಬಾನೆ ಪದ ಸ್ಪರ್ಧೆ, ಸಾಮೂಹಿಕ ವಿವಾಹ, ಭಜನಾ ಮೇಳ, ರಥೋತ್ಸವ, ಚಿತ್ರಕಲೆ, ಗಾಳಿಪಟ ಸ್ಪರ್ಧೆ, ದನಗಳ ಜಾತ್ರೆಗಳಿಗೆ ಸುತ್ತೂರು ಮಠ ಸಂಪೂರ್ಣ ಸಜ್ಜುಗೊಂಡಿದೆ. ಫೆಬ್ರವರಿ 4ರಂದು ರೈತರ ಆದಾಯ ದ್ವಿಗುಣ ಅವಕಾಶಗಳು ಹಾಗೂ ಸವಾಲುಗಳು’ ವಿಷಯ ಕುರಿತ ವಿಚಾರ ಸಂಕಿರಣ ಹಾಗೂ ‘ಹವಾಮಾನ ಬದಲಾವಣೆ ಮಾರುಕಟ್ಟೆ’ ಬಗ್ಗೆ ಕಾರ್ಯಾಗಾರ ನಡೆಯಲಿದೆ. ಜಾತ್ರಾ ಮಹೋತ್ಸವಕ್ಕೆ ಮೈಸೂರು ಜಿಲ್ಲೆ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಭಕ್ತಾದಿಗಳ ದಂಡೇ ಬರುತ್ತಿದ್ದು, ಅವರಿಗೆ ಕೆಎಸ್‍ಆರ್‍ಟಿಸಿಯು ವಿಶೇಷ ಜಾತ್ರಾ ಬಸ್ಸುಗಳ ವ್ಯವಸ್ಥೆ ಮಾಡಿದೆ.

ನಂಜನಗೂಡು ತಾಲೂಕಿನ ವಿವಿಧ ಠಾಣೆಗಳ ಪೊಲೀಸರನ್ನು ಸುತ್ತೂರು ಜಾತ್ರಾ ಮಹೋತ್ಸವದ ಬಂದೋಬಸ್ತ್‍ಗಾಗಿ ನಿಯೋಜಿಸಲಾಗಿದ್ದು, ಸ್ಥಳದಲ್ಲಿ ಭಕ್ತರಿಗೆ ದಾಸೋಹ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಮಾಡಲಾಗಿದೆ. ಸುತ್ತೂರಲ್ಲಿ ಆಟಿಕೆಗಳು, ತಿಂಡಿ-ತಿನಿಸು, ಹೋಟೆಲ್‍ಗಳು, ಮಹಿಳೆಯರ ಅಲಂಕಾರಿಕ ವಸ್ತುಗಳು ಸೇರಿದಂತೆ ನೂರಾರು ಅಂಗಡಿಗಳು ತಲೆ ಎತ್ತಿದ್ದು, ಸ್ಥಳದಲ್ಲಿ ಜನಜಂಗುಳಿಯೇ ಕಾಣಿಸುತ್ತಿದೆ.

ಸುತ್ತೂರಲ್ಲಿ ಇಂದು ಸಾರಿಗೆ ಬಸ್ ನಿಲ್ದಾಣ ಉದ್ಘಾಟನೆ
ನಂಜನಗೂಡು ತಾಲೂಕು ಸುತ್ತೂರು ಗ್ರಾಮದಲ್ಲಿ ನಾಳೆ (ಫೆ.2) ಬೆಳಿಗ್ಗೆ 9.30ಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣ ಲೋಕಾರ್ಪಣೆಗೊಳ್ಳಲಿದೆ. ಸುತ್ತೂರು ಮಠಾಧ್ಯಕ್ಷರಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿ ಗಳ ದಿವ್ಯ ಸಾನಿಧ್ಯದಲ್ಲಿ ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಬಸ್ ನಿಲ್ದಾಣ ಉದ್ಘಾಟನೆ ನೆರವೇರಿಸ ಲಿದ್ದು, ಸಮಾರಂಭದಲ್ಲಿ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, ಸಂಸದರುಗಳಾದ ಆರ್.ಧ್ರುವನಾರಾಯಣ್, ಪ್ರತಾಪ್ ಸಿಂಹ, ಎಲ್.ಆರ್.ಶಿವರಾಮೇಗೌಡ, ಸ್ಥಳೀಯ ಶಾಸಕ ಡಾ||ಯತೀಂದ್ರ, ಸಚಿವರುಗಳಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್ ಸೇರಿದಂತೆ ಹಲವಾರು ಗಣ್ಯರು ಭಾಗ ವಹಿಸಲಿದ್ದಾರೆಂದು ಸಾರಿಗೆ ಸಂಸ್ಥೆ ಪ್ರಕಟಣೆ ತಿಳಿಸಿದೆ.

Translate »