ಸುತ್ತೂರು ರಾಜೇಂದ್ರ ಶ್ರೀಗಳ ಸ್ಮರಣಾರ್ಥ ಕ್ರೀಡಾಕೂಟ
ಮೈಸೂರು

ಸುತ್ತೂರು ರಾಜೇಂದ್ರ ಶ್ರೀಗಳ ಸ್ಮರಣಾರ್ಥ ಕ್ರೀಡಾಕೂಟ

March 7, 2020

ಮೈಸೂರು, ಮಾ. 6- ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ ಸ್ಮರಣಾರ್ಥ ಅಂತರ ಕಾಲೇಜು ಪುರುಷರ ವಾಲಿಬಾಲ್, ಥ್ರೋಬಾಲ್ ಮತ್ತು ಬಾಲ್ ಬ್ಯಾಡ್‍ಮಿಂಟನ್ ಹಾಗೂ ಮಹಿಳೆಯರ ಥ್ರೋಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು.

ಮೈಸೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾ ಗದ ಕ್ರಿಕೆಟ್ ತರಬೇತುದಾರ ಡಾ.ಮನ್ಸೂರ್ ಅಹ್ಮದ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡುತ್ತಾ, ಜೆಎಸ್‍ಎಸ್ ಸಂಸ್ಥೆಗಳಲ್ಲಿ ಪಠ್ಯಕ್ಕೆ ಎಷ್ಟು ಪ್ರಾಧಾನ್ಯತೆ ನೀಡಲಾಗುತ್ತದೋ ಅಷ್ಟೇ ಪ್ರಾಮುಖ್ಯತೆಯನ್ನು ಕ್ರೀಡೆ ಹಾಗೂ ಪಠ್ಯೇತರ ಚಟು ವಟಿಕೆಗಳಿಗೂ ನೀಡÀಲಾಗುತ್ರಿದೆ. ಪ್ರತಿಯೊಂದು ಕಾಲೇಜು ಇಂತಹ ಕ್ರೀಡಾಕೂಟಗಳನ್ನು ನಡೆಸಿಕೊಂಡು ಬರಬೇಕು. ಆಗ ವಿದ್ಯಾರ್ಥಿಗಳ ನಡುವೆ ಸೌಹಾರ್ದತೆ ಬೆಳೆಯುತ್ತದೆ. ಸೋಲು ಗೆಲುವು ಎರಡನ್ನೂ ಸಮರ್ಥವಾಗಿ ಸ್ವೀಕರಿಸಿ, ಕ್ರೀಡಾ ಸ್ಫೂರ್ತಿಯಿಂದ ಪಾಲ್ಗೊಳ್ಳುವಂತೆ ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜೆಎಸ್‍ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಪ್ರೊ.ಎಸ್.ಶಿವಕುಮಾರಸ್ವಾಮಿ ಮಾತ ನಾಡಿ ಪುರುಷ ಮಹಿಳೆಯರೆಂಬ ಭೇದ ಭಾವವಿಲ್ಲದೆ ಎಲ್ಲರೂ ಕ್ರೀಡೆಗಳಲ್ಲಿ ಭಾಗವಹಿಸಬೇಕು. ಪ್ರತಿಯೊಬ್ಬರೂ ಒಂದಲ್ಲ ಒಂದು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು. ಕ್ರೀಡೆಯೂ ಮಾನಸಿಕ ಮತ್ತು ದೈಹಿಕ ಸ್ವಾಸ್ಥ್ಯವನ್ನು ಕಾಪಾ ಡುವ ಅತ್ಯಂತ ಸಮರ್ಥ ಮಾರ್ಗವಾಗಿದೆ ಎಂದರು.

ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕÀ ಪ್ರೊ. ಬಿ.ವಿ.ಸಾಂಬಶಿವಯ್ಯ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿದ್ಯಾರ್ಥಿನಿ ಕೆ.ಎನ್.ಸನ್ನಿಧಿ ಪ್ರಾರ್ಥಿಸಿದರು.

ಕಾಲೇಜು ಪ್ರಾಂಶುಪಾಲ ಪ್ರೊ.ಎಂ.ಮಹದೇವಪ್ಪ, ದೈಹಿಕ ಶಿಕ್ಷಣ ನಿರ್ದೇಶಕ ಎಂ.ಕಾರ್ತಿಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಎನ್‍ಸಿಸಿ ಅಧಿಕಾರಿ ಡಾ. ಎಲ್.ವಿನಯ್‍ಕುಮಾರ್ ವಂದಿಸಿದರು. ಎನ್‍ಎಸ್‍ಎಸ್ ಅಧಿಕಾರಿ ಎನ್.ಸಂತೋಷ್‍ಕುಮಾರ್ ನಿರೂಪಿಸಿದರು.

Translate »