ಶಿಕ್ಷಣಕ್ಕೆ ಸುತ್ತೂರು ಸ್ವಾಮೀಜಿ ಕೊಡುಗೆ ಅನನ್ಯ
ಹಾಸನ

ಶಿಕ್ಷಣಕ್ಕೆ ಸುತ್ತೂರು ಸ್ವಾಮೀಜಿ ಕೊಡುಗೆ ಅನನ್ಯ

June 29, 2018

ರಾಮನಾಥಪುರ: ‘ಇಂದಿನ ಆಧುನಿಕ ಜಗತ್ತಿನಲ್ಲಿ ಪ್ರತಿಯೊಬ್ಬರ ಅಭಿ ವೃದ್ಧಿಗೆ ಶಿಕ್ಷಣ ಮುಖ್ಯವಾಗಿದೆ ಎಂಬುದನ್ನು ಮನಗೊಂಡಿದ್ದ ಸುತ್ತೂರಿನ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರು ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಜೀವನಾದರ್ಶಗಳು ಮುಂದಿನ ಪೀಳಿಗೆಗೆ ದಾರಿ ದೀಪವಾಗಿದೆ’ ಎಂದು ಮೈಸೂರು ಶೀರಮಳ್ಳಿ ಮಠದ ಮುಮ್ಮಡಿ ಮುರುಗಿ ಸ್ವಾಮೀಜಿ ಹೇಳಿದರು.

ರಾಮನಾಥಪುರದ ಹತ್ತಿರವಿರುವ ನಿಡು ವಣಿ ಕೊಪ್ಪಲು ಗ್ರಾಮದ ಸಿದ್ದೇಶ್ವರ ದೇವ ಸ್ಥಾನದಲ್ಲಿ ನಡೆದ ಸುತ್ತೂರು ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ ಜಯಂತಿ ಅಂಗ ವಾಗಿ ಶಿವರಾತ್ರೀಶ್ವರ ಧಾರ್ಮಿಕದತ್ತಿಯಿಂದ ನಡೆದ 42 ವಟುಗಳಿಗೆ ಉಚಿತ ಶಿವದೀಕ್ಷಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಡಮಕ್ಕಳಿಗೆ ವಿದ್ಯೆ, ಜ್ಞಾನ, ಅನ್ನದಾ ಸೋಹ ನೀಡಿದ ಮಠಗಳಿಂದ ಇಂದು ಹಲವು ಬಡ ಕುಟುಂಬಗಳ ಭವಿಷ್ಯ ಉಜ್ವಲ ವಾಗಿದೆ. ಸುತ್ತೂರು ಮಠವು ವಿವಿಧ ಗ್ರಾಮೀಣ ಪ್ರದೇಶಗಳಲ್ಲಿ ಶೀವದೀಕ್ಷಾ ಕಾರ್ಯಕ್ರಮ ಗಳನ್ನು ಮಾಡಿಕೊಂಡು ಬರುತ್ತಿರುವುದಲ್ಲದೇ ಮಠವು ಸಾಮಾಜಿಕ, ಶೈಕ್ಷಣ ಕ, ಆಧ್ಯಾತ್ಮಿಕ ಕ್ಷೇತ್ರಕ್ಕೆ ನೀಡುತ್ತಿರುವ ಕೊಡುಗೆ ಅವಿಸ್ಮರಣೀಯವಾದುದು ಎಂದರು.

ಕಾರ್ಯಕ್ರಮದಲ್ಲಿ ಸುತ್ತೂರು ಜೆಎಸ್‍ಎಸ್ ಶಿವರಾತ್ರೀಶ್ವರ ಧಾರ್ಮಿಕ ದತ್ತಿ ಮುಖ್ಯಸ್ಥ ಸೋಮಶೇಖರ ಸ್ವಾಮೀಜಿ, ಸಂಚಾಲಕ ಬಸವಪಟ್ಟಣ ಪಂಚಾಕ್ಷರಿ, ಸುತ್ತೂರು ಚೇತನ್, ವೀರಶೈವ-ಲಿಂಗಾಯಿತ ವೇದಿಕೆ ತಾಲೂಕು ಅಧ್ಯಕ್ಷ ಎಂ.ಎನ್. ಕುಮಾರಸ್ವಾಮಿ, ಸದಸ್ಯರಾದ ಎನ್.ಸಿ.ಚಂದ್ರಶೇಖರ್, ನಿಂಗ ರಾಜು, ಶಂಕರಪ್ಪ, ಮಂಜು, ನಿಂಗರಾಜಪ್ಪ, ಪಾಪಣ್ಣ, ಬಸವರಾಜ್, ಸುರೇಶ್ ಸೇರಿ ದಂತೆ ಇತರರು ಹಾಜರಿದ್ದರು.

Translate »