ಮೈಸೂರು, ಸೆ.19(ಎಸ್‍ಬಿಡಿ)-ನಾಡಹಬ್ಬ ದಸರಾ ಮಹೋ ತ್ಸವಕ್ಕೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹಾಗೂ ದಸರಾ ಉದ್ಘಾಟಕರಾದ ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಅವರನ್ನು ಗುರುವಾರ ಅಧಿಕೃತವಾಗಿ ಆಹ್ವಾನಿಸಲಾಯಿತು. ವಸತಿ ಸಚಿವರೂ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಅರಮನೆಗೆ ತೆರಳಿ ಪ್ರಮೋದಾದೇವಿ ಒಡೆಯರ್ ಅವರನ್ನು ಹಾಗೂ ಮೈಸೂರಿನ ಕುವೆಂಪುನಗರದ ನಿವಾಸದಲ್ಲಿ ಎಸ್.ಎಲ್.ಭೈರಪ್ಪ ಅವರನ್ನು ಭೇಟಿ ಮಾಡಿ, ಫಲ ತಾಂಬೂಲ ನೀಡಿ, ಅಭಿನಂದಿಸುವ ಮೂಲಕ ದಸರಾ ಮಹೋತ್ಸವಕ್ಕೆ ರಾಜ್ಯ ಸರ್ಕಾರದ ಪರವಾಗಿ ಆಹ್ವಾನಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ…
ಅ.2ಕ್ಕೆ ಬಾನೆತ್ತರದಲ್ಲಿ ಚಿತ್ತಾರ ಮೂಡಿಸುವ ದಸರಾ ಏರ್‍ಶೋ
September 20, 2019ಮೈಸೂರು, ಸೆ.19(ಪಿಎಂ)-ದಸರಾ ಮಹೋ ತ್ಸವದ ವಿಶಿಷ್ಟ ಆಕರ್ಷಣೆ ಬಾನೆತ್ತರದಲ್ಲಿ ನಡೆಯುವ ವಿಮಾನಗಳ ಕರಾಮತ್ತು. ಇಂತಹ ವೈಮಾನಿಕ ವೈಶಿಷ್ಟ್ಯ `ಏರ್ ಶೋ’ ಈ ಬಾರಿ ಅ.2ರಂದು ನಡೆ ಯುವುದು ಬಹುತೇಕ ಖಚಿತವಾಗಿದೆ. ಕಳೆದ ವರ್ಷದ `ಏರ್ ಶೋ’ ಅಂತಹ ವೈವಿಧ್ಯತೆ ಇಲ್ಲದೆ, ಬಹುಬೇಗನೆ ಅಂತ್ಯಗೊಂಡಿತು ಎಂಬ ಸಾರ್ವ ಜನಿಕರ ಬೇಸರವನ್ನು ಗಂಭೀರವಾಗಿ ಪರಿಗಣಿಸಿ, ಈ ಬಾರಿ ಪರಿಪೂರ್ಣ `ಏರ್ ಶೋ’ ನೀಡಬೇಕೆಂದು ರಕ್ಷಣಾ ಸಚಿವಾಲಯಕ್ಕೆ ಮನವಿ ಸಹ ಮಾಡಲಾಗಿದೆ. ಹೀಗಾಗಿ ಏರ್ ಶೋ ನಡೆಯುವ ಬನ್ನಿಮಂಟಪದ ಕವಾಯತು ಮೈದಾನದಲ್ಲಿ…
ಸೆ.29ರಿಂದ 15 ದಿನ ದಸರಾ ಫಲಪುಷ್ಪ ಪ್ರದರ್ಶನ
September 20, 2019ಮೈಸೂರು, ಸೆ.19(ಎಂಟಿವೈ)-ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಮೈಸೂರಿನ ಕುಪ್ಪಣ್ಣ ಪಾರ್ಕ್‍ನಲ್ಲಿ ಸೆ.29ರಿಂದ ಅ.13 ರವರೆಗೆ 15 ದಿನ ನಡೆಯಲಿರುವ ಫಲ ಪುಷ್ಪ ಪ್ರದರ್ಶನದಲ್ಲಿ ಕಣ್ಮನ ಸೆಳೆಯುವ ಸಸ್ಯಕಾಶಿಯೊಂದಿಗೆ ಮಕ್ಕಳಿಗೆ ಅಮ್ಯೂಸ್ ಮೆಂಟ್ ಪಾರ್ಕ್ ಮುದ ನೀಡಲಿದೆ. ಬಾಂಬೆ ಮೂಲದ ಸಂಸ್ಥೆ ಸುರಕ್ಷತೆಗೆ ಆದ್ಯತೆ ನೀಡಿ ಆಟಿಕೆಗಳ ಜೋಡಣಾ ಕಾರ್ಯ ಈಗಾಗಲೇ ಆರಂಭಿಸಿದೆ. ದಸರಾ ಮಹೋತ್ಸವದ ಆರಂಭಕ್ಕೆ ಕೇವಲ 9 ದಿನ ಮಾತ್ರ ಬಾಕಿ ಇರುವುದರಿಂದ ಈ ಬಾರಿ ನವರಾತ್ರಿ ವೇಳೆ ವಿವಿಧೆಡೆಯಿಂದ ಬರುವ ಪ್ರವಾಸಿಗರಿಗೆ ಆಟೋಟ, ಫಲಪುಷ್ಪ ಪ್ರದರ್ಶನದಲ್ಲಿ…
ದಸರಾ ಫಲ-ಪುಷ್ಪ ಪ್ರದರ್ಶನ ಮತ್ತಷ್ಟು ಆಕರ್ಷಣೀಯಗೊಳಿಸಲು ಭಾರೀ ಸಿದ್ಧತೆ
September 17, 2019ಮೈಸೂರು,ಸೆ.16(ಎಸ್‍ಬಿಡಿ)- ಮೈಸೂರು ದಸರಾ ಮಹೋತ್ಸವದ ಅಂಗ ವಾಗಿ ಏರ್ಪಡಿಸಲಾಗುವ `ದಸರಾ ಫಲ- ಪುಷ್ಪ ಪ್ರದರ್ಶನ’ವನ್ನು ಈ ಬಾರಿ ಮತ್ತಷ್ಟು ಆಕರ್ಷಣೀಯವಾಗಿಸುವ ಪ್ರಯತ್ನ ನಡೆದಿದೆ. ಜಯಚಾಮರಾಜ ಒಡೆಯರ್ ವೃತ್ತ (ಹಾರ್ಡಿಂಜ್ ಸರ್ಕಲ್)ದ ಸಮೀಪ ವಿರುವ ಕುಪ್ಪಣ್ಣ ಪಾರ್ಕ್‍ನಲ್ಲಿ ಫಲ-ಪುಷ್ಪ ಪ್ರದರ್ಶನ ಆಯೋಜನೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ವ್ಯಾಪ್ತಿಯ 6 ನರ್ಸರಿಗಳಲ್ಲಿ ವಿವಿಧ ಜಾತಿ, ಬಣ್ಣದ 60 ಸಾವಿರಕ್ಕೂ ಹೆಚ್ಚು ಹೂವು ಹಾಗೂ ಅಲಂಕಾರಿಕಾ ಗಿಡಗಳನ್ನು ಕುಂಡದಲ್ಲಿ ಬೆಳೆಸಿ, ಪೋಷಿಸಲಾಗಿದೆ. ನಗರದ ಇಟ್ಟಿಗೆಗೂಡಿನಲ್ಲಿರುವ…
ಬಯಲು ರಂಗಮಂದಿರದಲ್ಲಿ ನಾಳೆಯಿಂದ ಸೆ.26ರವರೆಗೆ ಯುವ ಸಂಭ್ರಮ
September 16, 2019ಮೈಸೂರು: ಪ್ರಸಕ್ತ ಸಾಲಿನ ನಾಡ ಹಬ್ಬ ದಸರಾ ಮಹೋತ್ಸವದ ಮೊಟ್ಟ ಮೊದಲ ಕಾರ್ಯ ಕ್ರಮ ಯುವ ಸಂಭ್ರಮ ಸೆ.17ರಿಂದ ಆರಂಭವಾಗಿ ಸೆ.26ರವರೆಗೆ ನಡೆಯಲಿದ್ದು, ಮೈಸೂರು ವಿಶ್ವವಿದ್ಯಾ ನಿಲಯದ ಬಯಲು ರಂಗ ಮಂದಿರದಲ್ಲಿ ಹಲವು ಕಾಲೇಜುಗಳ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರಸ್ತುತಪಡಿಸಲಿದ್ದಾರೆ. ದಸರಾ ಮಹೋತ್ಸವದ ಸಂಭ್ರಮಕ್ಕೆ ಕಳೆಗಟ್ಟಲಿ ರುವ ಯುವ ಸಂಭ್ರಮ-2019ರಲ್ಲಿ ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳ 250ಕ್ಕೂ ಹೆಚ್ಚು ಕಾಲೇಜು ಗಳ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಕಲಾ ಪ್ರಾಕಾರಗಳನ್ನು ಅನಾವರಣಗೊಳಿಸಲಿದ್ದಾರೆ. ಸೆ.17 ರಂದು 20…
ದಸರೆಗಾಗಿ ಪುರಭವನ ಆವರಣದಲ್ಲಿ ತಾತ್ಕಾಲಿಕ ಪಾರ್ಕಿಂಗ್ ವ್ಯವಸ್ಥೆ
September 16, 2019ಮೈಸೂರು,ಸೆ.15(ಎಂಟಿವೈ)- ನಾಡ ಹಬ್ಬ ದಸರಾ ಮಹೋತ್ಸವದ ಹಿನ್ನೆಲೆ ಯಲ್ಲಿ ಅರಮನೆ ಸೇರಿದಂತೆ ವಿವಿಧೆಡೆ ಜರುಗಲಿರುವ ಸಾಂಸ್ಕøತಿಕ ಕಾರ್ಯ ಕ್ರಮಗಳನ್ನು ಕಣ್ತುಂಬಿಕೊಳ್ಳುವುದಕ್ಕೆ ಬರುವ ಪ್ರವಾಸಿಗರು ಹಾಗೂ ನಗರದ ಜನತೆಗೆ ಉಂಟಾಗಲಿರುವ ವಾಹನ ಪಾರ್ಕಿಂಗ್ ಸಮಸ್ಯೆಯನ್ನು ನೀಗಿಸುವುದಕ್ಕೆ ಮೈಸೂರು ನಗರ ಪಾಲಿಕೆ ಮುಂದಾಗಿದ್ದು, ಪುರಭವನದ ಆವರಣ ಹಾಗೂ ನಿರ್ಮಾಣ ಹಂತದಲ್ಲಿರುವ ಮಲ್ಟಿಲೆವೆಲ್ ಪಾರ್ಕಿಂಗ್ ಕಟ್ಟಡದಲ್ಲಿ ತಾತ್ಕಾಲಿಕವಾಗಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಿದೆ. ಮೈಸೂರಿನ ಹೃದಯ ಭಾಗವಾದ ಡಿ. ದೇವರಾಜ ಅರಸ್ ರಸ್ತೆ, ಸಯ್ಯಾಜಿರಾವ್ ರಸ್ತೆ ಸೇರಿದಂತೆ ವಿವಿಧೆಡೆ ಪಾರ್ಕಿಂಗ್ ಸಮಸ್ಯೆ…
ಮೈಸೂರು ದಸರಾ ಉತ್ಸವಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ, ಪಿ.ವಿ.ಸಿಂಧುಗೆ ಆಹ್ವಾನ
September 15, 2019ಬೆಂಗಳೂರು,ಸೆ.14(ಕೆಎಂಶಿ)-ವಿಶ್ವವಿಖ್ಯಾತ ದಸರಾಗೆ ಕೇಂದ್ರದ ಪ್ರಮುಖ ಸಚಿವರನ್ನು ಆಹ್ವಾನಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹಾಗೂ ಸ್ಥಳೀಯ ಶಾಸಕರಿಗೆ ಇಂದಿಲ್ಲಿ ಸೂಚಿಸಿದ್ದಾರೆ. ಮೈಸೂರು ದಸರಾಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಉಸ್ತು ವಾರಿ ಸಚಿವ ಸೋಮಣ್ಣ, ಮಾಜಿ ಸಚಿವ ಜಿ.ಟಿ.ದೇವೇಗೌಡ ಮತ್ತು ಸ್ವಾಗತ ಸಮಿತಿಯ ಶಾಸಕರು, ಪದಾಧಿಕಾರಿಗಳು ಇಂದು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ, ಮೈಸೂರು ದಸರಾಕ್ಕೆ ಆಹ್ವಾನಿಸಿದರು. ಈ ಸಂದರ್ಭದಲ್ಲಿ ದಸರಾ ಸಿದ್ಧತೆ ಬಗ್ಗೆ ಸಮಿತಿ ಯಿಂದ ಮಾಹಿತಿ ಪಡೆದ ಮುಖ್ಯಮಂತ್ರಿಯವರು, ಕಾವೇರಿ ಜಲಾನಯನ ಭಾಗದ ಜಲಾಶಯಗಳು…
ಮುಂದಿನ ವಾರ ಜಂಬೂ ಸವಾರಿ ಮಾರ್ಗಕ್ಕೆ 199 ಹೆಚ್ಚುವರಿ ಸಿಸಿ ಕ್ಯಾಮರಾ
September 15, 2019ಮೈಸೂರು,ಸೆ. 14(ಆರ್‍ಕೆ)- ದಸರಾ ಮಹೋತ್ಸವಕ್ಕೆ ಇನ್ನಿಲ್ಲದ ಬಂದೋಬಸ್ತ್ ಮಾಡಲು ಮುಂದಾಗಿರುವ ಪೊಲೀಸರು, ಜಂಬೂ ಸವಾರಿ ಸಾಗುವ ರಾಜ ಮಾರ್ಗಕ್ಕೆ ಹೆಚ್ಚುವರಿಯಾಗಿ 199 ಸಿಸಿ ಕ್ಯಾಮರಾ ಅಳವಡಿಸಲು ಸಿದ್ಧತೆ ನಡೆಸಿದ್ದಾರೆ. ಈ ಸಂಬಂಧ ಮೈಸೂರು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಅವರು ಅರಮನೆ ಆವರಣ, ರಾಜಮಾರ್ಗ, ಬನ್ನಿ ಮಂಟಪದ ಪಂಜಿನ ಕವಾಯತು ಮೈದಾನ ಸುತ್ತಮುತ್ತಲು ಖಾಯಂ ಆಗಿ ಅಳವಡಿಸಿ ರುವ 64 ಸಿಸಿ ಕ್ಯಾಮರಾಗಳ ಕಾರ್ಯ ವೈಖರಿಯನ್ನು ಈಗಾಗಲೇ ಪರಿಶೀಲಿಸಿ ದ್ದಾರೆ. 64ರ ಪೈಕಿ 5 ಕ್ಯಾಮರಾಗಳು ಕೆಟ್ಟು…
ದಸರಾ ಅಂಗವಾಗಿ ‘ಫಿಟ್ ಇಂಡಿಯಾ’ ಪರಿಕಲ್ಪನೆಯಡಿ ಯೋಗಾಸನ
September 15, 2019ಮೈಸೂರು, ಸೆ.14(ಎಂಕೆ)- ದಸರಾ ಅಂಗವಾಗಿ ‘ಫಿಟ್ ಇಂಡಿಯಾ’ ಪರಿ ಕಲ್ಪನೆಯಲ್ಲಿ ಮೈಸೂರಿಗರನ್ನು ಫಿಟ್ ಆಗಿಸಲು ವಿವಿಧ ಯೋಗಾಸನ ಪ್ರಕಾರ ಗಳನ್ನು ಆಯೋಜಿಸಲಾಗಿದೆ. ಸಾಂಸ್ಕøತಿಕ, ಪಾರಂಪರಿಕ, ಸ್ವಚ್ಛ ಮೈಸೂರನ್ನು ಆರೋಗ್ಯ ಮೈಸೂರ ನ್ನಾಗಿಸುವ ನಿಟ್ಟಿನಲ್ಲಿ ದಸರಾ ಆಚರಣೆ ವೇಳೆ ಹಮ್ಮಿಕೊಳ್ಳುವ ಯೋಗ ದಸರಾ ಕಾರ್ಯಕ್ರಮದಲ್ಲಿ ಯೋಗ ನೃತ್ಯ ರೂಪಕ, ಯೋಗ ವಾಹಿನಿ, ಯೋಗ ಸಂಭ್ರಮ, ಯೋಗ ಸರಪಳಿ, ಸ್ವಚ್ಛ ಸರ್ವೇಕ್ಷಣಾ ಯೋಗದಂತಹ ಬಗೆ ಬಗೆಯ ಕಾರ್ಯ ಕ್ರಮಗಳನ್ನು ರೂಪಿಸಲಾಗಿದೆ. ಸೆ.30 ರಂದು ಯೋಗ ದಸರಾ ಕಾರ್ಯಕ್ರಮ ಉದ್ಘಾಟನೆಯಾಗಲಿದ್ದು, ಕಳೆದ…
ಪ್ರತ್ಯೇಕ ಲೋಗೋ ನಿರ್ಮಾಣಕ್ಕೆ ಆಹ್ವಾನ
September 15, 2019ಮೈಸೂರು,ಸೆ.14-ದಸರಾ ಕ್ರೀಡಾ ಉಪ ಸಮಿತಿ ವತಿಯಿಂದ ದಸರಾ ಕ್ರೀಡೆಗೆ ಮಾನ್ಯತೆ ನೀಡಲು ದಸರಾ ಕ್ರೀಡಾಕೂಟ ಮುಖ್ಯಮಂತ್ರಿ ಕಪ್ ಎಂಬ ನಾಮ ಶೀರ್ಷಿಕೆ ಯಲ್ಲಿ ನಾಡಿನ ಕಲೆ, ಕ್ರೀಡೆ ಮತ್ತು ಸಂಸ್ಕøತಿಯನ್ನು ಒಳಗೊಂಡ ಪ್ರತ್ಯೇಕ ಲೋಗೋ ವನ್ನು ಸಿದ್ಧಪಡಿಸಲು ತೀರ್ಮಾನಿಸಲಾಗಿದೆ. ಜಿಲ್ಲೆ ಮತ್ತು ರಾಜ್ಯದ ಪ್ರಗತಿಪರ ಚಿಂತಕರು, ಸಂಘ ಸಂಸ್ಥೆಗಳು, ಶಾಲಾ-ಕಾಲೇಜಿನ ವಿದ್ಯಾರ್ಥಿ ಗಳು, ವೃತ್ತಿಪರರು ಲೋಗೋ ತಯಾರಿಸಿ ಸೆ.17ರೊಳಗೆ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಚಾಮುಂಡಿ ವಿಹಾರ ಕ್ರೀಡಾಂಗಣ, ನಜರ್‍ಬಾದ್, ಮೈಸೂರು ಇಲ್ಲಿಗೆ…